ತೆಲುಗಿನ ‘ಮಹಾನಟಿ’ ಚಿತ್ರದ ಮೂಗ ಮನಸುಲು.... ಹಾಡಿಗೆ ನೃತ್ಯ ಸಂಯೋಜನೆ ಮಾಡಿದ ವಿಶ್ವ ಕಿರಣ್ ನಂಬಿ ಕನ್ನಡದ ‘ಮುಂದಿನ ನಿಲ್ದಾಣ’ ಚಿತ್ರದ ಹಾಡೊಂದಕ್ಕೆ ಕೂಡಾ ಕೊರಿಯೋಗ್ರಫಿ ಮಾಡಿದ್ದಾರೆ. 'ಮನಸೇ ಮಾಯ' ಹಾಡಿಗೆ ಕಿರಣ್ ಕಾವೇರಪ್ಪ ಬರೆದಿರುವ ಅದ್ಭುತ ಸಾಹಿತ್ಯದ ಜೊತೆಗೆ ಮಸಾಲ ಕಾಫಿ ಬ್ಯಾಂಡ್ ಸಂಗೀತ ಸಂಯೋಜನೆ ಇದೆ.

ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಡುಗಾರ ಸೂರಜ್ ಸಂತೋಷ್ ಹಾಗೂ ವರುಣ್ ಸುನಿಲ್ ಈ ಹಾಡನ್ನು ಹಾಡಿದ್ದಾರೆ. ಅನನ್ಯ ಕಶ್ಯಪ್ ಈ ಹಾಡಿನಲ್ಲಿ ನೃತ್ಯ ಮಾಡಿದ್ದಾರೆ. ಈ ಹಾಡನ್ನು ವಿಭಿನ್ನ ರೀತಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಸಂಗೀತ, ನೃತ್ಯದ ಭಂಗಿಯ ಮಿಶ್ರಣವೇ ಒಂದು ಅದ್ಭುತ ಸಂಗತಿ. ಈ ಹಾಡಿನಲ್ಲಿ ಸಂಗೀತಗಾರರನ್ನು ನಟರಾದ ಪ್ರವೀಣ್ ತೇಜ್ ಹಾಗೂ ಅಜಯ್ ರಾಜ್ ಜೊತೆ ಚಿತ್ರೀಕರಿಸುವುದು ಬಹಳ ವಿನೂತನವಾಗಿದೆ. ಬಾಲಿವುಡ್ನ ಹರ್ಷದ್ ಖಾನ್ ಈ ಹಾಡಿನಲ್ಲಿ ಎಸ್ರಾದ್ ವಾದ್ಯ ನುಡಿಸಿದ್ದಾರೆ.
- " class="align-text-top noRightClick twitterSection" data="">
ಕೋಸ್ಟಲ್ ಬ್ರೀಜ್ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿರುವ ಸಿನಿಮಾವನ್ನು ವಿನಯ್ ಭಾರದ್ವಜ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇದೇ ಅಕ್ಟೋಬರ್ನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ವಿಭಿನ್ನ ಪೋಸ್ಟರ್ ಹಾಗೂ ಟೀಸರ್ನಿಂದಲೇ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಇನ್ನು ಹಾಡಿನ ಕೊನೆಯ ದೃಶ್ಯಗಳಲ್ಲಿ ನೀವು ಬಾವಿಯಲ್ಲಿ ಚಿತ್ರೀಕರಣವಾಗಿರುವುದನ್ನು ನೋಡಬಹುದು. ಖಾಲಿ ಬಾವಿಯೊಂದರ ಸುತ್ತ ಲೈಟಿಂಗ್ ಅರೇಂಜ್ ಮಾಡಿ ಅಲ್ಲಿ ಚಿತ್ರೀಕರಿಸಲಾಗಿದೆ. ಇದು ನಿಜಕ್ಕೂ ಹೊಸ ಬಗೆಯ ಪ್ರಯತ್ನ ಎನ್ನಬಹುದು. ಅಭಿಮನ್ಯು ಸದಾನಂದ್ ಕ್ಯಾಮರಾ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಪಿಆರ್ಕೆ ಆಡಿಯೋ ಸಂಸ್ಥೆ ಆಡಿಯೋ ಹಕ್ಕನ್ನು ಖರೀದಿಸಿದೆ.