ನಟ ನಿರೂಪ್ ಭಂಡಾರಿ 'ಪಾಪ ಪಾಂಡು' ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅರೆ..ಇದು ನಿಜಾನಾ..? ಸಿನಿಮಾ ಹೀರೋ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದೇಕೆ. ಅವರೇನಾದರೂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರಾ ಎಂಬ ಅನುಮಾನ ಬರುತ್ತದೆ.
ಆದರೆ ನಿರೂಪ್ ಈ ಧಾರಾವಾಹಿಯಲ್ಲಿ ಕಾಣಿಸಿಕೊಂಡಿರುವುದು ಇಂದು ಬಿಡುಗಡೆಯಾಗುತ್ತಿರುವ ‘ಆದಿಲಕ್ಷ್ಮಿ ಪುರಾಣ‘ ಧಾರಾವಾಹಿಯ ಪ್ರಮೋಶನ್ಗಾಗಿ. ಚಿತ್ರದಲ್ಲಿ ನಿರೂಪ್ ಯಾವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ಕೂಡಾ ಈ ಸೀರಿಯಲ್ ಮೂಲಕ ರಿವೀಲ್ ಆಗಿದೆ. ಸಿನಿಮಾದಲ್ಲಿ ನಿರೂಪ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಡ್ರಗ್ ಮಾಫಿಯಾ ಹಿಂದೆ ಬೀಳುವ ಅಧಿಕಾರಿ ಪಾತ್ರದಲ್ಲಿ ನಿರೂಪ್ ಕಾಣಿಸಿಕೊಂಡಿದ್ದು ಗುರುವಾರ ರಾತ್ರಿ ಪ್ರಸಾರ ಆದ ‘ಪಾಪ ಪಾಂಡು’ ಧಾರವಾಹಿಯಲ್ಲಿ ಕೂಡಾ ಇದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಪಾಂಡು ಎರಡನೇ ಮಗ ಶ್ರೀಹರಿ, ಮದುವೆ ಆಗಿರುವ ಹಿತ ಚಂದ್ರಶೇಖರ್ ಹಿಂದೆ ಬಿದ್ದಿರುತ್ತಾನೆ. ಆದರೆ ಹಿತ ಪತಿಯನ್ನು ಯಾರೋ ಅಪಹರಿಸಿರುತ್ತಾರೆ. ಆ ಸಮಯಕ್ಕೆ ಬರುವ ನಿರೂಪ್ ಭಂಡಾರಿ ಕಿಡ್ನಾಪ್ ಆದ ಹಿತ ಪತಿಯನ್ನು ರಕ್ಷಿಸಿ ಶ್ರೀಹರಿಗೆ ಒಂದು ಶಾಕಿಂಗ್ ವಿಚಾರ ತಿಳಿಸುವ ಸಂಧರ್ಭದೊಂದಿಗೆ ಆ ಕಂತು ಮುಗಿಯುತ್ತದೆ.
- " class="align-text-top noRightClick twitterSection" data="">
ಹಾಗೆ ನೋಡಿದರೆ ನಿರೂಪ್ ಭಂಡಾರಿ ತಂದೆ ಸುಧಾಕರ್ ಭಂಡಾರಿ ಕಿರುತೆರೆ ನಿರ್ದೇಶನ ಹಾಗೂ ನಿರ್ಮಾಣ ಮಾಡಿದವರು. ಕಿಚ್ಚ ಸುದೀಪ್ ಅವರನ್ನು ‘ಪ್ರೇಮದ ಕಾದಂಬರಿ’ ಮೂಲಕ ಸುಧಾಕರ್ ಭಂಡಾರಿ ಪರಿಚಯ ಮಾಡಿದವರು. ನಿರೂಪ್ ಭಂಡಾರಿ ಬಾಲನಟನಾಗಿ ‘ಅಡ್ವೊಕೇಟ್ ಅರ್ಜುನ್’ ಧಾರಾವಾಹಿಯಲ್ಲಿ ಕೂಡಾ ಅಭಿನಯಿಸಿದ್ದರು. ‘ರಂಗಿ ತರಂಗ’ ಮೂಲಕ ಅವರ ಅಣ್ಣ ಅನೂಪ್ ಭಂಡಾರಿ ನಿರ್ದೇಶನದಲ್ಲಿ ನಾಯಕನಾಗಿ ನಟಿಸಿದ್ದಾರೆ.