ಬಹದ್ದೂರ್ ಹುಡ್ಗ ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾ ಬಿಡುಗಡೆಯಾಗಿ ಎರಡು ಕಳೆದಿದ್ದು, ಅಭಿಮಾನಿಗಳು ಮುಂದಿನ ಚಿತ್ರಕ್ಕೆ ಕಾತರದಿಂದ ಕಾಯುತ್ತಿದ್ದಾರೆ. ಸುಮಾರು ಮೂರು ವರ್ಷಗಳಾಗುತ್ತಾ ಬಂದರೂ, ಪೊಗರು ಚಿತ್ರ ಮಾತ್ರ ಥಿಯೇಟರ್ಗೆ ಬರುವ ಲಕ್ಷಣ ಮಾಡುತ್ತಿಲ್ಲ. ಟೀಸರ್ನಿಂದ ಅಭಿಮಾನಿಗಳ ಹುಚ್ಚೆಬ್ಬಿಸಿದ್ದ ಪೊಗರು ಯಾವಾಗ ಬಿಡುಗಡೆಯಾಲಿದೆ ಎಂದು ಕಾಯುತ್ತಿರುವ ಆ್ಯಕ್ಷನ್ ಪ್ರಿನ್ಸ್ ಫ್ಯಾನ್ಸ್ಗೆ ನೆಚ್ಚಿನ ನಟ ಸಿಹಿಸುದ್ದಿ ನೀಡಿದ್ದಾರೆ.
ಎರಡು ವರ್ಷಗಳಿಂದ ಪೊಗರು ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು, ಈ ವರ್ಷ ಪೊಗರು ಚಿತ್ರವನ್ನು ಕಣ್ತುಂಬಿಕೊಳ್ಳಬಹುದು. ಹೌದು, ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಚಿತ್ರ ವೀಕ್ಷಣೆಗೆ ಥಿಯೇಟರ್ಗೆ ಬಂದಿದ್ದ ಧ್ರುವ ಸರ್ಜಾ, ಪೊಗರು ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಈಗಾಗಲೇ ಪೊಗರು ಚಿತ್ರ ಶೇ.70ರಷ್ಟು ಶೂಟಿಂಗ್ ಮುಗಿದಿದೆ. ಈ ವರ್ಷ ಬಿಡುಗಡೆಯಾಗುವುದು ಪಕ್ಕಾ ಎಂದು ಹೇಳಿದ್ದಾರೆ. ಇನ್ನು ಇದೇ ವೇಳೆ ನಟಿ ತಾರಾ ಧ್ರುವಸರ್ಜಾ ಕಾಲೆಳೆದು, ಯಾವಾಗಪ್ಪ ನಿನ್ನವು ಬ್ಯಾಕ್ ಟು ಬ್ಯಾಕ್ ಸಿನೆಮಾ ಬರುತ್ತೆ ಎಂದು ಧ್ರುವ ಸರ್ಜಾಗೆ ಕಿಚಾಯಿಸಿದರು.
ಅಣ್ಣ ತಮ್ಮ ಇಬ್ಬರೂ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಧ್ರುವ, ಒಂದು ಒಳ್ಳೆ ಪ್ರಾಜೆಕ್ಟ್ ಬಂದರೆ ಖಂಡಿತವಾಗಲೂ ಇಬ್ಬರೂ ಒಟ್ಟಿಗೆ ಮಾಡ್ತೀವಿ. ಆದರೆ ಇದುವರೆಗೂ ಆ ತರಹದ ಯಾವುದೇ ಆಫರ್ ನಮಗೆ ಬಂದಿಲ್ಲ, ಒಳ್ಳೆ ಸ್ಕ್ರಿಪ್ಟ್ ರೆಡಿ ಆದರೆ ಖಂಡಿತವಾಗಲೂ ಇಬ್ಬರೂ ಒಟ್ಟಿಗೆ ನಟಿಸುತ್ತೇವೆ ಎಂದು ಪೊಗರು ನಟ ಹೇಳಿದ್ದಾರೆ.