ಇತ್ತೀಚೆಗಷ್ಟೇ 66ನೇ ರಾಷ್ಟ್ರ ಪ್ರಶಸ್ತಿ ಪಟ್ಟಿ ಪ್ರಕಟವಾಗಿದ್ದು, ಕನ್ನಡ ಸಿನಿಮಾಗಳಿಗೆ ಇದೇ ಮೊದಲ ಬಾರಿಗೆ 13 ರಾಷ್ಟ್ರ ಪ್ರಶಸ್ತಿ ದೊರೆತಿದೆ. ಇದೇ ಮೊದಲ ಬಾರಿಗೆ ಕನ್ನಡ ಕಿರುಚಿತ್ರಕ್ಕೆ ಕೂಡಾ 66ನೇ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ವಿಚಾರ.
ರಾಷ್ಟ್ರ ಪ್ರೇಮಿ ಭಗತ್ ಸಿಂಗ್ ಕುರಿತಾದ ‘ಮಹಾನ್ ಹುತಾತ್ಮ’ ಎಂಬ ಸಿನಿಮಾಗೆ ಈ ಬಾರಿ ರಾಷ್ಟ್ರ ಪ್ರಶಸ್ತಿ ದೊರೆತಿದೆ. 34 ನಿಮಿಷ ಅವಧಿಯ ಈ ಸಿನಿಮಾವನ್ನು ಹೆಸರಾಂತ ನಟ, ನಿರ್ದೇಶಕ ಸುನಿಲ್ ಪುರಾಣಿಕ್ ಪುತ್ರ ಸಾಗರ್ ಪುರಾಣಿಕ್ ನಿರ್ದೇಶಿಸಿದ್ದಾರೆ. ಇದು ಅವರು ನಿರ್ದೇಶಿಸಿರುವ ಚೊಚ್ಚಲ ಕಿರುಚಿತ್ರ. ಆಗಸ್ಟ್ 25ರಂದು ಬೆಂಗಳೂರಿನ ಮಲ್ಲೇಶ್ವರಂನ ಹಿಮಾಂಶು ಶಾಲೆ ಎದುರಿನ ಎಸ್.ಆರ್.ವಿ ಚಿತ್ರಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ಈ ಕಿರುಚಿತ್ರ ಪ್ರದರ್ಶನ ಆಗುತ್ತಿದೆ.
- " class="align-text-top noRightClick twitterSection" data="">
ಸಾಗರ್ ಪುರಾಣಿಕ್ ಈ ಕಿರುಚಿತ್ರವನ್ನು ದೇಶಕ್ಕಾಗಿ ಸೇವೆ ಸಲ್ಲಿಸಿದ ವೀರ ಯೋಧರಿಗೆ ಅರ್ಪಣೆ ಮಾಡಿದ್ದಾರೆ. ‘ಮಹಾನ್ ಹುತಾತ್ಮ‘ ಕಿರುಚಿತ್ರದಲ್ಲಿ ಅಕ್ಷಯ್ ಚಂದ್ರಶೇಖರ್, ಅದ್ವಿತಿ ಶೆಟ್ಟಿ, ಪ್ರಣಯರಾಜ ಶ್ರೀನಾಥ್, ಸಾಗರ್ ಪುರಾಣಿಕ್, ಅಚಿಂತ್ಯ ಪುರಾಣಿಕ್, ವರುಣ್ ಶ್ರೀನಿವಾಸ್, ಕುಲ್ದೀಪ್, ಮನೋಜ್, ಶಶಿಕುಮಾರ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ಕಿರುಚಿತ್ರಕ್ಕೆ ಅಭಿಲಾಷ್ ಕಲಾತಿ ಛಾಯಾಗ್ರಹಣ, ಅನಂತ್ ಕಾಮತ್ ಸಂಗೀತ, ಮಹೇಶ್ ಸಂಕಲನ ಇದೆ.