ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಕೆಜಿಎಫ್ ಸಿನಿಮಾ ಹೊಸ ಇತಿಹಾಸ ಸೃಷ್ಟಿಸಿದ್ದು ತಿಳಿದಿರುವ ಸಂಗತಿ. ಹೊಂಬಾಳೆ ಫಿಲಮ್ಸ್ ಬ್ಯಾನರ್ ಅಡಿ ವಿಜಯ್ ಕಿರಂಗದೂರು ನಿರ್ಮಿಸಿದ್ದ ಈ ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶಿಸಿದ್ದರು.
ಚಿತ್ರದ ಅದ್ಭುತ ಮೇಕಿಂಗ್, ಹಾಡುಗಳು ಹಾಗೂ ರೀ ರೆಕಾರ್ಡಿಂಗ್ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್ವುಡ್ ಕಡೆ ತಿರುಗಿ ನೋಡುವಂತೆ ಮಾಡಿತ್ತು. ಇನ್ನು ಕೆಜಿಎಫ್ ಭಾಗ 2 ಶೂಟಿಂಗ್ ಈಗಾಗಲೇ ಆರಂಭವಾಗಿದೆ. ಅಷ್ಟೇ ಅಲ್ಲ ಚಿತ್ರತಂಡ ಸಾಂಗ್ ರೆಕಾರ್ಡಿಂಗ್ ಕೂಡಾ ಆರಂಭಿಸಿದೆ. ಕೆಜಿಎಫ್ ಮೊದಲ ಭಾಗದಲ್ಲಿ ಮೇಕಿಂಗ್ ಎಷ್ಟು ಅಟ್ರಾಕ್ಟಿವ್ ಆಗಿತ್ತೋ ರೀ ರೆಕಾರ್ಡಿಂಗ್ ಕೂಡಾ ಗಮನ ಸೆಳೆದಿತ್ತು. ಸಂಗೀತ ನಿರ್ದೇಶಕ ರವಿ ಬಸ್ರೂರ್ ಕಂಪೋಸ್ ಮಾಡಿದ್ದ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಇದೀಗ ಕೆಜಿಎಫ್-2ನಲ್ಲೂ ಅಂತದೇ ಮ್ಯಾಜಿಕ್ ಮಾಡಲು ಚಿತ್ರತಂಡ ಸೈಲೆಂಟಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ.
ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಸಂಗೀತ ನಿರ್ದೇಶಕ ರವಿ ಬಸ್ರೂರ್ ಜೊತೆಯಾಗಿ ಸೇರಿ ಹೊಸ ಟ್ಯೂನ್ ಕಂಪೋಸ್ ಮಾಡುತ್ತಿದ್ದಾರೆ. ಈ ಹಿಂದೆ ಕೆಜಿಎಫ್ ಚಿತ್ರದ ಹಾಡುಗಳನ್ನು ಕಂಪೋಸ್ ಮಾಡಿದ್ದ ಸ್ಟುಡಿಯೋದಲ್ಲೇ ಈ ಜೋಡಿ ಜೊತೆಯಾಗಿದೆ. ಇನ್ನು ಯಶ್ ಮಂಡ್ಯ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ಚುನಾವಣೆ ಬಳಿಕ ಕೆಜಿಎಫ್ ಟೀಂ ಸೇರಲಿದ್ದಾರೆ. ಭಾಗ ಎರಡರಲ್ಲಿ ಸಂಜಯ್ ದತ್ ಸೇರಿದಂತೆ ಬಹುತೇಕ ಬಾಲಿವುಡ್ ದೊಡ್ಡ ಸ್ಟಾರ್ಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಕೆಜಿಎಫ್ ಭಾಗ 2 ಯಾವ ರೀತಿ ಅಬ್ಬರಿಸುತ್ತೋ ಕಾದು ನೋಡಬೇಕಿದೆ.