ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿ ಬ್ರಾಹ್ಮಣರು ಹಾಗೂ ಅರ್ಚಕರ ಮೇಲೆ ಕಾಲಿಡುವ ದೃಶ್ಯಕ್ಕೆ ಬ್ರಾಹ್ಮಣ ಮಹಾಸಭಾ ಮಂಡಳಿಯಿಂದ ಟೀಕೆ ವ್ಯಕ್ತವಾಗಿದ್ದು, ಇದೀಗ ಸಿನಿಮಾ ನಿರ್ಮಾಪಕ ಬಿ ಕೆ ಗಂಗಾಧರ್ ಕ್ಷಮೆ ಕೇಳಿದ್ದಾರೆ.
ಪೊಗರು ಸಿನಿಮಾ ವಿರುದ್ಧ ಬ್ರಾಹ್ಮಣ ಮಹಾಸಭಾ ಮಂಡಳಿ ವತಿಯಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲಾಗಿತ್ತು. ಈ ದೂರಿನ ಹಿನ್ನೆಲೆ ಬ್ರಾಹ್ಮಣ ಮಹಾಸಭಾ ಮಂಡಳಿಯ ಸದಸ್ಯರ ಜೊತೆ ಫಿಲ್ಮ್ ಚೇಂಬರ್ನಲ್ಲಿ ಅಧ್ಯಕ್ಷ ಜಯರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಗೌರವ ಕಾರ್ಯದರ್ಶಿ ಎನ್.ಎಂ.ಸುರೇಶ್, ನಿರ್ಮಾಪಕ ಸೂರಪ್ಪ ಬಾಬು ಹಾಗೂ ಪೊಗರು ಸಿನಿಮಾದ ನಿರ್ಮಾಪಕ ಬಿ.ಕೆ.ಗಂಗಾಧರ್ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿದ್ದಾರೆ.
ಓದಿ: ಮಲ್ಲೇಶ್ವರಂನಲ್ಲಿರುವ ಜಗ್ಗೇಶ್ ಮನೆಗೆ ಪೊಲೀಸ್ ಭದ್ರತೆ
ನಿರ್ದೇಶಕ ನಂದ ಕಿಶೋರ್ ಮತ್ತು ನಿರ್ಮಾಪಕ ಬಿ.ಕೆ.ಗಂಗಾಧರ್ ವಿರೋಧ ವ್ಯಕ್ತವಾಗಿರುವ ದೃಶ್ಯ ತೆಗೆಯಲು ನಿರ್ಧರಿಸಿದ್ದಾರೆ. ಹಾಗೆಯೇ ನಿರ್ಮಾಪಕ ಬಿ.ಕೆ.ಗಂಗಾಧರ್ ಕೂಡ ಬ್ರಾಹ್ಮಣ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆ ಕೇಳಿದ್ದು, ನಾಳೆಯಿಂದ ಸಿನಿಮಾದಲ್ಲಿ ಆ ದೃಶ್ಯ ಇರುವುದಿಲ್ಲ ಅಂತಾ ಭರವಸೆ ನೀಡಿದ್ದಾರೆ.