ಫೆಬ್ರವರಿ 26 ರಿಂದ ಮಾರ್ಚ್ 4 ವರೆಗೂ ನಡೆಯಲಿರುವ 12 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಏಷ್ಯಾ ವಿಭಾಗ, ಭಾರತೀಯ ಸ್ಪರ್ಧಾ ವಿಭಾಗ ಹಾಗೂ ಕನ್ನಡ ಚಿತ್ರಗಳ ವಿಭಾಗದ ಪಟ್ಟಿ ಬಿಡುಗಡೆ ಆಗಿದೆ.
ಏಷ್ಯನ್ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಒಟ್ಟು 13 ಸಿನಿಮಾಗಳಿದ್ದು ಭಾರತದಿಂದ ಗುಜರಾತಿನ 'ದೀದಿ', ತಮಿಳಿನ 'ಜಲ್ಲಿ ಕಟ್ಟು', ಕನ್ನಡದ 'ಮುಂದಿನ ನಿಲ್ದಾಣ' ಸೇರಿ ಮೂರು ಚಿತ್ರಗಳು ಆಯ್ಕೆಯಾಗಿವೆ. ಇಂಡಿಯನ್ ಸಿನಿಮಾ ಚಿತ್ರಭಾರತಿ ಸ್ಪರ್ಧಾ ವಿಭಾಗದಲ್ಲಿ ವಿವಿಧ ಭಾಷೆಗಳಿಂದ ಒಟ್ಟು 14 ಸಿನಿಮಾಗಳಿದ್ದು ಕನ್ನಡದ 'ಒಂದು ಶಿಕಾರಿಯ ಕಥೆ' ಹಾಗೂ 'ರಂಗನಾಯಕಿ' ಸ್ಪರ್ಧೆಯಲ್ಲಿವೆ. ಇನ್ನು ಕನ್ನಡ ಚಿತ್ರಗಳ ಸ್ಪರ್ಧಾ ಪಟ್ಟಿಯಲ್ಲಿ 96, ಅಭ್ಯಂಜನ, ಬೆಲ್ ಬಾಟಮ್, ಭಿನ್ನ, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ, ಕವಲುದಾರಿ, ಮುಂದಿನ ನಿಲ್ದಾಣ, ಒಂದು ಶಿಕಾರಿಯ ಕಥೆ, ಪಿಂಗಾರ, ರಾಗಭೈರವಿ, ರಂಗನಾಯಕಿ, ಸವರ್ಣ ಧೀರ್ಘ ಸಂಧಿ, ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ, ಶುಭಮಂಗಳ ಸೇರಿ ಒಟ್ಟು 14 ಚಿತ್ರಗಳು ಪ್ರದರ್ಶನಗೊಳ್ಳಲಿವೆ.