ಬಾಕ್ಸ್ ಆಫೀಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಬಿಗ್ ಬಜೆಟ್ ಹೊಂದಿರುವ ಈ ಚಿತ್ರ ಬಿಡುಗಡೆಗೆ ಇನ್ನು ಎರಡು ದಿನಗಳು ಬಾಕಿ ಉಳಿದಿರುವಾಗಲೇ ಮುಂಗಡ ಬುಕಿಂಗ್ ಶುರುವಾಗಿದೆ. ಅಲ್ಲದೆ ಬೆಂಗಳೂರಿನ ಸುತ್ತಮುತ್ತಲ ಸುಮಾರು ಚಿತ್ರಮಂದಿರಗಳಲ್ಲಿ ಈಗಾಗಲೇ ದರ್ಶನ್ ಕಟೌಟ್ ರಾರಾಜಿಸುತ್ತಿವೆ. ಅದರಂತೆ ಬೆಂಗಳೂರಿನ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರ ವಾದ ನರ್ತಕಿ ಚಿತ್ರಮಂದಿರದಲ್ಲಿ ಕುರುಕ್ಷೇತ್ರ ಬಿಡುಗಡೆಯಾಗುತ್ತಿದೆ.
ಇನ್ನು ನರ್ತಕಿ ಚಿತ್ರಮಂದಿರಕ್ಕೆ ದರ್ಶನ್ ಚಿತ್ರಗಳಿಗೂ ತುಂಬಾ ಅವಿನವಭಾವ ಸಂಬಂಧವೆನ್ನಬಹುದು. ದರ್ಶನ್ ಅಭಿನಯದ 50 ಚಿತ್ರಗಳು ಈಗಾಗಲೇ ಬಿಡುಗಡೆಯಾಗಿವೆ. ಅಲ್ಲದೆ ಈ ಐವತ್ತು ಚಿತ್ರಗಳಲ್ಲಿ ಸುಮಾರು 21 ಚಿತ್ರಗಳು ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿವೆ.
ದಾಸ, ಬುಲ್ ಬುಲ್, ಸಾರಥಿ, ಶಾಸ್ತ್ರಿ, ಕಲಾಸಿಪಾಳ್ಯ, ಗಜ, ಯಜಮಾನ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಭೂಪತಿ, ಅರ್ಜುನ, ಬೃಂದಾವನ, ಭಗವಾನ್, ತಂಗಿಗಾಗಿ, 'ಅನಾಥರು, ಕಿಟ್ಟಿ, ವಿರಾಟ್, ಸ್ನೇಹನ ಪ್ರೀತಿನಾ, ಈ ಸಿನಿಮಾಗಳು ನರ್ತಕಿ ಚಿತ್ರ ಮಂದಿರದಲ್ಲಿ ತೆರೆ ಕಂಡಿವೆ.
ಇವಲ್ಲದೆ ದರ್ಶನ್ ಗೆಸ್ಟ್ ರೋಲ್ನಲ್ಲಿ ಅಭಿನಯಿಸಿರುವ ಅಮರ್, ಪ್ರೇಮ ಬರಹ ಚಿತ್ರಗಳು ನರ್ತಕಿ ಚಿತ್ರಮಂದಿರದಲ್ಲಿಯೇ ಬಿಡುಗಡೆಯಾಗಿವೆ. ಇವುಗಳಲ್ಲಿ 7ಚಿತ್ರಗಳು ಶತದಿನೋತ್ಸವ ಆಚರಿಸಿದರೆ. 9 ಚಿತ್ರಗಳು 50 ದಿನಗಳನ್ನು ಪೂರೈಸಿವೆ. ವಿಶೇಷ ಅಂದ್ರೆ ಈಗ ದಚ್ಚು ಅಭಿನಯದ ಕುರುಕ್ಷೇತ್ರ ಚಿತ್ರವೂ ಸಹ ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದ್ದು, ಈ ಚಿತ್ರವು ಸಹ ಭರ್ಜರಿ ಯಶಸ್ಸು ಕಾಣುತ್ತದೆ ಎಂಬುದು ಗಾಂಧಿನಗರ ಪಂಡಿತರ ಮಾತು.
ಇನ್ನು ಈ ಚಿತ್ರ ಮಂದಿರದ ವ್ಯವಸ್ಥಾಪಕರಾದ ಯಾದವ್ ಅವರ ಪ್ರಕಾರ, ನರ್ತಕಿ ಚಿತ್ರಮಂದಿರ ದರ್ಶನ್ ಪಾಲಿಗೆ ತುಂಬಾನೆ ಲಕ್ಕಿ. ನರ್ತಕಿ ಚಿತ್ರಮಂದಿರದಲ್ಲಿ ಇಲ್ಲಿವಯರೆಗೆ ದರ್ಶನ್ರ 21 ಚಿತ್ರಗಳು ಬಿಡುಗಡೆಯಾಗಿವೆ. ಅಲ್ಲದೇ ಬಹುತೇಕ ಎಲ್ಲಾ ಚಿತ್ರಗಳು ಯಶಸ್ವಿ ಪ್ರದರ್ಶನವನ್ನು ಕಂಡಿವೆ. ಈಗ ಕುರುಕ್ಷೇತ್ರ ನಮ್ಮ ಚಿತ್ರಮಂದಿರದಲ್ಲಿ ಬಿಡುಗಡೆಯಾಗುವುದಕ್ಕೆ ನಮಗೂ ತುಂಬಾ ಸಂತೋಷವಿದೆ. ಅಲ್ಲದೆ ಅವರ ಹಿಂದಿನ ಚಿತ್ರವಾದ ಯಜಮಾನ ಚಿತ್ರವೂ ಸಹ ನಮ್ಮ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು.