ETV Bharat / sitara

ಪವರ್ ಸ್ಟಾರ್ ಬ್ಯಾನರ್​​​ನಿಂದ ಬರ್ತಿದೆ ಮತ್ತೊಂದು ಹೊಸ ಸಿನಿಮಾ - Latest news about PRK Productions

ಪಿಆರ್​ಕೆ ಪ್ರೊಡಕ್ಷನ್ಸ್​​​​​​​​​​​ ಬ್ಯಾನರ್​​​ ಅಡಿ ಅಶ್ವಿನಿ ಪುನೀತ್ ರಾಜ್​ಕುಮಾರ್ 'ಫ್ಯಾಮಿಲಿ ಪ್ಯಾಕ್' ಎಂಬ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದ್ದು ಗಮನ ಸೆಳೆಯುತ್ತಿದೆ.

New film from PRK productions
ಫ್ಯಾಮಿಲಿ ಪ್ಯಾಕ್'
author img

By

Published : Jun 17, 2020, 4:24 PM IST

ಪುನೀತ್ ರಾಜ್​​ಕುಮಾರ್ ಪಿಆರ್​ಕೆ ಪ್ರೊಡಕ್ಷನ್ಸ್​​​​​​​​​​ ಸದಭಿರುಚಿಯ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವ ಚಿತ್ರ ನಿರ್ಮಾಣ ಸಂಸ್ಥೆ. ಇದೀಗ ಅವರ ಪ್ರೊಡಕ್ಷನ್ ಅಡಿ ಮತ್ತೊಂದು ಹೊಸ ಚಿತ್ರ ಬರುತ್ತಿದೆ.

'ಫ್ಯಾಮಿಲಿ ಪ್ಯಾಕ್' ಮೋಷನ್ ಪೋಸ್ಟರ್

'ಮಾಯಾ ಬಜಾರ್' ಸಿನಿಮಾ ಬಳಿಕ ಮತ್ತೊಂದು ವಿಭಿನ್ನ ಕಥೆ ಆಧರಿಸಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. 'ಫ್ಯಾಮಿಲಿ ಪ್ಯಾಕ್' ಎಂಬ ಕ್ಯಾಚಿ ಟೈಟಲ್ ಹೊಂದಿರುವ ಸಿನಿಮಾದ ಮೋಷನ್ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದೆ. 'ಸಂಕಷ್ಟಕರ ಗಣಪತಿ' ಸಿನಿಮಾ ನಂತರ ಲಿಖಿತ್ ಶೆಟ್ಟಿ ಹಾಗೂ ಅಮೃತಾ ಅಯ್ಯಂಗಾರ್ ಜೊತೆಯಾಗಿದ್ದಾರೆ.

New film from PRK productions
'ಫ್ಯಾಮಿಲಿ ಪ್ಯಾಕ್'

ರಂಗಾಯಣ ರಘು, ಅಚ್ಯುತ್ ಕುಮಾರ್, ದತ್ತಣ್ಣ, ತಿಲಕ್, ನಾಗಭೂಷಣ್ ಅನೇಕ ಕಲಾವಿದರ ದಂಡು ಈ ಚಿತ್ರದಲ್ಲಿದೆ. ಇದೊಂದು ಲವ್, ಕಾಮಿಡಿ ಸಿನಿಮಾ.‌ 'ಸಂಕಷ್ಟಕರ ಗಣಪತಿ' ಚಿತ್ರವನ್ನು ನಿರ್ದೇಶನ ಮಾಡಿದ್ದ ಅರ್ಜುನ್ ಕುಮಾರ್. ಎಸ್​​​​ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಗುರು ಕಿರಣ್ ಸಂಗೀತವಿದ್ದು, ಮಾಸ್ತಿ ಸಂಭಾಷಣೆ ಹಾಗೂ ಉದಯ್ ಲೀಲಾ ಛಾಯಾಗ್ರಹಣವಿದೆ. ಅಶ್ವಿನಿ ಪುನೀತ್ ರಾಜ್‍ಕುಮಾರ್ ಜೊತೆಗೂಡಿ ಲಿಖಿತ್ ಶೆಟ್ಟಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.