ಕನ್ನಡದಲ್ಲಿ ವಿಭಿನ್ನ ಕಥೆಯುಳ್ಳ ಸಿನಿಮಾಗಳು ತೆರೆ ಕಾಣುತ್ತಿವೆ. ಕೇವಲ ವಿಭಿನ್ನ ಕಥೆಯಲ್ಲ, ವಿಭಿನ್ನ ಟೈಟಲ್ಗಳನ್ನು ಇಟ್ಟುಕೊಂಡು ಚಿತ್ರಗಳು ರಿಲೀಸ್ ಆಗುತ್ತಿವೆ. ಇದೀಗ ಅಂತಹದ್ದೇ ಒಂದು ಸಿನಿಮಾ ಟ್ರೈಲರ್ ಬಿಡುಗಡೆಗೆ ಸಜ್ಜಾಗಿದೆ. ಆ ಚಿತ್ರವೇ ಒಂದು ಗಂಟೆಯ ಕಥೆ.

ಈ ಹಿಂದೆ ‘ಗುನ್ನ’ ‘ಮತ್ತೆ ಮುಂಗಾರು’, ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ದ್ವಾರಕಿ ರಾಘವ್ ಬರೋಬ್ಬರಿ 10 ವರ್ಷಗಳ ನಂತ್ರ ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ. ಸಿನಿಮಾದಲ್ಲಿ ಅಜೈ ರಾಜ್ (ನಂಜುಂಡ), ಶನಾಯ ಕಾಟ್ವೆ, ಸ್ವಾತಿ ಶರ್ಮ, ಚಿದಾನಂದ್, ಪ್ರಶಾಂತ್ ಸಿದ್ದಿ, ಚಂದ್ರಕಲಾ, ಯಶ್ವಂತ್ ಸರದೇಶಪಾಂಡೆ, ಮಿಮಿಕ್ರಿ ಗೋಪಿ, ಸಿಲ್ಲಿ ಲಲ್ಲಿ ಆನಂದ್, ನಾಗೇಂದ್ರ ಶಾ, ಕುಳ್ಳ ಸೋಮು, ಮಜಾ ಟಾಕೀಸ್ ರೆಮೊ, ರುಕ್ಮಿಣಿ ಹಾಗೂ ಇತರರು ಅಭಿನಯಿಸಿದ್ದಾರೆ.

ಡಿ ಬೀಟ್ಸ್ ಮೂಲಕ ಈ ಟ್ರೈಲರ್ ಫೆಬ್ರವರಿ 14 ರಂದು ಲೋಕಾರ್ಪಣೆ ಆಗಲಿದೆ. ಈ ಚಿತ್ರದಲ್ಲಿ ಹಾಟ್ ಸೀನ್ಗಳು ಮೋಡಿ ಮಾಡಿದ್ದು, ಚಿತ್ರ ನೈಜ ಘಟನೆಗಳನ್ನು ಹೊಂದಿದೆಯಂತೆ. ಡೆನ್ನಿಸ್ ವಲ್ಲಭಾನ್ ಸಂಗೀತ, ಸೂರ್ಯಕಾಂತ್ ಛಾಯಾಗ್ರಹಣ, ದ್ವಾರಕಿ ರಾಘವ್ ನಿರ್ದೇಶನವಿರುವ ಈ ಸಿನಿಮಾಕ್ಕೆ ಶ್ವೇತ ದಾಕೋಜು ಬಂಡವಾಳ ಹಾಕಿದ್ದಾರೆ.