ಉತ್ತರ ಪ್ರದೇಶದ ಹಥ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಪ್ರತಿಭಟನೆ ನಡೆಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪಾರೂಲ್ ಯಾದವ್ ತಮ್ಮ ನೋವನ್ನು ಹೊರ ಹಾಕಿದ್ದಾರೆ.
- " class="align-text-top noRightClick twitterSection" data="
">
'ಬಟರ್ ಫ್ಲೈ' ಚಿತ್ರದ ಬಿಡುಗಡೆಯ ತವಕದಲ್ಲಿರುವ ನಟಿ ಪಾರೂಲ್ ಯಾದವ್ಗೆ ಹಥ್ರಾಸ್ ಪ್ರಕರಣ ನೋವು ತಂದಿದೆಯಂತೆ. 'ಈ ದೌರ್ಜನ್ಯ ನನ್ನ ಮನಸ್ಸಿಗೆ ಘಾಸಿಯುಂಟು ಮಾಡಿದೆ. ಪ್ರತಿ ಹೆಣ್ಣು ಕೂಡಾ ತಾಯಿ ಆಗಲು ಬಯಸುತ್ತಾಳೆ. ಆದರೆ ಇಂತಹ ಕ್ರೂರ ಘಟನೆಯನ್ನು ನೋಡಿದ ನಂತರ ನಾನಂತೂ ತಾಯಿ ಆಗುವುದಿಲ್ಲ ಎಂದು ದು:ಖ ಹೊರ ಹಾಕಿದ್ದಾರೆ ಪಾರೂಲ್ ಯಾದವ್. ಯಾವುದೇ ಹೆಣ್ಣು ನಾನು ಅಮ್ಮನಾಗಲಾರೆ ಎಂದು ಹೇಳುವುದು ಕಷ್ಟದ ವಿಚಾರ. ಆದರೆ ಈ ಜನ್ಮದಲ್ಲಿ ನಾನು ತಾಯಿ ಆಗುವುದನ್ನು ತ್ಯಾಗ ಮಾಡುತ್ತಿದ್ದೇನೆ. ನನ್ನ ಮಗು ಹೆಣ್ಣಾದರೆ ಬಹಳ ಕಷ್ಟ. ಹೆಣ್ಣನ್ನು ಎಷ್ಟು ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತದೆ. ಈ ಕಷ್ಟ ಹೆಣ್ಣಿಗೆ ಏಕೆ ಬರುತ್ತದೆ...? ಇಂತ ಕಷ್ಟಗಳಿಂದ ಆಕೆ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲವೇ..?' ಎಂದು ಪಾರೂಲ್ ಯಾದವ್ ನೋವನ್ನು ಹಂಚಿಕೊಂಡಿದ್ದಾರೆ.