ದೆಹಲಿಯ ನಿರ್ಭಯಾ ಸಾಮೂಹಿಕ ಅತ್ಯಚಾರ ಪ್ರಕರಣದ ಅಪರಾಧಿಗಳಿಗೆ ದೆಹಲಿ ಹೈಕೋರ್ಟ್ ಮರಣದಂಡನೆಯ ದಿನಾಂಕ ನಿಗದಿ ಮಾಡಿದ್ದು ಇಡೀ ದೇಶವೇ ಸ್ವಾಗತಿಸಿದೆ.
ಜನವರಿ 22ರಂದು ಬೆಳಿಗ್ಗೆ 7 ಗಂಟೆಗೆ ಗಲ್ಲಿಗೇರಿಸುವಂತೆ ನ್ಯಾಯಾಲಯ ತೀರ್ಪು ನೀಡಿದೆ. ನಾಲ್ವರು ಅತ್ಯಾಚಾರಿಗಳಿಗೆ ಸರಿಯಾದ ಶಿಕ್ಷೆ ಆಗಿದೆ ಎಂದು ದೇಶಾದ್ಯಂತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಜೊತೆಗೆ ಸಿನಿಮಾ ತಾರೆಯರು ತೀರ್ಪಿನ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಹಾಗೂ ಗೆಳೆಯ ಭುವನ್ ಪೊನ್ನಪ್ಪ ಅವರು ದೆಹಲಿ ಕೋರ್ಟ್ ತೀರ್ಪಿನ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
ಈಗ ನಿರ್ಭಯಾ ತಂದೆ ಮತ್ತು ತಾಯಿಗೆ ಖುಷಿಯಾಗಿದೆ. ಇನ್ನು ಮುಂದೆ ಅತ್ಯಾಚಾರಿಗಳಿಗೆ ಇದು ಪಾಠವಾಗಬೇಕು. 2020ನೇ ವರ್ಷ ಹೆಣ್ಣು ಮಕ್ಕಳಿಗೆ ಒಳ್ಳೆಯ ವರ್ಷ ಆಗಬೇಕು ಎಂದು ಹರ್ಷಿಕಾ ಪೂಣಚ್ಚ ಹೇಳಿದರು. ಗೆಳೆಯ ಭುವನ್ ಕೂಡ ಈ ತೀರ್ಪುನ್ನ ಸ್ವಾಗತಿಸಿದ್ದು, ನಾವು ನಮ್ಮ ಮನೆ ಹೆಣ್ಣು ಮಕ್ಕಳನ್ನ ರಕ್ಷಿಸುವ ಕೆಲಸ ಆಗಬೇಕು' ಎಂದರು.