ಬಹು ಭಾಷಾ ನಟಿ ನಿತ್ಯಾ ಮೆನನ್ ಅಸ್ಪೃಶ್ಯತೆ ತಾಂಡವಾಡುತ್ತಿದ್ದ ತಮಿಳುನಾಡಿನ ಸಂತೋಷ್ಪುರ ಗ್ರಾಮಕ್ಕೆ ಭೇಟಿ ನೀಡಿ, ಅಲ್ಲಿನ ಮಕ್ಕಳ ಜೊತೆ ಬೆರೆತು ಮಕ್ಕಳಂತಾಗಿದ್ದಾರೆ.
21 ನೇ ಶತಮಾನದಲ್ಲೂ ಸಂತೋಷ್ಪುರಂ ಗ್ರಾಮದಲ್ಲಿ ಅಸ್ಪೃಶ್ಯತೆ ಆಳವಾಗಿ ಬೇರೂರಿತ್ತು. ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ ಎನ್ನುವ ಕಾರಣಕ್ಕೆ ಈ ಹಳ್ಳಿಯ ಜನರನ್ನು ಸಮಾಜದಲ್ಲಿ ಕೀಳು ದೃಷ್ಟಿಯಿಂದ ನೋಡಲಾಗುತ್ತಿತ್ತು. ಅಲ್ಲದೆ ಈ ಗ್ರಾಮ ಮೂಲಭೂತ ಸೌಲಭ್ಯಗಳಿಂದಲೂ ವಂಚಿತವಾಗಿತ್ತು. ಆದರೆ, ಇತ್ತೀಚೆಗೆ ಸಂತೋಷ್ಪುರಕ್ಕೆ ಬದಲಾವಣೆ ಗಾಳಿ ಬೀಸಿದೆ.
ಅಸ್ಪೃಶ್ಯತೆ ಎನ್ನುವ ಸಂಕೋಲೆಗಳಿಂದ ಈ ಗ್ರಾಮದ ಜನತೆ ಹೊರ ಬಂದಿದ್ದಾರೆ. ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಹಾಗೂ ಗ್ರಾಮದಲ್ಲಿ ಸ್ವಚ್ಛತೆ ಮೂಡಿದೆ. ಎಲ್ಲರಂತೆ ಅಲ್ಲಿಯ ಜನರು ಈಗ ನೆಮ್ಮದಿಯಿಂದ ಬದುಕುತ್ತಿದ್ದು, ಈ ಗ್ರಾಮಕ್ಕೆ ನಟಿ ನಿತ್ಯಾ ಮೆನನ್ ಭೇಟಿ ನೀಡಿ, ಅಲ್ಲಿಯ ಮಕ್ಕಳೊಂದಿಗೆ ಸಮಯ ಕಳೆದಿದ್ದಾರೆ.
- " class="align-text-top noRightClick twitterSection" data="
">
ಆ ಗ್ರಾಮದ ಮಕ್ಕಳಿಗೆ ಏನು ಕಲಿಸಬೇಕು ಎಂದು ಕೇಳಿಕೊಂಡಾಗ, ಡಾನ್ಸ್ ಮಾಡುವಂತೆ ಆ ಹುಡುಗರು ಮೆನನ್ ಬಳಿ ಕೇಳಿಕೊಂಡಿದ್ದಾರೆ. ಆ ಮುದ್ದು ಮಕ್ಕಳ ಬಯಕೆಯಂತೆ ಡ್ಯಾನ್ಸ್ ಮಾಡಿ ಮಕ್ಕಳ ಜೊತೆ ಸಂಭ್ರಮಿಸಿದೆ ಎಂದು ನಿತ್ಯ ಮೆನನ್ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.