ETV Bharat / sitara

ಬೆಂಗಳೂರಲ್ಲಿ ಜೋರಾದ 'ಪೊಗರು' ಹವಾ..ಒಂದೇ ದಿನ 600 ಪ್ರದರ್ಶನ - Nandakishore direction Pogaru

ನಂದಕಿಶೋರ್ ನಿರ್ದೇಶನದ 'ಪೊಗರು' ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬೆಂಗಳೂರು ಒಂದರಲ್ಲೇ 100 ಥಿಯೇಟರ್​​​​​ಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದು ಸುಮಾರು 600 ಕ್ಕೂ ಹೆಚ್ಚು ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.

Pogaru
'ಪೊಗರು'
author img

By

Published : Feb 19, 2021, 9:39 AM IST

ರಾಜ್ಯಾದ್ಯಂತ ಇಂದು ಪೊಗರು ಹವಾ ಜೋರಾಗಿದೆ. ಕೆಲವೆಡೆ ಬೆಳಗ್ಗೆ 6 ಗಂಟೆಗೆ ಸಿನಿಮಾ ಬಿಡುಗಡೆಯಾಗಿದ್ದರೆ ಮತ್ತೆ ಕೆಲವೆಡೆ ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗುತ್ತಿದೆ. ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ಕೇಳಿಬರುತ್ತಿದೆ. ಅಭಿಮಾನಿಗಳು ಧ್ರುವ ಆ್ಯಕ್ಟಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: ಹೊಸ ನೃತ್ಯ ಪ್ರಾಕಾರದತ್ತ ಆಕರ್ಷಿತರಾದ ಧಕ್ ಧಕ್ ಹುಡುಗಿ ಮಾಧುರಿ

ಹೇಗಿದ್ದರೂ ಬೇರೆ ಯಾವುದೇ ದೊಡ್ಡ ಸಿನಿಮಾ ರಿಲೀಸ್ ಇಲ್ಲ. ಇನ್ನು, ಸ್ಪರ್ಧೆಯಂತೂ ಇಲ್ಲವೇ ಇಲ್ಲ. ಜೊತೆಗೆ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಮಲ್ಟಿಪ್ಲೆಕ್ಸ್​​​​​​​​​​​​​​​​​​​​​ ಬಹುತೇಕ ಸ್ಕ್ರೀನ್‍ಗಳನ್ನು 'ಪೊಗರು' ಚಿತ್ರಕ್ಕಾಗಿ ಮೀಸಲಿಡುತ್ತಿದ್ದಾರೆ. ಈ ಕಾರಣಕ್ಕಾಗೇ ಕೆಲವು ಮಲ್ಟಿಪ್ಲೆಕ್ಸ್​​​​​​​​​​​​​​​​​​​​​​​​​​​ಳಲ್ಲಿ 15ಕ್ಕೂ ಹೆಚ್ಚು ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಹೀಗೆ ಪ್ರದರ್ಶನ ಹೆಚ್ಚಾಗಿರುವುದರಿಂದ ಇಂದು ಒಂದೇ ದಿನ ಬರೀ ಬೆಂಗಳೂರಿನಲ್ಲಿ 600ಕ್ಕೂ ಹೆಚ್ಚು ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಇದುವರೆಗೂ ಯಾವೊಂದು ಕನ್ನಡ ಸಿನಿಮಾ ಕೂಡಾ ಒಂದೇ ದಿನ ಇಷ್ಟೊಂದು ಪ್ರದರ್ಶನಗಳನ್ನು ಕಂಡಿರಲಿಲ್ಲ. ಆ ಮಟ್ಟಿಗೆ, 'ಪೊಗರು' ಹೊಸ ದಾಖಲೆಯನ್ನೇ ಮಾಡಿದೆ. ಈ ಸಿನಿಮಾಗೆ ಸದ್ಯಕ್ಕೆ ದೊಡ್ಡ ಕ್ರೇಜ್ ಇದೆ. ಸಿನಿಪ್ರಿಯರು ಚಿತ್ರವನ್ನು ಹೇಗೆ ಸ್ವಿಕರಿಸಲಿದ್ದಾರೆ ಎಂದು ನಾಳೆ ವೇಳೆಗೆ ತಿಳಿಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.