ETV Bharat / sitara

ದರ್ಶನ್​​​​ ಅಭಿಮಾನಿಗಳಿಗೆ ಸಿಹಿ ಸುದ್ದಿ: 'ಒಡೆಯ' ರಿಲೀಸ್​​​ ಯಾವಾಗ ಗೊತ್ತಾ? - ಒಡೆಯಾ ಸಿನಿಮಾ ಬಿಡುಗಡೆ

‘ಬುಲ್ ಬುಲ್’ ನಂತರ ನಿರ್ದೇಶಕ ಎಂ.ಡಿ.ಶ್ರೀಧರ್ ಮತ್ತು ದರ್ಶನ್​ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಚಿತ್ರ ‘ಒಡೆಯ’. ಈ ಸಿನಿಮಾವನ್ನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಬೇಕೆಂದು ನಿರ್ದೇಶಕರು ತಯಾರಿ ನಡೆಸಿದ್ದಾರಂತೆ.

ಒಡೆಯ ಸಿನಿಮಾ ಪೋಸ್ಟರ್​​
author img

By

Published : Oct 19, 2019, 1:27 PM IST

ಚಾಲೆಂಜಿಂಗ್​​ ಸ್ಟಾರ್​ ದರ್ಶನ್​ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಇಷ್ಟು ದಿನ ಒಡೆಯ ಸಿನಿಮಾ ಯಾವಾಗ ರಿಲೀಸ್​ ಆಗುತ್ತದೆ ಎಂದು ಕಾಯುತ್ತಿದ್ದವರಿಗೆ ಈ ಬಗ್ಗೆ ಮಾಹಿತಿಯೊಂದು ಸಿಕ್ಕಿದೆ.

ಹೌದು, ‘ಬುಲ್ ಬುಲ್’ ನಂತರ ನಿರ್ದೇಶಕ ಎಂ.ಡಿ.ಶ್ರೀಧರ್ ಮತ್ತು ದರ್ಶನ್​ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಚಿತ್ರ ‘ಒಡೆಯ’. ಈ ಸಿನಿಮಾವನ್ನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಬೇಕೆಂದು ನಿರ್ದೇಶಕರು ತಯಾರಿ ನಡೆಸಿದ್ದಾರಂತೆ.

ಎಂ.ಡಿ.ಶ್ರೀಧರ್ ‘ಬುಲ್ ಬುಲ್’ಗೂ ಮುನ್ನ ‘ಪೊರ್ಕಿ’ ಸಿನಿಮಾದಲ್ಲಿ ದರ್ಶನ್ ಜೊತೆ ಕೆಲಸ ಮಾಡಿದ್ದರು. ಸದ್ಯ ಸ್ವಿಡ್ಜರ್​ರ್ಲ್ಯಾಂಡ್​ನಲ್ಲಿ ಸಾಂಗ್​ ಶೂಟಿಂಗ್​ ನಡೆಯುತ್ತಿದ್ದು, ಈ ಹಾಡುಗಳ ಚಿತ್ರೀಕರಣ ಮುಗಿದರೆ ಬಹುಪಾಲು ಸಿನಿಮಾದ ಚಿತ್ರೀಕರಣ ಮುಗಿದಂತಾಗುತ್ತದೆ. ಇನ್ನು ಒಡೆಯ ಸಿನಿಮಾಕ್ಕೆ ಜಯಂತ್ ಕಾಯ್ಕಿಣಿ ಹಾಗೂ ಡಾ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಅವರ ಈ ಎರಡು ಹಾಡುಗಳು ಚಿತ್ರೀಕರಣದ ಕೊನೇ ಹಂತಕ್ಕೆ ಬಂದು ನಿಂತಿವೆ.

ಕೊಡಗಿನ ಬೆಡಗಿ ರಾಘವಿ ತಿಮ್ಮಯ್ಯ ಚಿತ್ರದ ನಾಯಕಿಯಾಗಿದ್ದು, ಸಿನಿಮಾದಲ್ಲಿ ಐವರು ಸಹೋದರರ ಪ್ರೀತಿಯ ಕಥೆಯನ್ನು ಹೆಣೆಯಲಾಗಿದೆ. ಸಿನಿಮಾ ಹೈದರಾಬಾದ್, ಬೆಂಗಳೂರು, ಮೈಸೂರು, ಚಿತ್ರದುರ್ಗಗಳಲ್ಲಿ ಚಿತ್ರೀಕರಣವಾಗಿದೆ.

