ETV Bharat / sitara

ಪ್ರಭಾಸ್‌​​​ ಬರ್ತ್‌ ಡೇಗೆ ಹೊರಬಂತು 'ರಾಧೆ ಶ್ಯಾಮ್'​​ ಮೋಷನ್​​ ವಿಡಿಯೋ - prabhas movie

ಭಾಸ್​ಗೆ ರಾಧೆ ಶ್ಯಾಮ್​ ಟೀಮ್​​​ ದೊಡ್ಡ ಗಿಫ್ಟ್​​ ಕೊಟ್ಟಿದೆ. ರಾಧ ಕೃಷ್ಣ ಕುಮಾರ್​​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಾಧೆ ಶ್ಯಾಮ್​​ ಸಿನಿಮಾದ ಮೋಷನ್​ ವಿಡಿಯೋ ಇಂದು ರಿಲೀಸ್​ ಆಗಿದೆ.

ಡಾರ್ಲಿಂಗ್​​​ ಬರ್ತ್​​ ಡೇಗೆ ಹೊರ ಬಂತು ರಾಧೆ ಶ್ಯಾಮ್​​ ಮೋಷನ್​​ ವಿಡಿಯೋ

author img

By

Published : Oct 23, 2020, 2:37 PM IST

ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಡಾರ್ಲಿಂಗ್​ ಪ್ರಭಾಸ್​ಗೆ ರಾಧೆ ಶ್ಯಾಮ್​ ಟೀಮ್​​​ ದೊಡ್ಡ ಗಿಫ್ಟ್​​ ಕೊಟ್ಟಿದೆ. ರಾಧ ಕೃಷ್ಣ ಕುಮಾರ್​​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರಾಧೆ ಶ್ಯಾಮ್​​ ಸಿನಿಮಾದ ಮೋಷನ್​ ವಿಡಿಯೋ ಇಂದು ರಿಲೀಸ್​ ಆಗಿದೆ.

ಈ ವಿಡಿಯೋದಲ್ಲಿ ಚಿತ್ರದಲ್ಲಿ ಏನೇನಿರುತ್ತೆ ಎಂಬುದರ ಒಂದೆಳೆಯನ್ನು ತೋರಿಸಲಾಗಿದೆ. ಸದ್ಯ ರಿಲೀಸ್​ ಆಗಿರುವ ವಿಡಿಯೋದಲ್ಲಿ ಫೇಮಸ್​ ಲವರ್​​ಗಳಾಗಿದ್ದ ದೇವದಾಸ್​-ಪಾರ್ವತಿ, ಪಂಜಾಬಿನ ಹೀರ್​​-ರಂಝ್​​​ರ ಫೋಟೋಗಳನ್ನು ತೋರಿಸಲಾಗಿದೆ. ಅಲ್ಲದೆ ಸುಂದರ ಪ್ರಕೃತಿ ಮಧ್ಯೆ ರೈಲು ಗಾಡಿಯೊಂದು ಹೋಗುವ ದೃಶ್ಯ, ಆ ರೈಲಿನಲ್ಲಿ ವಿಕ್ರಮಾದಿತ್ಯ ಮತ್ತು ಪ್ರೇರಣಾ ಜೊತೆಯಾಗಿರುವ ದೃಶ್ಯ ಮನಮೋಹಕವಾಗಿದೆ. ಈ ವಿಡಿಯೋದಲ್ಲಿ ತೋರಿಸಿರುವುದನ್ನು ಗಮನಿಸಿದಾಗ ಚಿತ್ರವು ಸಂಪೂರ್ಣ ಲವ್​ ಸ್ಟೋರಿಯಾಗಿದ್ದು, ವಿವಿಧ ಧರ್ಮಗಳ ನಡುವೆ ಸಾಮರಸ್ಯ ಬೆಸೆಯುವಂತಿದೆ.

ಚಿತ್ರದಲ್ಲಿ ನಾಯಕ ನಾಯಕಿಯಾಗಿ ಪ್ರಭಾಸ್​ ಮತ್ತು ಪೂಜಾ ಹೆಗಡೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಯಕ ಮತ್ತುನ ನಾಯಕಿಯ ನಡುವಿನ ಪ್ರೇಮವು ಯುರೋಪ್​​ನಲ್ಲಿ ನಡೆಯಲಿದೆಯಂತೆ. ಚಿತ್ರವನ್ನು ಉವಿ ಕ್ರಿಯೇಶನ್​​ ಅಡಿಯಲ್ಲಿ ವಂಶಿ ಮತ್ತು ಪ್ರಮೋದ್​​ ನಿರ್ಮಾಣ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.