ETV Bharat / sitara

ಕಾವೇರಿ ಅಭಿಯಾನಕ್ಕೆ ಸಾಥ್ ನೀಡಿದ 'ಮುಂದಿನ ನಿಲ್ದಾಣ' ಚಿತ್ರತಂಡ

ವಿನಯ್ ಭಾರದ್ವಾಜ್ ನಿರ್ದೇಶನದ 'ಮುಂದಿನ ನಿಲ್ದಾಣ' ಚಿತ್ರತಂಡ ಕೂಡಾ 'ಕಾವೇರಿ ಕೂಗು' ಮಹಾ ಅಭಿಯಾನಕ್ಕೆ ಬೆಂಬಲ ನೀಡಿದೆ. ಇತ್ತೀಚೆಗೆ ಸದ್ಗುರು ವಾಸುದೇವ ಅವರನ್ನು ಭೇಟಿ ಮಾಡಿದ್ದ ಚಿತ್ರತಂಡ, ಕನ್ನಡದ ನೆಲ, ಜಲ ಹಾಗೂ ಭಾಷೆಯ ಉಳಿವಿಗೆ ಬದ್ಧರಾಗಿದ್ದೇವೆ ಎಂದು ಭರವಸೆ ನೀಡಿದೆ.

ಮುಂದಿನ ನಿಲ್ದಾಣ
author img

By

Published : Sep 12, 2019, 5:52 PM IST

Updated : Sep 12, 2019, 5:57 PM IST

ಕಾವೇರಿ ಉಳಿವಿಗಾಗಿ ಇಶಾ ಫೌಂಡೇಶನ್​ ವತಿಯಿಂದ ಹಮ್ಮಿಕೊಳ್ಳಲಾದ 'ಕಾವೇರಿ ಕೂಗು' ಅಭಿಯಾನಕ್ಕೆ ಈಗಾಗಲೇ ಸಾಕಷ್ಟು ಮಂದಿ ತಮ್ಮ ಬೆಂಬಲ ನೀಡಿದ್ದಾರೆ. ಸಾಮಾನ್ಯ ಜನರು ಮಾತ್ರವಲ್ಲ, ಸೆಲಬ್ರಿಟಿಗಳು ಕೂಡಾ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ.

mundina nildana
'ಮುಂದಿನ ನಿಲ್ದಾಣ' ಚಿತ್ರತಂಡ

ಇದೀಗ 'ಮುಂದಿನ ನಿಲ್ದಾಣ' ಚಿತ್ರತಂಡ ಕೂಡಾ ಈ ಅಭಿಯಾನದೊಂದಿಗೆ ಕೈ ಜೋಡಿಸಿದೆ. ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ರಾಧಿಕಾ ನಾರಾಯಣ್, ಪ್ರವೀಣ್ ತೇಜ್ ಹಾಗೂ ಅನನ್ಯಾ ಕಶ್ಯಪ್ ಅವರನ್ನೊಳಗೊಂಡ ತಂಡ ಸದ್ಗುರು ವಾಸುದೇವ ಅವರನ್ನು ಭೇಟಿ ಮಾಡಿದೆ. ಸ್ವಲ್ಪ ಸಮಯ ಗುರೂಜಿ ಅವರೊಂದಿಗೆ ಕಾಲ ಕಳೆದ ಚಿತ್ರತಂಡ ಗುರೂಜಿ ಅವರನ್ನೇ ನಿಮ್ಮ ಮುಂದಿನ ನಿಲ್ದಾಣ ಯಾವುದು..? ಎಂದು ಕೇಳಿದೆ.