ಒಡೆಯನ ದರ್ಬಾರು ಡಿಸೆಂಬರ್ ತಿಂಗಳಿನಲ್ಲಿ

ಡಿ ಬಾಸ್ ದರ್ಶನ್ ಅವರ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ. ಬುಲ್ ಬುಲ್ ನಂತರ ಮತ್ತೆ ಡಿ ಬಾಸ್ ದರ್ಶನ್ ಸಿನಿಮಾ ನಿರ್ದೇಶನ ಮಾಡಿರುವ ಎಂ ಡಿ ಶ್ರೀಧರ್ ಒಡೆಯ ಚಿತ್ರವನ್ನ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆ ಮಾಡಬೇಕು ಎಂದು ತಯಾರಿ ನಡೆಸುತ್ತಿದ್ದಾರೆ. ಎಂ ಡಿ ಶ್ರೀಧರ್ ಬುಲ್ ಬುಲ್ ಸಿನಿಮಕ್ಕೂ ಮುಂಚೆ ಪೊರ್ಕಿ ಸಿನಿಮಾ ದರ್ಶನ್ ಅಭಿನಯದಲ್ಲಿ ನಿರ್ದೇಶನ ಮಾಡಿದವರು. ಸಧ್ಯಕ್ಕೆ ಸ್ವಿಟ್ಜರ್ಲ್ಯಾಂಡ್ ಅಲ್ಲಿ ಎರಡು ಹಾಡುಗಳ ಚಿತ್ರಕರಣ ಮುಗಿದರೆ ಚಿತ್ರೀಕರಣ ಸಂಪೂರ್ಣ ಎಂದು ಹೇಳಿದ್ದಾರೆ. ಜಯಂತ್ ಕಾಯ್ಕಿಣಿ ಹಾಗೂ ಡಾ ವಿ ನಾಗೇಂದ್ರ ಪ್ರಸಾದ್ ಅವರ ಎರಡು ಹಾಡುಗಳು ಚಿತ್ರೀಕರಣದ ಕೊನೇ ಹಂತಕ್ಕೆ ಒಡೆಯ ಬಂದು ನಿಂತಿದೆ.

ಒಡೆಯ ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಮತ್ತೊಂದು ಬಹು ನಿರೀಕ್ಷಿತ ಸಿನಿಮಾ ತಮಿಳಿನ ವೀರಮ್ ಚಿತ್ರದ ಅವತರಿಣಿಕೆ. ಕನ್ನಡಕ್ಕೆ ಈ ಚಿತ್ರವನ್ನೂ ಒಗ್ಗಿಸಿಕೊಂಡು ಎಂ ಡಿ ಶ್ರೀಧರ್ ಹಲವಾರು ಬದಲಾವಣೆಗಳನ್ನು ತಂದಿದ್ದಾರೆ.

ಕೊಡಗಿನ ಬೆಡಗಿ ರಾಘವಿ ತಿಮ್ಮಯ್ಯ ಚಿತ್ರದ ಕಥಾ ನಾಯಕಿ. ಒಡೆಯ ಚಿತ್ರದಲ್ಲಿ ಐವರು ಸಹೋದರ ಪ್ರೀತಿಯ ಕಥೆ ಇದೆ. ಹೈದರಾಬಾದ್, ಬೆಂಗಳೂರು, ಮೈಸೂರು, ಚಿತ್ರದುರ್ಗ ಚಿತ್ರೀಕರಣವಾದ ಸ್ಥಳಗಳು.

ಅರ್ಜುನ್ ಜನ್ಯ ನಾಲ್ಕು ಹಾಡುಗಳಿಗೆ ರಾಗ ಹೊಸಡಿದ್ದಾರೆ, ಎ ವಿ ಕೃಷ್ಣ ಕುಮಾರ್ ಚಿತ್ರದ ಛಾಯಾಗ್ರಾಹಕರು. ಸಂದೇಶ್ ಕಂಬೈನ್ಸ್ ಎನ್ ಸಂದೇಶ್ ಅಮರ್ ಅಭಿಷೇಖ್ ಅಂಬರೀಶ್ ನಟಿಸಿದ ಚಿತ್ರದ ನಂತರ ಈ ಚಿತ್ರ ಒಡೆಯ ತಯಾರಿಸುತ್ತಿದೆ.

ಯಶಸ್, ಪಂಕಜ್, ನಿರಂಜನ್, ಸಮರ್ಥ ಸಹೋದರರಾಗಿ ದರ್ಶನ್ ಜೊತೆ ಕಾಯಿಸಿಕೊಂಡಿದ್ದಾರೆ. ಅವಿನಾಷ್, ರವಿ ಶಂಕರ್, ದೇವರಾಜ್, ಸಾಧು ಕೋಕಿಲ, ಚಿಕ್ಕಣ್ಣ ಸಹ ತಾರಗಣದಲ್ಲಿದ್ದಾರೆ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.