ETV Bharat / sitara

ಹುಡುಗನೊಂದಿಗೆ ಬಿಗಿಯಾದ ಅಪ್ಪುಗೆ... ಸೆನ್ಷೆನ್​ ​ಕ್ರಿಯೇಟ್ ಮಾಡಿತು ನಿತ್ಯಾ ಫೋಟೋ - ನಿತ್ಯಾ ಮೆನನ್

ಬಹುಭಾಷಾ ತಾರೆ ನಿತ್ಯಾ ಮೆನನ್​ ಕನ್ನಡದ ಮೈನಾ ಚಿತ್ರದಲ್ಲಿ ನಟಿಸಿದ್ದಾರೆ. ಕಾಂಟ್ರವರ್ಸಿ, ರೂಮರ್ಸ್​ಗಳಿಂದ ಈ ನಟಿ ಸಾಧ್ಯವಾದಷ್ಟು ಅಂತರ ಕಾಯ್ದುಕೊಂಡು ಬಂದಿದ್ದಾರೆ. ನಿನ್ನೆ ಅವರ ಫೋಟೋ ಸೃಷ್ಟಿಸುತ್ತಿದ್ದ ಊಹಾಪೋಹಗಳಿಗೆ ತಕ್ಷಣವೇ ತಡೆ ನೀಡಿದ್ದಾರೆ.

ಸ್ನೇಹಿತನೊಂದಿಗೆ ನಟಿ ನಿತ್ಯಾ
author img

By

Published : Mar 11, 2019, 8:46 AM IST

ಮೈನಾ ತಾರೆ ನಿತ್ಯಾ ಮೆನನ್​ ಯಾವತ್ತೂ ತಮ್ಮ ಪರ್ಸನಲ್​ ಲೈಫ್​ ಬಗ್ಗೆ ಮಾತಾಡಿದವರಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದರೂ ತಮ್ಮ ಫ್ಯಾಮಿಲಿ ಬಗ್ಗೆ ಎಲ್ಲಿಯೂ ತುಟಿ ಪಿಟಕ್​ ಅಂದವರಲ್ಲ.

ತೆರೆಯ ಮೇಲೆ ಮುದ್ದಾಗಿ ಕಾಣೋ ನಿತ್ಯಾ ಬಿಡಿಸಲಾರದ ಒಗಟು ಇದ್ದಂಗೆ ಅಂತಾ ಕೆಲವರು ಮಾತಾಡಿಕೊಳ್ಳುತ್ತಾರೆ. ಹೀಗೆ ಸಾಧ್ಯವಾದಷ್ಟು ತಮ್ಮ ಪರ್ಸನಲ್​ ಲೈಫ್​ ಒಗ್ಗೆ ಓಪನಪ್​ ಆಗದ ನಿತ್ಯಾ, ನಿನ್ನೆ ತಮ್ಮ ಅಭಿಮಾನಿಗಳಿಗೆ ಸಂತೋಷಭರಿತ ಶಾಕ್ ನೀಡಿದ್ರು. ವ್ಯಕ್ತಿವೋರ್ವನನ್ನು ಅಪ್ಪಿಕೊಂಡಿರುವ ಫೋಟೋ ಶೇರ್​ ಮಾಡಿ ಸೆನ್ಷೇಷನ್​ ಕ್ರಿಯೇಟ್​ ಮಾಡಿದ್ದರು.

ಟ್ವಿಟ್ಟರ್​​ನಲ್ಲಿ ಈ ಫೋಟೋ ಹಂಚಿಕೊಂಡಿದ್ದ ಅವರು, ಫ್ರೆಂಡ್ಸ್​​, ಲವ್​​ ಹಾಗೂ ಹಾಪಿನೆಸ್​ ಎಂದು ಬರೆದುಕೊಂಡಿದ್ದರು. ಈ ಫೋಟೋ ಟ್ವಿಟ್ಟರ್​ಗೆ ಬೀಳುತ್ತಿದ್ದಂತೆ ಸಾಕಷ್ಟು ಜನ ರಿಯಾಕ್ಟ್ ಮಾಡಿದ್ದರು. 'ಓ..ಲವ್ವಾ ? ಅಂತಾ ಕೆಲವರು ಪ್ರಶ್ನಿಸುತ್ತಿದ್ದರೆ, ಇನ್ನೂ ಕೆಲವರು ಹಾರ್ಟ್​ಬ್ರೇಕ್​ ಸಿಂಬಾಲ್​ ಪೋಸ್ಟ್​ ಮಾಡಿ ಬೇಸರ ವ್ಯಕ್ತಪಡಿಸುತ್ತಿದ್ದರು. ಮತ್ತೊಂದಿಷ್ಟು ಜನರು ತಮ್ಮ ನೆಚ್ಚಿನ ನಟಿ ಪ್ರೀತಿಯಲ್ಲಿ ಬಿದ್ರು ಅಂತಾ ಖುಷಿ ಪಟ್ರು. ಆದರೆ, ಕ್ಷಣಾರ್ಧದಲ್ಲೇ ಎಲ್ಲರ ನಿರೀಕ್ಷೆ ಸುಳ್ಳಾಗಿಸಿದ್ರು ನಿತ್ಯಾ.

ತಮ್ಮ ಪುಟಕ್ಕೆ ಬರುತ್ತಿರುವ ಕಾಮೆಂಟ್​ಗಳಿಗೆ ಬೆಚ್ಚಿದ ನಿತ್ಯಾ, ಕ್ಲಾರಿಫಿಕೇಶನ್ ನೀಡಿದ್ರು. ಫೋಟೋದಲ್ಲಿರುವ ವ್ಯಕ್ತಿ ಆಲಿವರ್ ಕಾಲ್ಹೌನ್ ಅಂತಾ. ಈತ ನನ್ನ ಒಳ್ಳೆಯ ಸ್ನೇಹಿತ, ಚಿಕ್ಕ ತಮ್ಮನಿದ್ದಂತೆ ಎನ್ನುವ ಮೂಲಕ ಕಾಡ್ಗಿಚ್ಚಿನಂತೆ ಹರಡುತ್ತಿದ್ದ ರೂಮರ್​ಗಳಿಗೆ ಬ್ರೇಕ್ ಹಾಕಿದ್ರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.