ಚಿತ್ರತಂಡ ಕೇಳಿದ ಪ್ರಶ್ನೆಗೆ ನನ್ನ ಮುಂದಿನ ನಿಲ್ದಾಣ 'ನಿರಂತರ' ಎಂದು ಸದ್ಗುರು ಉತ್ತರಿಸಿದ್ದಾರೆ. ಇದಕ್ಕೆ ದನಿಗೂಡಿಸಿದ ಚಿತ್ರತಂಡ ನಿಮ್ಮೊಂದಿಗೆ ನಾವಿದ್ದೇವೆ. ನಾವು ಎಂದೆಂದಿಗೂ ಕಾವೇರಿ, ಕನ್ನಡದ ನೆಲ, ಜಲ ಹಾಗೂ ಭಾಷೆಯ ಉಳಿವಿಗೆ ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ. ಯುವ ನಿರ್ದೇಶಕ ವಿನಯ್ ಭಾರದ್ವಾಜ್ ಅವರ ‘ಮುಂದಿನ ನಿಲ್ದಾಣ’ ಸಿನಿಮಾ ಒಂದಲ್ಲಾ ಒಂದು ರೀತಿ ಸದ್ದು ಮಾಡುತ್ತಿದೆ. ಮೊನ್ನೆಯಷ್ಟೇ ಬಿಡುಗಡೆ ಮಾಡಲಾದ ‘ಮನಸೇ ಮಾಯ... ಹಾಡು ಯೂಟ್ಯೂಬ್, ಟಿಕ್​​​ಟಾಕ್​​​​​​​​​​​​​​​​​​​​​​​ಗಳಲ್ಲಿ ವೈರಲ್ ಆಗಿದೆ.

ಸದ್ಗುರುವಿನೊಂದಿಗೆ ಮುಂದಿನ ನಿಲ್ದಾಣ ತಂಡ

ಜನಪ್ರಿಯ ವ್ಯಕ್ತಿಗಳ ಜೊತೆ ಸಿನಿಮಾ ಮಂದಿ ಸೇರಿಕೊಂಡು ಅವರ ಸಿನಿಮಕ್ಕೂ ಪ್ರಚಾರ ಪಡೆಯುವುದು ವಾಡಿಕೆ ಆಗಿದೆ. ಈಗ ಸದ್ಗುರು ಜೊತೆ ಮುಂದಿನ ನಿಲ್ದಾಣ ಚಿತ್ರ ತಂಡ ಒಂದು ಒಳ್ಳೆಯ ಕೆಲಸಕ್ಕಾಗಿ ಕೈ ಜೋಡಿಸಿದೆ. ಆದೆ ಕಾವೇರಿ ಕೂಗು ಅಭಿಯಾನ.

ಚಿತ್ರದ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿರುವ ರಾಧಿಕಾ ನಾರಾಯಣ್, ಪ್ರವೀಣ್ ತೇಜ್ ಹಾಗೂ ಅನನ್ಯಾ ಕಶ್ಯಪ್ ಅವರನ್ನೊಳಗೊಂಡ ತಂಡವು ಕಾವೇರಿ ಕೂಗು ಖ್ಯಾತಿಯ ಈಶಾ ಫೌಂಡೇಶನ್ನ ಸದ್ಗುರು ಅವರನ್ನು ಭೇಟಿ ಮಾಡಿತು.
ಕೊಂಚ ಹೊತ್ತು ಅವರೊಂದಿಗೆ ಕಾಲ ಕಳೆದ ಚಿತ್ರ ತಂಡವು ಗುರೂಜೀ..ನಿಮ್ಮ ಮುಂದಿನ ನಿಲ್ದಾಣ ಯಾವುದು?” ಅಂತ ಸದ್ಗುರು ಅವರಲ್ಲಿ ಕೇಳಿಯೇ ಬಿಟ್ಟಿತು!
ಅದಕ್ಕೆ ಗುರೂಜಿ ನೀಡಿದ ಉತ್ತರವಂತೂ ಇದೀಗ ತುಂಬಾನೇ ಸುದ್ದಿ ಮಾಡ್ತಿದೆ. ಸದಾ ಕಾವೇರಿ ಉಳಿಸುವ ತನ್ನ ಅಭಿಯಾನದಲ್ಲಿಯೇ ಮಗ್ನರಾಗಿ ಅಲ್ಲಿ ಇಲ್ಲಿ ಸುತ್ತುತ್ತಲೇ ಇರುವ ಸದ್ಗುರು ಅವರು ನೀಡಿದ ಉತ್ತರವೇನು ಗೊತ್ತೇ..?
ನನ್ನ ಮುಂದಿನ ನಿಲ್ದಾಣ ನಿರಂತರಎಂಬುದು!

ಸದ್ಗುರುವಿನ ಮಾತಿನಿಂದ ಉತ್ತೇಜಿತರಾದ ಯುವ ನಟರು ಈಶಾ ಫೌಂಡೇಶನ್ನ ಕಾವೇರಿ ಕೂಗು ಅಭಿಯಾನವನ್ನು ಬೆಂಬಲಿಸಿದೆ. ರಾಧಿಕಾ ನಾರಾಯಣ್ (ರಾಧಿಕ ಚೇತನ್ ಹಿಂದಿನ ಹೆಸರು) ಹೇಳಿದ ಮಾತುಗಳನ್ನು ತಮ್ಮ ಅಧಿಕೃತ ವೀಡಿಯೋದಲ್ಲೂ ಪ್ರಕಟಿಸಿ ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ.

ಮುಂದಿನ ನಿಲ್ದಾಣ ಚಿತ್ರ ತಂಡವು ಸದಾ ಕಾವೇರಿಯ ಹಾಗೂ ಕನ್ನಡದ ನೆಲ, ಜಲ ಹಾಗೂ ಭಾಷೆಯ ಉಳಿವಿಗೆ ಬದ್ಧವಾಗಿದೆ ಎಂಬ ಮಾತನ್ನು ಸದ್ಗುರುವಿನ ಜೊತೆ ಹಂಚಿಕೊಂಡಿದ್ದಾರೆ.

ಯುವ ನಿರ್ದೇಶಕ ವಿನಯ್ ಭಾರದ್ವಾಜ್ ಅವರ ಮುಂದಿನ ನಿಲ್ದಾಣ ಚಿತ್ರವು ಎಲ್ಲೆಡೆಯೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಇದೆ. ಮೊನ್ನೆಯಷ್ಟೇ ಟೀಸ್ ಮಾಡಲಾದ ಆ ಚಿತ್ರದ ಮನಸೇ ಮಾಯ... ಹಾಡು ಯೂಟ್ಯೂಬ್, ಟಿಕ್ ಟಾಕ್ ಗಳಲ್ಲಿ ವೈರಲ್ ಆಗಿದ್ದು ದಿನದಿಂದ ದಿನಕ್ಕೆ ಅದರ ಕಾವು ಏರ್ತಾನೇ ಇದೆ. ಇದರ ಜೊತೆಯಲ್ಲಿಯೇ, ಕಾವೇರಿ ತಾಯಿಯ ಒಡಲಿನ ಕಾವನ್ನು ತಗ್ಗಿಸುವ ಪ್ರಯತ್ನಕ್ಕೂ ಚಿತ್ರ ತಂಡವು ಕೈಜೋಡಿಸಿದೆ.

ಕ್ಯಾಮೆರಾ ಕೆಲಸವನ್ನು ಅಚ್ಚು ಕಟ್ಟಾಗಿ ನಿಭಾಯಿಸಿರುವುದು ಅಭಿಮನ್ಯು ಸದಾನಂದನ್, ಗ್ರೇಡಿಂಗ್ ಕೆಲಸವನ್ನು ಸಿದ್ಧಾರ್ಥ ಗಾಂಧಿ (ರೆಡ್ ಚಿಲ್ಲೀಸ್ ಕಲರ್) ಅವರು ಮಾಡಿದರೆ, ನಿರ್ದೇಶನ ವಿನಯ್ ಭರದ್ವಾಜ ಅವರದು. ಹಾಡುಗಳು ಪಿ ಆರ್ ಕೆ  ಆಡಿಯೋ ಯು ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

Last Updated : Sep 12, 2019, 5:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.