ದಕ್ಷಿಣ ಭಾರತ ಕಂಡ ಯಶಸ್ವಿ ನಿರ್ದೇಶಕರ ಗುಂಪಿನಲ್ಲಿ ಪಿ ವಾಸು ಸಹ ಸೇರುತ್ತಾರೆ. ಇವರ ಕನ್ನಡ ಸಿನಿ ಜರ್ನಿ ಶುರು ಆಗಿದ್ದು 80 ದಶಕದಿಂದ. ಕಳೆದ 40 ವರ್ಷಗಳಲ್ಲಿ ಪಿ ವಾಸು ಅನೇಕ ಹಿಟ್ ಚಿತ್ರಗಳನ್ನು ನೀಡುತ್ತಾ ಬಂದಿದ್ದಾರೆ. ಆದ್ರೆ ಸ್ವತಃ ವಾಸು ಕುಟುಂಬದ ಜೀವನವನ್ನೇ ತೆರೆಯ ಮೇಲೆ ತಂದಿದ್ದು ಆಯುಷ್ಮಾನ್ ಭವ ಸಿನಿಮಾದ ಮೂಲಕ.
ನನ್ನ ಮನೆಯಲ್ಲೂ 30 ಕ್ಕೂ ಹೆಚ್ಚು ಸದಸ್ಯರು ಇದ್ದಾರೆ. ಈ ತುಂಬಿದ ಕುಟುಂಬದಲ್ಲಿ ಹಲವಾರು ಸೋಜಿಗದ ವಿಚಾರಗಳು ಘಟಿಸಿವೆ. ನಾನು ನನ್ನ ಮನೆಯಲ್ಲಿ ಕಂಡ ಸುಂದರ ವಿಚಾರಗಳನ್ನು ಈ ‘ಆಯುಷ್ಮಾನ್ ಭವ’ ಚಿತ್ರದಲ್ಲಿ ಭಾಗಶಃ ಅಳವಡಿಸಿದ್ದೇನೆ ಎಂದು ನಿರ್ದೇಶಕ ಪಿ ವಾಸು ಹೇಳುತ್ತಾರೆ.
ಪಿ ವಾಸು ಕುಟುಂಬ ಚೆನ್ನೈನಲ್ಲಿ ಹೇಗಿದೆ ಅಂದರೆ ಇವರೆನಾದರೂ ಹೊಸ ಅಂಗಿಯೋ, ಚಪ್ಪಲಿಯೋ ಖರೀದಿ ಮಾಡಿಕೊಂಡು ಬಂದರೆ ಅದು ಮಾರನೇ ದಿನ ಇವರಿಗೆ ಸಿಕ್ಕುವುದಿಲ್ಲ. ಯಾಕಂದ್ರೆ ವಾಸು ಮನೆಯಲ್ಲಿ ತುಂಬಾ ಜನ ಇದ್ದು, ಆ ವಸ್ತುಗಳನ್ನು ಬೇರೆ ಯಾರಾದರೂ ಬಳಸಿರುತ್ತಾರೆ. ಇದ್ರಿಂದ ಇದ್ದ ವಸ್ತುಗಳನ್ನು ಬಳಸಿ ನನಗೆ ಅಭ್ಯಾಸವಾಗಿದೆ ಅಂತಾರೆ ನಿರ್ದೇಶಕ ಪಿ.ವಾಸು
- " class="align-text-top noRightClick twitterSection" data="">
ಈ ರೀತಿಯಲ್ಲಿ ಪಿ.ವಾಸು ಕುಟುಂಬದಲ್ಲಿ ಅನೇಕ ವಿಚಾರಗಳು ನಡೆಯುತ್ತವೆ. ಆದ್ರಿಂದ ಆಯುಷ್ಮಾನ್ ಭವ ಚಿತ್ರದಲ್ಲಿ ವಾಸು ಕುಟುಂಬದ ಕೆಲವು ಅಂಶಗಳನ್ನು ಬಳಸಿಕೊಳ್ಳಲಾಗಿದೆ. ಇದ್ರಿಂದ ಚಿತ್ರದಲ್ಲಿ 35 ಸದಸ್ಯರ ತುಂಬು ಕುಟುಂಬ ಇದೆ ಎನ್ನಲಾಗಿದೆ .
ಇನ್ನು ಆಯುಷ್ಮಾನ್ ಭವ ಚಿತ್ರದಲ್ಲಿ ಅವರ ಬ್ರಾಂಡ್ ಹಾರರ್ ಫೀಲ್ ಸ್ವಲ್ಪ ಅಳವಡಿಸಿದ್ದಾರೆ. ಆದರೆ ಚಿತ್ರದಲ್ಲಿ ಯಾವುದೇ ಹಾರರ್, ದೆವ್ವದ ವಿಚಾರಗಳು ಇಲ್ಲ. ನಿರ್ಮಾಪಕ ಯೋಗಿ ಸಹ ನನ್ನ ಬ್ರಾಂಡ್ ಅನ್ನು ನೀವು ಈ ಚಿತ್ರದಲ್ಲೂ ಅಳವಡಿಸಿಕೊಳ್ಳಿ ಎಂದು ಅನುಮತಿ ಕೊಟ್ಟಿದ್ದಾರೆ. ಹಾಗಾಗಿ ಈ ‘ಆಯುಷ್ಮಾನ್ ಭವ’ ಚಿತ್ರದಲ್ಲಿ ಆ ರೀತಿಯ ಕಲ್ಪನೆ ಪ್ರೇಕ್ಷಕರಿಗೆ ಬರುವುದು ಉಂಟು. ಆದರೆ ಇದರಲ್ಲಿ ಹಾರರ್ ಅಂಶಗಳು ಇರುವುದಿಲ್ಲ.