ಬಣ್ಣದ ಲೋಕದ ಚಂದದ ಅಕ್ಕ ತಂಗಿಯರು ಬೆಳಕಿನ ಹಬ್ಬ ದೀಪಾವಳಿಯನ್ನು ಬಹಳ ಖುಷಿಯಿಂದ ಆಚರಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಗೊಂಬೆ ಅಲಿಯಾಸ್ ಶ್ರುತಿಯಾಗಿ ಮಿಂಚುತ್ತಿರುವ ನೇಹಾ ಗೌಡ ಮತ್ತು 'ಇಂತಿ ನಿನ್ನ ಪ್ರೀತಿಯ' ಸಿನಿಮಾದಲ್ಲಿ ನಾಯಕಿಯಾಗಿ ಚಂದನವನಕ್ಕೆ ಕಾಲಿಟ್ಟ ಚೆಂದುಳ್ಳಿ ಚೆಲುವೆ ಸೋನು ಗೌಡ ದೀಪಾವಳಿಯನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ.
ಮೇಕಪ್ ರಾಮಕೃಷ್ಣರ ಮುದ್ದಿನ ಮಕ್ಕಳಾಗಿರುವ ಸೋನು ಮತ್ತು ನೇಹಾ ದೀಪಾವಳಿಯ ಸಡಗರದಲ್ಲಿದ್ದಾರೆ. ಅಕ್ಕ ಸೋನು ಗೌಡ ಬೆಳ್ಳಿತೆರೆಯ ಮೂಲಕ ಚಂದನವನದಲ್ಲಿ ಮಿಂಚುತ್ತಿದ್ದರೆ, ತಂಗಿ ನೇಹಾ ಗೌಡ ಕಿರುತೆರೆ ವೀಕ್ಷಕರ ಪ್ರೀತಿಯ ಗೊಂಬೆಯಾಗಿದ್ದಾರೆ. ಇಂತಿಪ್ಪ ಅಕ್ಕ ತಂಗಿಯರು ಸ್ನೇಹಿತರು ಮಾತ್ರವಲ್ಲ ಎಲ್ಲಾ ಕಾರ್ಯಕ್ರಮಗಳಲ್ಲೂ ಇಬ್ಬರೂ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಾರೆ. ಇದೀಗ ಬೆಳಕಿನ ಹಬ್ಬವನ್ನು ಕೂಡಾ ಇವರು ಜೊತೆಯಾಗಿ ಆಚರಿಸಿದ್ದಾರೆ.