ಪೆಟ್ರೋಮ್ಯಾಕ್ಸ್ ಚಿತ್ರ ಸ್ಯಾಂಡಲ್ವುಡ್ನಲ್ಲಿ ಟೈಟಲ್ನಿಂದಲೇ ಸದ್ದು ಮಾಡುತ್ತಿರುವ ಸಿನಿಮಾ. ನೀನಾಸಂ ಸತೀಶ್ ಜೊತೆ ಬ್ಯೂಟಿ ಕ್ವೀನ್ ಹರಿಪ್ರಿಯಾ ಮೊದಲ ಬಾರಿಗೆ ಸ್ಕ್ರೀನ್ ಶೇರ್ ಮಾಡುತ್ತಿರುವ ಸಿನಿಮಾ ಇದಾಗಿದ್ದು ಮೊದಲ ಹಂತದ ಚಿತ್ರೀಕರಣವನ್ನು ಮೈಸೂರಿನಲ್ಲಿ ಮಾಡಿ ಮುಗಿಸಿದೆ.
ಮೈಸೂರು ದಸರಾ ಸಂದರ್ಭದಲ್ಲಿ ಸಿಂಪಲ್ ಪೂಜೆ ಮುಗಿಸಿ ಚಿತ್ರೀಕರಣ ಸ್ಟಾರ್ಟ್ ಮಾಡಿತ್ತು. ಸಿದ್ಲಿಂಗು, ನೀರ್ ದೋಸೆ ಚಿತ್ರಗಳ ಖ್ಯಾತಿಯ ವಿಜಯ್ ಪ್ರಸಾದ್ ಆಕ್ಷನ್ ಕಟ್ ಹೇಳುತ್ತಿರುವ, ಪೆಟ್ರೋಮ್ಯಾಕ್ಸ್ ಚಿತ್ರತಂಡ ಇದೀಗ ಎರಡನೇ ಹಂತದ ಚಿತ್ರೀಕರಣ ಆರಂಭಿಸಿದೆ. 15 ದಿನಗಳ ಕಾಲ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಮಾಡಿದ್ದ, ನಿರ್ದೇಶಕ ವಿಜಯ್ ಪ್ರಸಾದ್ ಈಗ ಎರಡನೇ ಹಂತದ ಚಿತ್ರೀಕರಣ ಶುರು ಮಾಡಿದ್ದಾರೆ.
ಓದಿ : ಇಂದಿನ ನಿರ್ಮಾಪಕರು ಸ್ಟಾರ್ ನಟರ ಹಿಂದೆ ಹೋಗುತ್ತಿದ್ದಾರೆ : ರವಿಚಂದ್ರನ್
ಚಿತ್ರರಂಗದಲ್ಲಿ ಪೈಸಾ ವಸೂಲ್ ನಾಯಕ ನಟ ಅಂತಾ ಕರೆಯಿಸಿಕೊಂಡಿರುವ ಸತೀಶ್ ನೀನಾಸಂ ಈ ಚಿತ್ರದಲ್ಲಿ ಎರಡು ಶೇಡ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ವಿಜಯ್ ಪ್ರಸಾದ್ ಹೇಳುವ ಹಾಗೇ, ಇದೇ ಶೆಡ್ಯೂಲ್ನಲ್ಲಿ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿ, ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದ್ದೇವೆ ಎಂದಿದ್ದಾರೆ.
'ಗೊಂಬೆಗಳ ಲವ್' ಖ್ಯಾತಿಯ ಅರುಣ್, ನಾಗಭೂಷಣ್, ಕಾರುಣ್ಯಾ ರಾಮ್ ಮುಂತಾದವರು ಈ ಪೆಟ್ರೋಮ್ಯಾಕ್ಸ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಸಿನಿಮಾಕ್ಕೆ ನಿರಂಜನ್ ಬಾಬು ಛಾಯಾಗ್ರಹಣವಿದೆ. ಸುರೇಶ್ ಅರಸ್ ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ. ಸತೀಶ್ ಪಿಕ್ಚರ್ ಹೌಸ್ನಲ್ಲಿ ಪೆಟ್ರೋಮ್ಯಾಕ್ಸ್ ನಿರ್ಮಾಣ ಮಾಡಲಾಗುತ್ತಿದೆ.