ಸಿಂಗಿಂಗ್ ಶೋ 'ದಿ ವಾಯ್ಸ್' ಕಾರ್ಯಕ್ರಮಕ್ಕೆ ಗಾಯಕ ನಿಕ್ ಜೋನಸ್ ತರಬೇತುದಾರರಾಗಿ ಕಮ್ ಬ್ಯಾಕ್ ಮಾಡಲಿದ್ದಾರೆ. ಅಲ್ಲದೆ ಕೆಲ್ಲಿ ಕ್ಲಾರ್ಕ್ಸನ್ ಮತ್ತು ಬ್ಲೇಕ್ ಶೆಲ್ಟನ್ ಜೊತೆ ದಿ ವಾಯ್ಸ್ ರಿಯಾಲಿಟಿ ಶೋ 20ರ ಆವೃತ್ತಿಯ ತೀರ್ಪುಗಾರರಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ.
ಮುಂದಿನ ವರ್ಷ ಆರಂಭವಾಗುವ ದಿ ವಾಯ್ಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಿಗೆ ಗಾಯನದ ತರಬೇತಿಯನ್ನು ನಿಕ್ ಜೋನಸ್ ನೀಡಲಿದ್ದಾರೆ. ಈ ಬಗ್ಗೆ ಶೋನ ಅಧಿಕೃತ ಪುಟದಲ್ಲಿ ಮಾಹಿತಿ ನೀಡಲಾಗಿದೆ. ನಿಕ್ ಜೋನಸ್ ಬರುವಿಕೆಯನ್ನು ರಿಬ್-ಟಿಕ್ಲಿಂಗ್ ಟೀಸರ್ ಕ್ಲಿಪ್ನಲ್ಲಿ ತಿಳಿಸಲಾಗಿದ್ದು, ಸಾಮಾಜಿಕ ಜಾಲತಾಣದ ಪುಟದಲ್ಲಿ ಹಂಚಿಕೊಳ್ಳಲಾಗಿದೆ.
ದಿ ವಾಯ್ಸ್ ಟ್ವಿಟರ್ ಖಾತೆಯಲ್ಲಿ 'ನಿಕ್ ಈಸ್ ಬ್ಯಾಕ್' ಎಂದು ಟ್ವೀಟ್ ಮಾಡಲಾಗಿದೆ. ಅದರ ಜೊತೆ ನಿಕ್ ಜೋನಸ್ ಬಜರ್ ಹೊತ್ತುವ ಹಾಗೂ ಉಳಿದ ತೀರ್ಪುಗಾರರು ನಡೆದು ಬರುವ ವಿಡಿಯೋವನ್ನು ಸೇರಿಸಲಾಗಿದೆ. ಈ ಟ್ವೀಟ್ ಅನ್ನು ನಿಕ್ ಜೋನಸ್ ರಿಟ್ವೀಟ್ ಮಾಡಿದ್ದಾರೆ.
-
Warriors never sleep. I’m back and ready to win this thing 🏆 See you next season on @nbcthevoice!!
— Nick Jonas (@nickjonas) November 17, 2020 " class="align-text-top noRightClick twitterSection" data="
PS - Hope you’ve been training @blakeshelton @kellyclarkson @johnlegend.... 👀 #TheVoice pic.twitter.com/yFAPq18Y4r
">Warriors never sleep. I’m back and ready to win this thing 🏆 See you next season on @nbcthevoice!!
— Nick Jonas (@nickjonas) November 17, 2020
PS - Hope you’ve been training @blakeshelton @kellyclarkson @johnlegend.... 👀 #TheVoice pic.twitter.com/yFAPq18Y4rWarriors never sleep. I’m back and ready to win this thing 🏆 See you next season on @nbcthevoice!!
— Nick Jonas (@nickjonas) November 17, 2020
PS - Hope you’ve been training @blakeshelton @kellyclarkson @johnlegend.... 👀 #TheVoice pic.twitter.com/yFAPq18Y4r
ಇದೇ ವಿಡಿಯೋವನ್ನು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿರುವ ನಿಕ್ ಜೋನಸ್, ಯೋಧರು ಎಂದೂ ಮಲಗುವುದಿಲ್ಲ. ನಾನು ಕಾರ್ಯಕ್ರಮಕ್ಕೆ ಬರಲು ಸಿದ್ದ ಎಂದು ಬರೆದಿದ್ದಾರೆ. ಇನ್ನು 18ನೇ ದಿ ವಾಯ್ಸ್ ಸಿಂಗಿಂಗ್ ಶೋನಲ್ಲೂ ನಿಕ್ ಜೋನಸ್ ಕೆಲಸ ಮಾಡಿದ್ರು.