ETV Bharat / sitara

800 ಚಿತ್ರದಿಂದ ಹೊರಗುಳಿಯುವಂತೆ ಮನವಿ ಮಾಡಿದ ಸ್ಪಿನ್​ ಮಾಂತ್ರಿಕನಿಗೆ ಮಕ್ಕಳ್ ಸೆಲ್ವನ್ ಹೇಳಿದ್ದೇನು..? - ಐಪಿಎಲ್ 2020

ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್ 800 ಚಿತ್ರ ವಿವಾದದಲ್ಲಿ ಸಿಲುಕಿದ್ದು, ಈ ಚಿತ್ರದಿಂದ ಹೊರಗುಳಿಯುವಂತೆ ವಿಜಯ್​ ಸೇತುಪತಿಗೆ ಮುರಳೀಧರನ್ ಮನವಿ ಮಾಡಿದ್ದಾರೆ.

Muthiah Muralidaran , Vijay Sethupathi
ಮುತ್ತಯ್ಯ ಮುರಳೀಧರನ್, ವಿಜಯ್​ ಸೇತುಪತಿ
author img

By

Published : Oct 19, 2020, 7:24 PM IST

ಹೈದರಾಬಾದ್ : ತಮ್ಮ ಬಯೋಪಿಕ್​ ವಿವಾದದಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ತನ್ನ ಪಾತ್ರದಿಂದ ಹಿಂದೆ ಸರಿಯುವಂತೆ ಸ್ಪಿನ್ ಮಾಂತ್ರಿಕ ಮುತ್ತಯ್ಯ ಮುರಳೀಧರನ್ ತಮಿಳು ನಟ ವಿಜಯ್​ ಸೇತುಪತಿಗೆ ಸಲಹೆ ನೀಡಿದ್ದಾರೆ.

ಮುರಳೀಧರನ್ ಕತೆಯಾಧಾರಿತ ಚಿತ್ರದಿಂದ ವಿಜಯ್ ಸೇತುಪತಿ ಅವರ ವೃತ್ತಿ ಜೀವನಕ್ಕೆ ತೊಂದರೆಯಾಗುವ ಸಾಧ್ಯತೆ ಇದ್ದು, ಇದರಿಂದಾಗಿ ಚಲನಚಿತ್ರದಿಂದ ಹೊರಗುಳಿಯುವಂತೆ ಮನವಿ ಮಾಡಿದ್ದಾರೆ.

ಈ ಕುರಿತು ಮುತ್ತಯ್ಯ ಮುರಳೀಧರನ್ ಪತ್ರ ಬರೆದಿದ್ದು, ಪತ್ರವನ್ನು ಟ್ವೀಟರ್​ನಲ್ಲಿ ಹಂಚಿಕೊಂಡು ಪೋಸ್ಟ್​ ಮಾಡಿರುವ ವಿಜಯ್ ಸೇತುಪತಿ 'ನಂದ್ರಿ ವಣಕ್ಕಂ' (ಧನ್ಯವಾದಗಳು) ಎಂದು ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ಚಿತ್ರದಿಂದ ದೂರ ಇರುವುದಾಗಿ ಘೋಷಿಸಿದ್ದಾರೆ.

ವಿಜಯ್ ಸೇತುಪತಿ ಅವರ ಈ ನಿರ್ಧಾರಕ್ಕೆ ಸಂಸದ ತೋಲ್ ತಿರುಮವಲವನ್ ಹಾಗೂ ಹಲವು ತಮಿಳು ನಾಯಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಒಂದು ವರ್ಷದ ಮೊದಲಿನಿಂದಲೂ ಈ ಚಿತ್ರದಲ್ಲಿ ವಿಜಯ್ ಸೇತುಪತಿ ಕಾಣಿಸಿಕೊಳ್ಳುತ್ತಾರೆ ಎಂಬ ಆಸೆಯಲ್ಲಿದ್ದ ಅವರ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ಮುತ್ತಯ್ಯ ಮುರಳೀಧರನ್ ಅವರ ಬಯೋಪಿಕ್​ 800 ಇತ್ತೀಚೆಗೆ ಮೋಷನ್ ಪೋಸ್ಟರ್​​ ಮತ್ತು ಫಸ್ಟ್​ ಲುಕ್ ಅನ್ನು ಬಿಡುಗಡೆ ಮಾಡಿದ್ದು, ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಇದಾದ ನಂತರ ಮುರಳೀಧರನ್ ಶ್ರೀಲಂಕಾ ಪರ ಎಂದು ಕೆಲವು ತಮಿಳು ನಾಯಕರು ಧನಿಯೆತ್ತಿದ ಕಾರಣದಿಂದ ವಿಜಯ್ ಸೇತುಪತಿಯನ್ನು ಈ ಸಿನಿಮಾದಿಂದ ಹೊರಗುಳಿಯುವಂತೆ ಒತ್ತಡಗಳೂ ಹೆಚ್ಚಾದವು.

ಸದ್ಯದಲ್ಲಿ ಸನ್​ರೈಸರ್ಸ್​ ಹೈದರಾಬಾದ್ ಪರ ಹೆಡ್​ಕೋಚ್ ಆಗಿರುವ ಮುತ್ತಯ್ಯ ಮುರಳೀಧರನ್ ಯುಎಇಯಲ್ಲಿದ್ದು ವಿಜಯ್ ಸೇತುಪತಿಗೆ ಪತ್ರ ಬರೆದು, ಚಿತ್ರದಿಂದ ಹೊರಗುಳಿಯುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯ್ ಸೇತುಪತಿ ಟ್ವೀಟ್ ಮಾಡಿದ್ದು, ಮುರಳೀಧರನ್ ನಿರ್ಧಾರಕ್ಕೆ ಸಹಮತ ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.