ಪ್ರತೀವರ್ಷ ಕ್ರಿಸ್ ಮಸ್ ಬಂತೂ ಅಂದ್ರೆ ಸೆಲೆಬ್ರಿಟಿಗಳು ಈ ಹಬ್ಬವನ್ನು ಸಖತ್ ಎಂಜಾಯ್ ಮಾಡ್ತಾರೆ. ಇಷ್ಟೆ ಅಲ್ಲ ಒಳ್ಳೊಳ್ಳೆ ಫೋಟೋಗಳನ್ನು ಕ್ಲಿಕ್ಕಿಸಿಕೊಡು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅಭಿಮಾನಿಗಳಿಗೆ ಖುಷಿ ನೀಡುತ್ತಾರೆ.
ಇದೀಗ ನಯನತಾರ ಪ್ರಿಯಕರ ಎನ್ನಲಾದ ವಿಘ್ನೇಶ್ ಶಿವನ್ ಜೊತೆ ನಯನತಾರಾ ಕ್ರಿಸ್ಮಸ್ ಆಚರಣೆಯನ್ನು ಮಾಡಿದ್ದಾರೆ. ಜೊತೆಜೊತೆಯಾಗಿ ಕೈ ಹಿಡಿದು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಸಖತ್ ವೈರಲ್ ಆಗುತ್ತಿವೆ.
ಇದನ್ನೂ ಓದಿ : ಈ ಬಾರಿ ಚಾಟ್ ಕಾರ್ನರ್ನಲ್ಲಿ ಶೈನ್ ಆಗಲು ಹೊರಟಿರುವುದು ಇವರೇ
ಸದ್ಯ ನಯನ ತಾರಾ ರಜಿನಿಕಾಂತ್ ಅಭಿನಯದ ಅಣ್ಣಾತೆ ಸಿನಿಮಾ ಶೂಟಿಂಗ್ನಲ್ಲಿ ಇದ್ದಾರೆ. ಆದ್ರೆ ಸೂಪರ್ಸ್ಟಾರ್ ರಜಿನಿಕಾಂತ್ಗೆ ಸ್ವಲ್ಪ ಆರೋಗ್ಯದ ಸಮಸ್ಯೆ ಇರುವುದರಿಂದ ಶೂಟಿಂಗ್ ಅನ್ನು ನಿಲ್ಲಿಸಲಾಗಿದೆ. ಇದೇ ಹಿನ್ನೆಲೆಯಲ್ಲಿ ನಟಿ ನಯನ ಕೂಡ ಶೂಟಿಂಗ್ನಿಂದ ಬ್ರೇಕ್ ಪಡೆದು ಹೈದ್ರಾಬಾದ್ನಿಂದ ಚೆನ್ನೈಗೆ ವಾಪಸ್ಸಾಗಿದ್ದಾರೆ.
ಅಣ್ಣಾತೆ ಸಿನಿಮಾದಲ್ಲಿ ರಜಿನಿಕಾಂತ್ ಜೊತೆ ನಯನತಾರ, ಸೇತುಪತಿ-ಸಮಂತಾ-ನಯನತಾರಾ ನಟಿಸುತ್ತಿದ್ದಾರೆ.