ETV Bharat / sitara

'ಅಮ್ಮ'ನಿಗಿಂದು ನಾಲ್ಕನೇ ವರ್ಷದ ಪುಣ್ಯತಿಥಿ: ಶೂಟಿಂಗ್​ ಫೋಟೋ ಹಂಚಿಕೊಂಡ ಕಂಗನಾ! - ಜಯಲಲಿಯಾ ನಿಧನರಾಗಿ ಇಂದಿಗೆ ನಾಲ್ಕು ವರ್ಷ

ಜಯಲಲಿತಾ ನಿಧನರಾಗಿ ಇಂದಿಗೆ ನಾಲ್ಕು ವರ್ಷಗಳು ಗತಿಸಿವೆ. ಈ ಸಂದರ್ಭದಲ್ಲಿ ಜಯಲಲಿತಾ ಪಾತ್ರ ಮಾಡುತ್ತಿರುವ ಕಂಗನಾ ರಣಾವತ್​ ಗೌರವ ನಮನ ಸಲ್ಲಿಸಿ ಸ್ಮರಿಸಿಕೊಂಡಿದ್ದಾರೆ.

On Jayalalithaa's death anniversary, Kangana shares stills from 'Thalaivi'
'ಅಮ್ಮ'ನಿಗಿಂದು ನಾಲ್ಕನೇ ವರ್ಷದ ಪುಣ್ಯತಿಥಿ : ಶೂಟಿಂಗ್​ ಫೋಟೋ ಹಂಚಿಕೊಂಡ ಕಂಗನಾ!
author img

By

Published : Dec 5, 2020, 3:19 PM IST

Updated : Dec 5, 2020, 3:29 PM IST

ತಮಿಳುನಾಡಿಗೆ ಅಮ್ಮನಾಗಿದ್ದ ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಧನರಾಗಿ ಇಂದಿಗೆ ನಾಲ್ಕು ವರ್ಷಗಳು ಗತಿಸಿವೆ. ಈ ಸಂದರ್ಭದಲ್ಲಿ ಜಯಲಲಿತಾ ಪಾತ್ರ ಮಾಡುತ್ತಿರುವ ಕಂಗನಾ ರಣಾವತ್​ ಗೌರವ ನಮನ ಸಲ್ಲಿಸಿ 'ಅಮ್ಮ'ನನ್ನು ನೆನಪಿಸಿಕೊಂಡಿದ್ದಾರೆ.

On Jayalalithaa's death anniversary, Kangana shares stills from 'Thalaivi'
ಶೂಟಿಂಗ್​ ಫೋಟೋ ಹಂಚಿಕೊಂಡ ಕಂಗನಾ!

ಸದ್ಯ ಜಯಲಲಿತಾ ಬಯೋಪಿಕ್​​ 'ತಲೈವಿ' ಸಿನಿಮಾ ಶೂಟಿಂಗ್​ನಲ್ಲಿ ನಿರತರಾಗಿರುವ ನಟಿ ಕಂಗನಾ ರಣಾವತ್​​​ ಶೂಟಿಂಗ್​ನ ಕೆಲವು ಚಿತ್ರಾವಳಿಗಳನ್ನು ಹಂಚಿಕೊಂಡಿದ್ದಾರೆ. ಟ್ವೀಟ್​​​ನಲ್ಲಿ ಜಯಲಲಿತಾ ಅವರನ್ನು ಸ್ಮರಿಸಿರುವ ನಟಿ, ಜಯಾ ಅಮ್ಮರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆ ಮಾಡಿಕೊಳ್ಳುತ್ತ, ತಲೈವಿ ಚಿತ್ರೀಕರಣದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದೇನೆ. ನನ್ನ ತಲೈವಿ ಚಿತ್ರತಂಡದ ಎಲ್ಲರಿದೂ ಧನ್ಯವಾದಗಳು. ಅದರಲ್ಲೂ ನಮ್ಮ ತಂಡದ ಮುಖ್ಯಸ್ಥರಾಗಿರುವ ನಿರ್ದೇಶಕ ವಿಜಯ್​ ಸರ್​ಗೆ ಧನ್ಯವಾದಗಳು. ವಿಜಯ್​​ ಸರ್​ ಸೂಪರ್​ ಹ್ಯೂಮನ್​ ರೀತಿ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೊಂದು ವಾರದ ಚಿತ್ರೀಕರಣ ಬಾಕಿ ಇದೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ : 'ಸಲಾರ್'​ ನಿಜಕ್ಕೂ ಅರೇಬಿಯನ್ ಪದಾನಾ....ಅದರ ಅರ್ಥವೇನು...?

ಸದ್ಯ ತಲೈವಿ ಚಿತ್ರೀಕರಣ ಹೈದರಾಬಾದ್​​ನಲ್ಲಿ ನಡೆಯುತ್ತಿದ್ದು, ಕೇವಲ ಇನ್ನೊಂದು ವಾರ ಮಾತ್ರ ಬಾಕಿ ಇದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್​​ ಕಾಣಿಸಿಕೊಂಡಿದ್ದರೆ, ಎಂಜಿಆರ್​​ ಪಾತ್ರದಲ್ಲಿ ನಟ ಅರವಿಂದ್​​ ಸ್ವಾಮಿ, ಕರುಣಾನಿಧಿ ಪಾತ್ರಕ್ಕೆ ಪ್ರಕಾಶ್ ರೈ ಬಣ್ಣ ಹಚ್ಚುತ್ತಿದ್ದಾರೆ.

ಇನ್ನು ಈ ಚಿತ್ರವು ಹಿಂದಿ, ತಮಿಳು, ತೆಲುಗಿನಲ್ಲಿ ತಯಾರಾಗುತ್ತಿದ್ದು, ಜಯಲಲಿತಾರ ಜೀವನ ಚಿತ್ರಣವನ್ನು ಆಧರಿಸಿದೆ. ಸಿನಿಮಾವನ್ನು ವಿಷ್ಣು ವರ್ಧನ ಇಂಧುರಿ ಮತ್ತು ಶೈಲೇಶ್ ಆರ್ ಸಿಂಗ್ ನಿರ್ಮಿಸುತ್ತಿದ್ದಾರೆ.

Last Updated : Dec 5, 2020, 3:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.