ETV Bharat / sitara

ವಿದೇಶದಲ್ಲಿಯೂ ಶ್ರೀನಿ-ಅದಿತಿ ಪ್ರಭುದೇವ ನಟನೆಯ 'ಓಲ್ಡ್ ಮಾಂಕ್' ಕಿಕ್ಕು! - ಅದಿತಿ ಪ್ರಭುದೇವ

ಶ್ರೀನಿ ನಿರ್ದೇಶಿಸಿ ನಟಿಸಿರುವ ಓಲ್ಡ್​ ಮಾಂಕ್​ ಚಿತ್ರ ಕೆನಡಾ, ಯು.ಎಸ್​.ಎ ಹಾಗೂ ಆಸ್ಟ್ರೇಲಿಯಾದಲ್ಲೂ ಬಿಡುಗಡೆಗೊಳ್ಳುತ್ತಿದೆ.

Old Monk Craze starring Srini and Aditi Prabhu Deva abroad
ವಿದೇಶದಲ್ಲಿಯೂ ಶ್ರೀನಿ ಹಾಗು ಅಧಿತಿ ಪ್ರಭುದೇವ ನಟನೆಯ ಓಲ್ಡ್ ಮಾಂಕ್ ಕ್ರೇಜ್!
author img

By

Published : Mar 7, 2022, 5:55 PM IST

ಬೆಂಗಳೂರು: ಓಲ್ಡ್ ಮಾಂಕ್​ ಚಿತ್ರ ರಾಜ್ಯಾದ್ಯಂತ ಕಳೆದ ವಾರ ಬಿಡುಗಡೆಯಾಗಿತ್ತು. ಈ ವಾರದಿಂದ ಚಿತ್ರಮಂದಿರಗಳನ್ನು ಇನ್ನಷ್ಟು ಹೆಚ್ಚು ಮಾಡುತ್ತೇವೆ ಎಂದು ನಿರ್ದೇಶಕ ಹಾಗೂ ನಟ ಶ್ರೀನಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರೂ ಸಕ್ಸಸ್​ ಮೀಟ್​ ಮಾಡುತ್ತಾರೆ. ಆದರೆ ನಾವು ಸಕ್ಸಸ್​ ಸಿಗಲಿ ಎಂದು ಮಾಡುತ್ತಿದ್ದೇವೆ. ಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆನಡಾ, ಯು.ಎಸ್​.ಎ ಹಾಗೂ ಆಸ್ಟ್ರೇಲಿಯಾದಲ್ಲೂ ಚಿತ್ರ ಬಿಡುಗಡೆಯಾಗುತ್ತಿದೆ ಎಂದರು.

ಶ್ರೀನಿ ಮಾತಿಗೆ ಜೊತೆಗೂಡಿಸಿದ ನಾಯಕಿ ಅದಿತಿ ಪ್ರಭುದೇವ, ಉತ್ತಮ ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸುವಂತೆ ಕೇಳಿಕೊಂಡರು.

ನನ್ನ ಪಾತ್ರಕ್ಕೆ ಸಿಕ್ಕಿರುವ ಮನ್ನಣೆಗೆ ನಾನು ಆಭಾರಿ.‌ ಅವಕಾಶ ಕೊಟ್ಟ ಶ್ರೀನಿ ಅವರಿಗೆ ಧನ್ಯವಾದ. ಒಳ್ಳೆಯ ಚಿತ್ರ ಎಂದು ನೋಡಿದವರು ಹೇಳುತ್ತಿದ್ದಾರೆ. ಇನ್ನಷ್ಟು ಜನ ನಮ್ಮ ಚಿತ್ರ ನೋಡಿ ಗೆಲ್ಲಿಸಿ ಎಂದರು ಸುಜಯ್ ಶಾಸ್ತ್ರಿ.

ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರು ಹಾಗೂ ವಿತರಕರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ದಿವ್ಯಾ ಅಗರ್ವಾಲ್ - ವರುಣ್ ಸೂದ್ ಮಧ್ಯೆ ಬಿರುಕು: ಮುರಿದು ಬಿತ್ತು ನಾಲ್ಕು ವರ್ಷದ ಪ್ರೀತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.