ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಮೊದಲ ಬಾರಿ ನಾಯಕನಾಗಿ ನಟಿಸುತ್ತಿರುವ 'ಪಡ್ಡೆಹುಲಿ' ಸಿನಿಮಾ ಸೆನ್ಸಾರ್ ಮಂಡಳಿಯಲ್ಲಿ ಪಾಸಾಗಿದ್ದು, ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ದೊರಕಿದೆ.
![Paddehuli](https://etvbharatimages.akamaized.net/etvbharat/images/paddehuli-censor-1_1403newsroom_00642_151.jpg)
ಯಾವುದೇ ಕಟ್ ಇಲ್ಲದೆ ಚಿತ್ರ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಮೊದಲ ಚಿತ್ರದಲ್ಲೇ ಶ್ರೇಯಸ್ ಡ್ಯಾನ್ಸ್, ಆ್ಯಕ್ಷನ್, ಆಕ್ಟಿಂಗ್ನಿಂದ ಗಮನ ಸೆಳೆಯುತ್ತಿದ್ದಾರೆ. ಈ 'ಪಡ್ಡೆಹುಲಿ'ಗೆ ನಿಶ್ವಿಕಾ ನಾಯ್ಡು ಜೊತೆಯಾಗಿದ್ದಾರೆ. ರವಿಚಂದ್ರನ್ ಹಾಗೂ ಸುಧಾರಾಣಿ ಶ್ರೇಯಸ್ ಅಪ್ಪ-ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ನಟಿಸಿದ್ದಾರೆ. ಒಬ್ಬ ಹಳ್ಳಿ ಹುಡುಗ ಹೇಗೆ ರಾಕ್ಸ್ಟಾರ್ ಆಗುತ್ತಾನೆ ಎಂಬುದು ಚಿತ್ರದ ಕಥೆ ಎನ್ನಲಾಗಿದೆ. ಗುರು ದೇಶಪಾಂಡೆ ನಿರ್ದೇಶನದಲ್ಲಿ, ರಮೇಶ್ ರೆಡ್ಡಿ ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಸದ್ಯ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡಿರುವ 'ಪಡ್ಡೆಹುಲಿ' ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.