ETV Bharat / sitara

ಮತ್ತೆ ಸಿನಿಮಾದಲ್ಲಿ ನಟಿಸ್ತಾರಾ ಪವನ್ ಕಲ್ಯಾಣ್​​​​​... ಫಿಲ್ಮ್​​​​​​​​​​​​​​​​​​​​​ ಸಿಟಿಯಲ್ಲಿ ಅದೇ ಹಾಟ್ ಟಾಪಿಕ್​​​ - ಫಿಲ್ಮ್​​​​​​​​​​​​​​​​​​​​​ ನಗರ

ನಟ ಪವನ್​ ಕಲ್ಯಾಣ್ ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂಬ ಮಾತು ಫಿಲ್ಮ್​ ನಗರದಾದ್ಯಂತ ಹರಿದಾಡುತ್ತಿದೆ. ನಾನು ಇನ್ನು ಮುಂದೆ ನನ್ನ ಪಕ್ಷ ಸಂಘಟನೆ ಕಡೆ ಗಮನ ಹರಿಸಲಿದ್ದು, ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಪವರ್ ಸ್ಟಾರ್ ಬಹಳಷ್ಟು ಬಾರಿ ಹೇಳಿದ್ದರು.

ಪವನ್ ಕಲ್ಯಾಣ್
author img

By

Published : Jul 31, 2019, 9:23 AM IST

ಜನಸೇನಾ ಪಕ್ಷದ ಸಂಸ್ಥಾಪಕ ಪವರ್ ಸ್ಟಾರ್ ಪವನ್ ಕಲ್ಯಾಣ್​ ತಮ್ಮದೇ ಸ್ವಂತ ಪಕ್ಷ ಸ್ಥಾಪನೆ ಮಾಡಿದಾಗಿನಿಂದ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಅಲ್ಲದೆ, ನಾನು ಇನ್ನು ಮುಂದೆ ಸಿನಿಮಾಗಳಲ್ಲಿ ನಟಿಸುವುದಿಲ್ಲ ಜನರ ಸೇವೆಗೆ ನನ್ನ ಜೀವನವನ್ನು ಮುಡುಪಾಗಿಡುತ್ತೇನೆ ಎಂದು ಕೂಡಾ ಹೇಳಿದ್ದರು.

pawan kalyan
ನಟ ಪವನ್ ಕಲ್ಯಾಣ್​

ಆದರೆ, ಪವನ್​ ಕಲ್ಯಾಣ್ ಮತ್ತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂಬ ಗುಸುಗುಸು ಫಿಲ್ಮ್​​ ಸಿಟಿಯಲ್ಲಿ ಹರಿದಾಡುತ್ತಿದೆ. ಡಿವಿವಿ ದಾನಯ್ಯ, ಮೈತ್ರಿ ಮೂವಿ ಮೇಕರ್ಸ್, ರತ್ನಂ ನಿರ್ಮಾಣ ಸಂಸ್ಥೆ ಅಡಿ ತಯಾರಾಗಲಿರುವ ಸಿನಿಮಾಗಳಲ್ಲಿ ನಟಿಸಲು ಪವನ್ ಕಲ್ಯಾಣ್ ಅಡ್ವಾನ್ಸ್​​​​ ಪಡೆದಿದ್ದರಂತೆ. ಆದರೆ, ನಂತರ ಅವರು 2019 ರ ಚುನಾವಣಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದರಿಂದ ಸಿನಿಮಾ ಕಡೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಆದರೆ, ಇದೀಗ ಎಲ್ಲವನ್ನೂ ಕ್ಲಿಯರ್ ಮಾಡಿಕೊಳ್ಳಲು ಪವನ್ ಸಿನಿಮಾದಲ್ಲಿ ನಟಿಸಲು ಸಿದ್ಧರಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಈ ನಿರ್ಮಾಣ ಸಂಸ್ಥೆಗಳು ಕಥೆ ರೆಡಿ ಮಾಡಿಕೊಂಡರೆ ತಾನು ಸೆಟ್​​​ಗೆ ಬರುವುದಾಗಿ ಪವನ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಪವನ್ ಕಲ್ಯಾಣ್ ಈ ಸಿನಿಮಾ ನಿರ್ಮಾಣ ಸಂಸ್ಥೆಗಳಿಗೆ ತಮ್ಮ ಸಹಿಯನ್ನು ಕೂಡಾ ಕಳಿಸಿಕೊಟ್ಟಿದ್ದಾರೆ ಎನ್ನಲಾಗಿದೆ.

pawan kalyan
ಜನಸೇನಾ ಪಕ್ಷದ ಸಂಸ್ಥಾಪಕ ಪವನ್​​​ ಕಲ್ಯಾಣ್

ಈ ಮುನ್ನ ವರ್ಷಕ್ಕೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದ ಪವನ್ ಇನ್ನೆರಡು ವರ್ಷಗಳಲ್ಲಿ ಎಲ್ಲ ಸಿನಿಮಾಗಳನ್ನು ಪೂರ್ತಿ ಮಾಡಿ ನಂತರ 2022 ರ ಚುನಾವಣೆಯತ್ತ ಗಮನ ಹರಿಸಲಿದ್ದಾರೆ ಎನ್ನಲಾಗಿದೆ. ಆದರೆ, ಪವನ್ ಮತ್ತೆ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂಬುದರ ಬಗ್ಗೆ ಅಧಿಕೃತವಾಗಿ ಎಲ್ಲೂ ಮಾಹಿತಿ ಲಭ್ಯವಾಗಿಲ್ಲ. ಇದಕ್ಕಾಗಿ ಇನ್ನು ಕೆಲವು ದಿನಗಳು ಕಾಯಬೇಕಿದೆ.

Intro:Body:

pawan kalyan

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.