ಸ್ಯಾಂಡಲ್ವುಡ್ನ ಕೆಲವು ತಾರೆಯರು ಸಿನಿಮಾದಿಂದ ಹೊರತಾಗಿಯೂ ಕೆಲವು ಬಾರಿ ಸುದ್ದಿ ಆಗ್ತಾರೆ. ಅವರ ವೇಷ ಭೂಷಣದಿಂದ, ಅವರ ನಡವಳಿಕೆಯಿಂದ ಅನೇಕರು ಟ್ರೋಲ್ ಆಗಿದ್ದಾರೆ. ಇದೀಗ ಕನ್ನಡದ ಖ್ಯಾತ ನಟಿ ನಿಧಿ ಸುಬ್ಬಯ್ಯ ಪೋಸ್ಟ್ ಮಾಡಿರುವ ಒಂದು ಫೋಟೋ ಸಖತ್ ವೈರಲ್ ಆಗ್ತಿದ್ದು, ನೆಟ್ಟಿಗರಿಂದ ಕಮೆಂಟ್ಗಳ ಸರಮಾಲೆಯೇ ಬರ್ತಿವೆ.
![nidhi](https://etvbharatimages.akamaized.net/etvbharat/prod-images/10298132_thumb.png)
ನಿಧಿ ಸುಬ್ಬಯ್ಯ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ಯಾಂಟ್ ಲೆಸ್ ಫೋಟೋ ಹಾಕಿದ್ದಾರೆ. ಬಿಳಿ ಬಣ್ಣದ ಅಂಗಿ ತೊಟ್ಟಿರುವ ನಟಿ ಚಿಕ್ಕದಾದ ಉಡುಪು ಧರಿಸಿದ್ದಾರೆ. ಈ ಫೋಟೋಗೆ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದು, 'ಅಷ್ಟೆಲ್ಲ ಖರ್ಚು ಮಾಡ್ತೀರಾ, ದೊಡ್ಡದೊಂದು ಚಡ್ಡಿ ಹಾಕೋಕೆ ಆಗಲ್ವಾ.. ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
![nidhi](https://etvbharatimages.akamaized.net/etvbharat/prod-images/10298132_thumb2.png)
ನಟಿ ನಿಧಿ ಸುಬ್ಬಯ್ಯ ವಿವಾಹದ ನಂತ್ರ ಸಿನಿ ರಂಗದಿಂದ ಕೊಂಚ ದೂರವೇ ಇದ್ದಾರೆ. ಇದೀಗ ಸ್ವಲ್ವ ಗ್ಯಾಪ್ ನಂತ್ರ ಮತ್ತೆ ಚಿತ್ರರಂಗಕ್ಕೆ ವಾಪಸ್ ಆಗಿದ್ದಾರೆ. 5G ಬಳಿಕ ಶಿವರಾಜ್ ಕುಮಾರ್ ನಟನೆಯ ಆಯುಷ್ಮಾನ್ ಭವ ಸಿನಿಮಾದಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕಿದ್ರು. ಇದಾದ ಮೇಲೆ ಯಾವ ಸಿನಿಮಾದಲ್ಲೂ ನಟಿಸಿಲ್ಲ. ಇದೀಗ ಮತ್ತೆ ತೆರೆ ಮೇಲೆ ಕಾಣಲು ಸಿದ್ದರಾಗಿರುವ ನಟಿ, ಹಾರರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
- " class="align-text-top noRightClick twitterSection" data="
">