ಬಾಲಿವುಡ್ ನಟರಾದ ನೀತು ಕಪೂರ್, ವರುಣ್ ಧವನ್ ಮತ್ತು ನಿರ್ದೇಶಕ ರಾಜ್ ಮೆಹ್ತಾಗೆ ಕೆಲ ದಿನಗಳ ಹಿಂದೆ ಕೊರೊನಾ ಕಾಣಿಸಿಕೊಂಡಿದ್ದು, ಇದೀಗ ಗುಣಮುಖರಾಗಿದ್ದಾರೆ. ಅಲ್ಲದೆ ಅತೀ ಶೀಘ್ರ 'ಜುಗ್ ಜುಗ್ ಜೇಯೋ' ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗುತ್ತಾರಂತೆ.
ಇದೇ ಚಿತ್ರತಂಡದ ಜೊತೆಗಿದ್ದ ಅನಿಲ್ ಕಪೂರ್, ಕಿಯಾರಾ ಅಡ್ವಾಣಿ ಮತ್ತು ಪ್ರಜಕ್ತಾ ಕೊಲಿಗೆ ಕೊರೊನಾ ನೆಗೆಟಿವ್ ಬಂದಿತ್ತು. ಈ ಹಿಂದೆ ಚಿತ್ರತಂಡ ಎಲ್ಲಾ ನಟರು ಕೊರೊನಾದಿಂದ ಗುಣಮುಖರಾಗುವ ತನಕ ಶೂಟಿಂಗ್ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿತ್ತು.
- " class="align-text-top noRightClick twitterSection" data="
">
ಇದನ್ನೂ ಓದಿ : ನೀತು ಕಪೂರ್, ವರುಣ್ ಧವನ್, ರಾಜ್ ಮೆಹ್ತಾಗೆ ಕೊರೊನಾ ಪಾಸಿಟಿವ್
ವರುಣ್ ಧವನ್ ಸದ್ಯ ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿ ನೆಗೆಟಿವ್ ಬಂದಿದೆ. ಈ ಬಗ್ಗೆ ತಮ್ಮ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಕೊರೊನಾ ನೆಗೆಟಿವ್ ಬಂದಿರುವ ಕಾರಣ ಇನ್ನು ಕೆಲವೇ ದಿನಗಳಲ್ಲಿ ಶೂಟಿಂಗ್ನಲ್ಲಿ ಭಾಗಿಯಾಗುವ ಎಲ್ಲಾ ಸಾಧ್ಯತೆಗಳಿವೆ.
- " class="align-text-top noRightClick twitterSection" data="
">
ನಿರ್ದೇಶಕ ರಾಜ್ ಮೆಹ್ತಾ ಕಾರಣಾಂತರಗಳಿಂದ ಕೆಲ ದಿನಗಳ ಕಾಲ ಶೂಟಿಂಗ್ನಲ್ಲಿ ಭಾಗಿಯಾಗದ ಕಾರಣ ನಿರ್ಮಾಪಕ ಶಶಾಂಕ್ ಕೈಟಾನ್ ಚಿತ್ರತಂಡವನ್ನು ಮುನ್ನಡೆಸುವುದಾಗಿ ತಿಳಿಸಿದ್ದಾರೆ.
ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿರುವ ಯೂಟ್ಯೂಬ್ ತಾರೆ ಪ್ರಜಕ್ತಾಗೆ ಕೊರೊನಾ ನೆಗೆಟಿವ್ ಬಂದಿದ್ದು, ಈ ಮಾಹಿತಿಯನ್ನು ನಟಿ ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟಪಡಿಸಿದ್ದರು.