ETV Bharat / sitara

ಉಪೇಂದ್ರ ಅಭಿನಯ, ಓಂ ಪ್ರಕಾಶ್ ನಿರ್ದೇಶನದಲ್ಲಿ ತಯಾರಾಗಲಿದೆ ‘ಯಮರಾಜ ’ - ಯಮರಾಜ ಸಿನಿಮಾ

ಹಿಟ್ ಚಿತ್ರಗಳನ್ನು ನಿರ್ದೇಶಿಸಿ ಬಳಿಕ ದಿಢೀರ್​ ಮರೆಯಾಗಿದ್ದ ಡೈರೆಕ್ಟರ್​ ಓಂ ಪ್ರಕಾಶ್ ರಾವ್​ ಇದೀಗ ರಿಯಲ್ ಸ್ಟಾರ್ ಅಭಿನಯದ ಯಮರಾಜ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಯಮರಾಜ
ಯಮರಾಜ
author img

By

Published : Sep 18, 2021, 10:18 AM IST

ಕೆಲ ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕನ ಪಟ್ಟ ಅಲಂಕರಿಸಿದ್ದವರು ಓಂ ಪ್ರಕಾಶ್ ರಾವ್. ಎಲ್ಲಾ ಟಾಪ್ ಹೀರೋಗಳ ಜತೆಗೆ ಚಿತ್ರ ಮಾಡಿದ್ದ ಇವರು, ಮುಂದಿನ ದಿನಗಳಲ್ಲಿ ಯಾವುದೇ ಚಿತ್ರವನ್ನು ನಿರ್ದೇಶಿಸಲಿಲ್ಲ.

ಮುಹೂರ್ತ ಮಾಡಿದ ಚಿತ್ರಗಳು ಸೆಟ್ಟೇರಲಿಲ್ಲ, ಸೆಟ್ಟೇರಿದರೂ ಕಾರಣಾಂತರಗಳಿಂದ ಬಿಡುಗಡೆಯಾಗಿಲ್ಲ. ಮೂರು ವರ್ಷಗಳ ಹಿಂದೆ ಓಂ ಪ್ರಕಾಶ್ ರಾವ್ ನಿರ್ದೇಶಿಸಿದ ಹುಚ್ಚ-2 ಚಿತ್ರವೇ ಲಾಸ್ಟ್. ಆ ನಂತರ ಅವರು ಉಪೇಂದ್ರ ಅಭಿನಯದ ತ್ರಿಶೂಲಂ ಚಿತ್ರ ನಿರ್ದೇಶಿಸಿದ್ದರು. ಆದರೆ, ಆ ಚಿತ್ರಕ್ಕೆ ಇನ್ನೂ ಬಿಡುಗಡೆ ಭಾಗ್ಯ ಬಂದಿಲ್ಲ.

ಆದ್ರೀಗ ಓಂ ಪ್ರಕಾಶ್ ರಾವ್​​​, ಉಪೇಂದ್ರ ಅಭಿನಯದ ಯಮರಾಜ ಎಂಬ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬರ್ತಿವೆ. ಈ ಚಿತ್ರಕ್ಕೆ ಕೆ. ಮಂಜು ಅವರ ಆಶೀರ್ವಾದವಿದ್ದು, ಕೇಶವ ಎನ್ನುವವರು ಬಂಡವಾಳ ಹೂಡಲಿದ್ದಾರೆ. ಓಂ ಪ್ರಕಾಶ್ ರಾವ್ ಚಿತ್ರಕಥೆ ಬರೆದಿದ್ದು, ಎಂ.ಎಸ್. ರಮೇಶ್ ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಇಂದು ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಚಿತ್ರವನ್ನು ಘೋಷಿಸಲಾಗಿದೆ.

ಇದನ್ನೂ ಓದಿ: ಕನ್ನಡಕ್ಕೆ ಮತ್ತೆ ಆರ್​ಜಿವಿ ಎಂಟ್ರಿ.. ರಿಯಲ್ ಸ್ಟಾರ್​ ಚಿತ್ರಕ್ಕೆ ಹೇಳ್ತಾರಾ ಆ್ಯಕ್ಷನ್ ಕಟ್?

ಉಪೇಂದ್ರ ಅಭಿನಯದಲ್ಲಿ ಓಂ ಪ್ರಕಾಶ್ ಇನ್ನೊಂದು ಚಿತ್ರ ಮಾಡುತ್ತಾರೆ ಎನ್ನುವುದು ಸುದ್ದಿಯಾದರೂ, ಈ ಚಿತ್ರ ಯಾವಾಗ ಪ್ರಾರಂಭವಾಗುತ್ತದೆ ಎಂದು ಸದ್ಯಕ್ಕೆ ಗೊತ್ತಿಲ್ಲ. ಏಕೆಂದರೆ, ಉಪೇಂದ್ರ ಮೊದಲು ಕಬ್ಜ ಮತ್ತು ಲಗಾಮ್ ಚಿತ್ರಗಳನ್ನು ಮುಗಿಸಬೇಕಿದೆ. ಇದಲ್ಲದೆ ಶಶಾಂಕ್ ನಿರ್ದೇಶನದ ಚಿತ್ರವೊಂದು ಬಹಳ ವರ್ಷಗಳಿಂದ ಪೆಂಡಿಂಗ್ ಇದೆ. ಎಲ್ಲ ಅಂದುಕೊಂಡಂತೆ ಆದರೆ, ವರ್ಷದ ಕೊನೆಯಲ್ಲಿ ಆ ಚಿತ್ರ ಶುರುವಾಗಬೇಕಿದೆ. ಈ ಮಧ್ಯೆ, ರಾಮ್​ ಗೋಪಾಲ್​ ವರ್ಮಾ ನಿರ್ದೇಶನದಲ್ಲಿ ಉಪೇಂದ್ರ ಒಂದು ಸಿನಿಮಾ ಮಾಡುತ್ತಾರೆಂದು ಸುದ್ದಿಯಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.