ETV Bharat / sitara

'ನಾನಾ ನೀನಾ' ಅಂತಿದ್ದಾರೆ ನವೀನ್ ಕೃಷ್ಣ...ಅಕಪೆಲ್ಲ ಶೈಲಿಯ ಹಾಡು ನಾಳೆ ರಿಲೀಸ್​​​ - Naveen Krishna Acapella style song

ಹಿರಿಯ ನಟ ಶ್ರೀನಿವಾಸ ಮೂರ್ತಿ ಪುತ್ರ ನವೀನ್ ಕೃಷ್ಣ ಆರಂಭಿಸಿರುವ ಹೊಸ ಯೂಟ್ಯೂಬ್ ಚಾನೆಲ್​ನಲ್ಲಿ ಅಕಪೆಲ್ಲ ಶೈಲಿಯಲ್ಲಿ ಅವರೇ ಹಾಡಿರುವ 'ನಾನಾ ನೀನಾ' ಎಂಬ ಹಾಡು ನಾಳೆ ಬಿಡುಗಡೆಯಾಗುತ್ತಿದೆ.

Naveen Krishna Acapella style song
ನವೀನ್ ಕೃಷ್ಣಅಕಪೆಲ್ಲ ಶೈಲಿಯ ಹಾಡು
author img

By

Published : Sep 24, 2020, 10:02 AM IST

ಸದಾ ಒಂದಲ್ಲಾ ಒಂದು ಕೆಲಸದಲ್ಲಿ ನಿರತರಾಗಿರುವ ನಟ, ಬರಹಗಾರ, ಹಾಡುಗಾರ ನವೀನ್ ಕೃಷ್ಣ ಕೊರೊನಾ ಸಮಯದಲ್ಲಿ ತಮ್ಮ ಯೂಟ್ಯೂಬ್ ಹಾಗೂ ಫೇಸ್​ಬುಕ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಜೊತೆಗೆ ತಮ್ಮ ಪುತ್ರರಾದ ಹರ್ಷಿತ್​​ ಹಾಗೂ ಹರುಷ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸುವ ಪ್ರಯತ್ನ ಕೂಡಾ ಮಾಡುತ್ತಿದ್ದಾರೆ.

Naveen Krishna Acapella style song
ನವೀನ್ ಕೃಷ್ಣಅಕಪೆಲ್ಲ ಶೈಲಿಯ ಹಾಡು ನಾಳೆ ಬಿಡುಗಡೆ

ದಯಾಳ್ ಪದ್ಮನಾಭನ್ ನಿರ್ದೇಶಿಸುತ್ತಿರುವ 'ಆ ಕರಾಳ ರಾತ್ರಿ' ಚಿತ್ರದ ತೆಲುಗು ರೀಮೇಕ್​​​​​ನಲ್ಲಿ ನವೀನ್ ಕೃಷ್ಣ ಸಹ ನಿರ್ದೇಶಕ ಹಾಗೂ ನಟರಾಗಿ ಕೂಡಾ ಕೆಲಸ ಮಾಡಲಿದ್ದಾರೆ. ಅದಕ್ಕೂ ಮುನ್ನ ಅವರು ತಮ್ಮದೇ ಆದ ಯೂಟ್ಯೂಬ್​ ಚಾನೆಲ್​ ಒಂದನ್ನು ಆರಂಭಿಸಿದ್ದಾರೆ. ಈ ಯೂಟ್ಯೂಬ್ ಚಾನೆಲ್ ಮೂಲಕ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನವೀನ್ ಕೃಷ್ಣ ನೀಡಲಿದ್ದಾರೆ.

Naveen Krishna Acapella style song
ನವೀನ್ ಕೃಷ್ಣ

ಏನೇ ಮಾಡು ಕೊರೊನಾ, ನಡೆಯಬೇಕು ಜೀವನ...ನೋಡೇ ಬಿಡೋಣ...ಇನ್ನು ನಾನಾ ಇಲ್ಲ ನೀನಾ....ಎಂಬ ಹಾಡನ್ನು ತಮ್ಮ ಯೂಟ್ಯೂಬ್​ ಚಾನೆಲ್ ಮೂಲಕ ನಾಳೆ ಬಿಡುಗಡೆ ಮಾಡಲಿದ್ದಾರೆ. ಈ ಹಾಡಿಗೆ ಸಾಹಿತ್ಯ ಬರೆದಿರುವವರು ಸಾಯಿ ಸುಕನ್ಯ. ಆಕಪೆಲ್ಲ ಶೈಲಿಯಲ್ಲಿ ಈ ಹಾಡು ಮೂಡಿ ಬರಲಿದೆ. ಅಂದರೆ ವಾದ್ಯಗಳ ಶಬ್ಧವನ್ನು ಕೂಡಾ ನವೀನ್ ಕೃಷ್ಣ ತಮ್ಮ ಕಂಠದಿಂದ ನುಡಿಸಲಿದ್ದಾರೆ. 3:30 ಅವಧಿಯ ನಿಮಿಷದ 'ನಾನಾ ನೀನಾ' ಹಾಡು ನಾಳೆ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.