ಪವರ್ಸ್ಟಾರ್ ಪುನೀತ್ರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ ನಟಸಾರ್ವಭೌಮ ಸಿನಿಮಾ ಗುರುವಾರದಂದು ಬಿಡುಗಡೆಯಾಗುತ್ತಿದ್ದು, ಎಂದಿನಂತೆ ಅಪ್ಪು ಅಭಿಮಾನಿಗಳು ಚಿತ್ರದ ಬಿಡುಗಡೆಯನ್ನು ಕಾತರದಿಂದ ಕಾಯುತ್ತಿದ್ದಾರೆ.
ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯದ ಸಾಕಷ್ಟು ಚಿತ್ರಮಂದಿರದಲ್ಲಿ ನಟಸಾರ್ವಭೌಮ ಏಕಕಾಲಕ್ಕೆ ತೆರೆಕಾಣುತ್ತಿದೆ. ಬೆಂಗಳೂರಿನಲ್ಲೇ ಮೊದಲ ದಿನ ದಾಖಲೆಯ 550 ಪ್ರದರ್ಶನಗಳನ್ನು ಕಾಣಲಿದೆ. ಈ ಮೂಲಕ ಕೆಜಿಎಫ್ನ 525 ಶೋಗಳ ದಾಖಲೆಯನ್ನು ಅಪ್ಪು ಚಿತ್ರ ಬ್ರೇಕ್ ಮಾಡಲಿದೆ.
ಇಂದಿನಿಂದಲೇ ನಟಸಾರ್ವಭೌಮನ ಆಟ ಶುರು..!
ನಟಸಾರ್ವಭೌಮನ ರಿಲೀಸ್ ಗೆ ಕೆಲವೇ ಗಂಟೆಗಳು ಮಾತ್ರ ಬಾಕಿ ಇದೆ. ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಹಾರರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಅಪ್ಪು ಫ್ಯಾನ್ಸ್ ಕುತೂಹಲ ಮತ್ತಷ್ಟು ಹೆಚ್ಚಿದೆ.
ರಣ ವಿಕ್ರಮ ಚಿತ್ರದ ಬಳಿಕ ಪವನ್ ಒಡೆಯರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ಡಿ.ಇಮ್ಮಾನ್ ಸಂಗೀತವಿದ್ದು, ವೈದಿ ಎಸ್ ಛಾಯಾಗ್ರಹಣವಿದೆ. ಪೀಟರ್ ಹೆನ್ ಸಾಹಸ ನಿರ್ದೇಶನ, ಜಾನಿ, ಭೂಷಣ್ ನೃತ್ಯ ನಿರ್ದೇಶನವಿದೆ. ಪುನೀತ್ ರಾಜಕುಮಾರ್ ಜೊತೆ ರಚಿತಾ ರಾಮ್ ಹಾಗೂ ಅನುಪಮ ಪರಮೇಶ್ವರನ್ ರೊಮ್ಯಾನ್ಸ್ ಮಾಡಿದ್ದಾರೆ. ಇದರ ಜೊತೆಗೆ ಸಾಧುಕೋಕಿಲ, ರವಿಶಂಕರ್, ಚಿಕ್ಕಣ್ಣ, ಶ್ರೀನಿವಾಸಮೂರ್ತಿ, ಬಾಹುಬಲಿ ಖ್ಯಾತಿಯ ಪ್ರಭಾಕರ್ ಸೇರಿದಂತೆ ದೊಡ್ಡ ತಾರಬಳಗವಿದೆ. ರಾಕ್ಲೈನ್ ವೆಂಕಟೇಶ್ ಬಹುಕೋಟಿ ವೆಚ್ಚದಲ್ಲಿ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.
ಅಭಿಮಾನಿಗಳ ಒತ್ತಾಯದ ಮೇರೆಗೆ ಬೆಂಗಳೂರಿನ ಮಾಗಡಿ ರೋಡ್ನಲ್ಲಿ ಪ್ರಸನ್ನ ಚಿತ್ರಮಂದಿರದಲ್ಲಿ ಇಂದು ರಾತ್ರಿ 10 ಗಂಟೆಗೆ ಪ್ರದರ್ಶನ ಆರಂಭಿಸಲು ನಿರ್ಧರಿಸಲಾಗಿದೆ.