'ರಾಜಾಹುಲಿ' ಸಿನಿಮಾ ಖ್ಯಾತಿಯ ಗುರುದೇಶ್ಪಾಂಡೆ ನಿರ್ದೇಶನದಲ್ಲಿ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ನಾಯಕನಾಗಿ ಅಭಿನಯಿಸುತ್ತಿರುವ ಮೊದಲ ಸಿನಿಮಾ 'ಪಡ್ಡೆಹುಲಿ'. ಚಿತ್ರತಂಡ ಈ ಸಿನಿಮಾದ ಒಂದೊಂದೇ ಹಾಡುಗಳನ್ನು ರಿವೀಲ್ ಮಾಡುತ್ತಾ ಬರುತ್ತಿದೆ.
![paddehuli movie](https://etvbharatimages.akamaized.net/etvbharat/images/img-20190402-wa00501554222498855-6_0204email_00819_898.jpg)
![Shreyas](https://etvbharatimages.akamaized.net/etvbharat/images/img-20190402-wa00511554222498854-31_0204email_00819_394.jpg)
ಈ ಮುನ್ನ ದುರ್ಗದ ಕೋಟೆಯಲ್ಲಿ 'ನಾ ತುಂಬಾ ಹೊಸಬ ಬಾಸು' ಅಂತ ಹಾಡಿಕೊಂಡು ರಾಮಾಚಾರಿ ಅವತಾರವೆತ್ತಿದ್ದ ಶ್ರೇಯಸ್, ಬಳಿಕ ಲವರ್ ಬಾಯ್ ಆಗಿ ಕೂಡಾ ಮಿಂಚಿದ್ದರು. ಇದೀಗ ಕನ್ನಡದ ಖ್ಯಾತ ಸಾಹಿತಿ ಡಿ.ವಿ.ಗುಂಡಪ್ಪ ಅವರ ಮಂಕು ತಿಮ್ಮನ ಕಗ್ಗದ ಸಾಹಿತ್ಯವನ್ನಾಧರಿಸಿರುವ 'ಬದುಕು ಜಟಕಾ ಬಂಡಿ' ಅಂತಿದ್ದಾರೆ ಶ್ರೇಯಸ್. ಈಗಾಗಲೇ ಪ್ರಸಿದ್ಧಿ ಪಡೆದಿರುವ ಹಾಡನ್ನು ಶ್ರೇಯಸ್ ಪ್ರತಿ ದಿನ ಸಾವಿರಾರು ಜನರು ಓಡಾಡುವ ಬೆಂಗಳೂರಿನ ಕೇಂದ್ರ ಬಿಂದುವಾಗಿರುವ ಮೆಜೆಸ್ಟಿಕ್ಲ್ಲಿ ಹಾಡಿದ್ದಾರೆ.
![paddehuli movie](https://etvbharatimages.akamaized.net/etvbharat/images/img-20190402-wa00431554222498866-6_0204email_00819_781.jpg)
![paddehuli movie](https://etvbharatimages.akamaized.net/etvbharat/images/img-20190402-wa00491554222498857-23_0204email_00819_529.jpg)
'ಬದುಕು ಜಟಕಾ ಬಂಡಿ' ಹಾಡಿನ ಲಿರಿಕಲ್ ವಿಡಿಯೋವನ್ನು ನಿರ್ದೇಶಕ ಗುರುದೇಶಪಾಂಡೆ ಏಪ್ರಿಲ್ 4ರಂದು ಬಿಡುಗಡೆ ಮಾಡಲು ಪ್ಲಾನ್ ಮಾಡಿದ್ದಾರೆ. ಸದ್ಯ ಬದುಕು ಜಟಕಾ ಬಂಡಿ ಹಾಡಿನ ಪೋಟೋಗಳು ರಿವೀಲ್ ಆಗಿವೆ. ತೇಜಸ್ವಿನಿ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಎಂ. ರಮೇಶ್ ರೆಡ್ಡಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ.