ETV Bharat / sitara

ಕರಾವಳಿ ಇಂಜಿನಿಯರ್, ಡಾಕ್ಟರ್​ಗಳಿಂದ ಸಿದ್ದವಾಯ್ತು ಈ ಸಿನಿಮಾ.. 'ಮುಂದಿನ ನಿಲ್ದಾಣ' ಬರ್ತಿದೆ..

ಕನ್ನಡ ಸಿನಿಮಾ ಲೋಕಕ್ಕೆ'ಮುಂದಿನ ನಿಲ್ದಾಣ' ಎಂಬ ಸಿನಿಮಾ ಎಂಟ್ರಿಯಾಗುತ್ತಿದೆ. ನ.29ಕ್ಕೆ ಬಿಡುಗಡೆಯಾಗಲಿರುವ ಈ ಸಿನಿಮಾ ನಿರ್ಮಾಣ ಮಾಡಿರೋದು ಪರಿಣಿತರಲ್ಲ. ಸಿನಿಮಾ ಲೋಕದ ಸ್ಪರ್ಶವೇ ಇಲ್ಲದ ಇಬ್ಬರು ಸಿಂಗಾಪುರದ ಸ್ಟಾರ್ಟ್ ಅಪ್ ಕಂಪನಿ ಮಾಲೀಕರು ಮತ್ತು ಇಂಗ್ಲೆಂಡ್​​ನ ಉದ್ಯಮಿ.

ಕರಾವಳಿ ಇಂಜಿನಿಯರ್, ಡಾಕ್ಟರ್​ಗಳಿಂದ ಸಿದ್ದವಾಯ್ತು ಈ ಸಿನಿಮಾ
author img

By

Published : Nov 25, 2019, 6:52 PM IST

ಸ್ಯಾಂಡಲ್​​​ವುಡ್ ಬಣ್ಣದ ಲೋಕದಲ್ಲಿ ಹಲವು ಯಶಸ್ವಿ ನಿರ್ಮಾಪಕರು ಅತ್ಯುತ್ತಮ ಸಿನಿಮಾ ನೀಡುವ ಮೂಲಕ ಕನ್ನಡ ಸಿನಿಲೋಕಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇದೀಗ ಕನ್ನಡ ಸಿನಿಮಾ ಲೋಕಕ್ಕೆ 'ಮುಂದಿನ ನಿಲ್ದಾಣ' ಎಂಬ ಸಿನಿಮಾ ಎಂಟ್ರಿಯಾಗುತ್ತಿದೆ. ನ.29ಕ್ಕೆ ಬಿಡುಗಡೆಯಾಗಲಿರುವ ಈ ಸಿನಿಮಾ ನಿರ್ಮಾಣ ಮಾಡಿರೋದು ಪರಿಣಿತರಲ್ಲ. ಸಿನಿಮಾ ಲೋಕದ ಸ್ಪರ್ಶವೇ ಇಲ್ಲದ ಇಬ್ಬರು ಸಿಂಗಾಪುರದ ಸ್ಟಾರ್ಟ್ ಅಪ್ ಕಂಪನಿ ಮಾಲೀಕರು, ಇಂಗ್ಲೆಂಡ್​​ನ ಉದ್ಯಮಿಯೊಬ್ಬರು.

ಸಿಂಗಾಪುರದಲ್ಲಿ ಸ್ಟಾರ್ಟ್ ಅಪ್‌ ಕಂಪನಿ ಮಾಡಿರುವ ಸಾಫ್ಟ್​​ವೇರ್ ಇಂಜಿಯರ್ ಮುರಳೀಧರ್, ಶೇಷಾದ್ರಿ ಉಡುಪ, ಇಂಗ್ಲೆಂಡ್​​ನಲ್ಲಿ ವೈದ್ಯರಾಗಿರುವ ಸುರೇಶ್ ಕುಮಾರ್ ಮತ್ತು ಯುಎಇ ಶೇರ್ ಬ್ಯುಸಿನೆಸ್ ನೋಡಿಕೊಳ್ಳುತ್ತಿರುವ ತಾರನಾಥ್ ರೈ ಈ ಸಿನಿಮಾದ ನಿರ್ಮಾಪಕರಾಗಿದ್ದಾರೆ. ಈ ನಾಲ್ವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರಾಗಿದ್ದು, ಕನ್ನಡ ಸಿನಿಮಾ ನಿರ್ಮಿಸುವ ಕನಸನ್ನು ಹೊತ್ತುಕೊಂಡು ಈ ಸಿನಿಮಾ ಮಾಡಿದ್ದಾರೆ.

ಕರಾವಳಿ ಇಂಜಿನಿಯರ್, ಡಾಕ್ಟರ್​ಗಳಿಂದ ಸಿದ್ದವಾಯ್ತು ಈ ಸಿನಿಮಾ..

ಕಾರ್ಪೊರೇಟ್ ಜಗತ್ತಿನ ನಾಲ್ವರು ಕನ್ನಡ ಸಿನಿಮಾವನ್ನು ನಿರ್ಮಾಣ ಮಾಡುವ ಪ್ರಯತ್ನಕ್ಕೆ ಆರಂಭದಲ್ಲಿಯೇ ಶ್ಲಾಘನೆ ವ್ಯಕ್ತವಾಗಿದೆ. ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಶಾರುಖ್ ಖಾನ್ ಒಡೆತನದ ರೆಡ್ ಚಿಲ್ಲಿಸ್ ಬಣ್ಣ ವಿನ್ಯಾಸ ಮಾಡಿದೆ. ಸಿನಿಮಾ ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಮತ್ತು ಪುನೀತ್‌ರಾಜ್ ಕುಮಾರ್ ಮೆಚ್ಚಿ ಟ್ವೀಟ್ ಮಾಡಿದ್ದಾರೆ.

ಸಿನಿಮಾವನ್ನು ಬೆಲ್ಜಿಯಂ, ಹಾಲೆಂಡ್, ಹಿಮಾಚಲಪ್ರದೇಶ, ಮಂಗಳೂರಿನಲ್ಲಿ ಶೂಟ್​ ಮಾಡಲಾಗಿದೆ. ಈ ಚಿತ್ರ ಇದೇ ನ.29ಕ್ಕೆ ಪ್ರಪಂಚದಾದ್ಯಂತ ತೆರೆಗೆ ಬರಲಿದೆ ಎಂದು ಚಿತ್ರತಂಡ ತಿಳಿಸಿದೆ. ಸಿನಿಮಾದಲ್ಲಿ ಸಿಂಪಲ್ಲಾಗ್​​ ಇನ್ನೊಂದ್‌ ಒಂದು ಲವ್ ಸ್ಟೋರಿಯ ಪ್ರವೀಣ್ ತೇಜ್ ಮತ್ತು ರಂಗಿತರಂಗ ಖ್ಯಾತಿಯ ರಾಧಿಕಾ ನಾರಾಯಣ್ ನಾಯಕ ನಾಯಕಿಯಾಗಿ ನಟಿಸಿದ್ದಾರೆ.

  • " class="align-text-top noRightClick twitterSection" data="">

Intro:slug

ಕರಾವಳಿ ಮೂಲದ ಇಂಜಿನಿಯರ್, ಡಾಕ್ಟರ್, ಉದ್ಯಮಿಗಳಿಂದ ಕನ್ನಡ ಸಿನಿಮಾ

ಮುಂದಿನ ನಿಲ್ದಾಣದ ಸಿನಿಮಾದ ಮೂಲಕ ಹೊಸ ಪ್ರಯತ್ನಕ್ಕೆ ಹೊರಟ ಕಾರ್ಪೋರೇಟ್ ಜಗತ್ತಿನ ಉತ್ಸಾಹಿಗಳು

ಮೊದಲ ಪ್ರಯತ್ನದಲ್ಲಿ ಹಲವು ಪ್ರಶಂಸೆಗಳ ಪಡೆದ ಸಿನಿಮಾ

ಮಾ. 29 ಕ್ಕೆ ತೆರೆಗೆ ಬರಲಿದೆ ಮುಂದಿನ ನಿಲ್ದಾಣ

ಮಂಗಳೂರು: ಬಣ್ಣದ ಲೋಕ ಸಿನಿಮಾದಲ್ಲಿ ತೊಡಗಿಸಿಕೊಳ್ಳಲು ಸಿನಿಮಾದ ಅನುಭವವಿರಬೇಕು. ಆದರೆ ಕಾರ್ಪೋರೇಟ್ ಉದ್ಯಮದಲ್ಲಿ ಇರುವ ಕರಾವಳಿ ಮೂಲದ ನಾಲ್ವರು ಕನ್ನಡ ಸಿನಿಮಾ ನಿರ್ಮಾಣ ಮಾಡಿ ಬಣ್ಣದ ಲೋಕಕ್ಕೆ ಹೊಸ ಕೊಡುಗೆ ನೀಡಲು ಮುಂದಾಗಿದ್ದಾರೆ. ಕೋಸ್ಟಲ್ ಬ್ರೀಜ್ ಪ್ರೊಡಕ್ಸನ್ ಬ್ಯಾನರ್ ನಡಿ ಮುಂದಿನ ನಿಲ್ದಾಣ ಎಂಬ ಸಿನಿಮಾ ರೆಡಿ ಮಾಡಿರುವ ಇವರು ನ.29 ಕ್ಕೆ ಸಿನಿಮಾ ಬಿಡುಗಡೆ ಗೆ ಸಿದ್ದತೆ ನಡೆಸಿದ್ದಾರೆ.

Body:voice over 1
ಸ್ಯಾಂಡಲ್ ವುಡ್ ಎಂಬ ಬಣ್ಣದ ಲೋಕದಲ್ಲಿ ಹಲವು ಯಶಸ್ವಿ ನಿರ್ಮಾಪಕರು ಅತ್ಯುತ್ತಮ ಸಿನಿಮಾ ನೀಡುವ ಮೂಲಕ ಕನ್ನಡ ಸಿನಿಲೋಕಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇದೀಗ ಕನ್ನಡ ಸಿನಿಮಾ ಲೋಕಕ್ಕೆ ಮುಂದಿನ ನಿಲ್ದಾಣ ಎಂಬ ಸಿನಿಮಾ ಎಂಟ್ರಿಯಾಗುತ್ತಿದೆ. ನ.29 ಕ್ಕೆ ಬಿಡುಗಡೆಯಾಗಲಿರುವ ಈ ಸಿನಿಮಾ ನಿರ್ಮಾಣ ಮಾಡಿದ್ದು ಪರಿಣತರಲ್ಲ. ಸಿನಿಮಾ ಲೋಕದ ಟಚ್ ಇಲ್ಲದ ಇಬ್ಬರು ಸಿಂಗಾಪುರದ ಸ್ಟಾರ್ಟ್ ಅಫ್ ಕಂಪೆನಿ ಮಾಲಕರು, ಇಂಗ್ಲೆಂಡ್ ನ ವೈದ್ಯ ಮತ್ತು ಉದ್ಯಮಿಯೊಬ್ಬರು ಈ ಕನ್ನಡ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಸಿಂಗಾಪುರದಲ್ಲಿ ಸ್ಟಾರ್ಟ್ ಆಫ್ ಕಂಪೆನಿ ಮಾಡಿರು ಸಾಪ್ಟ್ ವೇರ್ ಇಂಜಿಯರ್ ಮುರಳೀಧರ, ಶೇಷಾದ್ರಿ ಉಡುಪ , ಇಂಗ್ಲೆಂಡ್ ನಲ್ಲಿ ವೈದ್ಯರಾಗಿರುವ ಸುರೇಶ್ ಕುಮಾರ್ ಮತ್ತು ಯುಎಇ ಎಕ್ಸ್‌ಚೇಂಜ್ ನಲ್ಲಿ 30 ದೇಶಗಳ ಶೇರ್ ಬ್ಯುಸಿನೆಸ್ ನೋಡಿಕೊಳ್ಳುತ್ತಿರುವ ತಾರನಾಥ್ ರೈ ಅವರು ಈ ಸಿನಿಮಾದ ನಿರ್ಮಾಪಕರು. ಈ ನಾಲ್ವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯವರಾಗಿದ್ದು ಕನ್ನಡ ಸಿನಿಮಾ ನಿರ್ಮಿಸುವ ಕನಸನ್ನು ಹೊತ್ತುಕೊಂಡು ಈ ಸಿನಿಮಾ ಮಾಡಿದ್ದಾರೆ.

ಬೈಟ್- ಮುರಳಿ, ಸಿಂಗಾಪುರದಲ್ಲಿ ಸ್ಟಾರ್ಟ್ ಅಫ್ ಕಂಪೆನಿ ಮಾಲಕರು. ( ನೀಲಿ ಬಿಳಿ ಟೀಶರ್ಟ್ ಧರಿಸಿದವರು)
voice over 2
ಕಾರ್ಪೋರೇಟ್ ಜಗತ್ತಿನ ನಾಲ್ವರು ಕನ್ನಡ ಸಿನಿಮಾವನ್ನು ನಿರ್ಮಾಣ ಮಾಡುವ ಪ್ರಯತ್ನಕ್ಕೆ ಆರಂಭದಲ್ಲಿಯೆ ಶ್ಲಾಘನೆ ವ್ಯಕ್ತವಾಗಿದೆ. ಈ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಶಾರುಕ್ ಖಾನ್ ಒಡೆತನದ ರೆಡ್ ಚಿಲ್ಲಿಸ್ ಬಣ್ಣ ವಿನ್ಯಾಸ ಮಾಡಿದೆ. ಸಿನಿಮಾ ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಮತ್ತು ಪುನಿತ್ ರಾಜ್ ಕುಮಾರ್ ಮೆಚ್ಚಿ ಟ್ವೀಟ್ ಮಾಡಿದ್ದಾರೆ. ಇದು ಚಿತ್ರತಂಡಕ್ಕೆ ಹೊಸ ಹುರುಪು ತಂದಿದೆ.

ಬೈಟ್- ಡಾ.ಸುರೇಶ್ ಕುಮಾರ್, ಇಂಗ್ಲೆಂಡ್ ವೈದ್ಯರು ( ಮುಂದಿನ ನಿಲ್ದಾಣ ಎಂಬ ಹೆಸರಿನ ಟೀಶರ್ಟ್ ಹಾಕಿದವರು)

voice over 3
ಬಹುಕೋಟಿ ವೆಚ್ಚದ ಈ ಸಿನಿಮಾ ನಿರ್ಮಾಣದಲ್ಲಿ ಯಾವುದೇ ರಾಜಿಯನ್ನು ಮಾಡಲಾಗಿಲ್ಲ. ಬೆಲ್ಜಿಯಂ, ಹಾಲೆಂಡ್, ಹಿಮಾಚಲ ಪ್ರದೇಶ, ಮಂಗಳೂರಿನಲ್ಲಿ ಸಿನಿಮಾ ನಿರ್ಮಾಣವಾಗಿದೆ. ನ.29 ಕ್ಕೆ ಪ್ರಪಂಚಾದಾದ್ಯಂತ ಸಿನಿಮಾ ತೆರೆಗೆ ಬರಲಿದ್ದು ಈಗಾಗಲೇ ಎಕ್ಸ್ ಕ್ಲೂಸಿವ್ ಪ್ರೀಮಿಯರ್ ಶೋ ನ್ಯೂಜೆರ್ಸಿ, ಯು ಎಸ್ ಎ ನಲ್ಲಿ ಆಗಿದೆ.

ಬೈಟ್- ಶೇಷಾದ್ರಿ ಉಡುಪ, ಸಿಂಗಾಪುರದಲ್ಲಿ ಸ್ಟಾರ್ಟ್ ಅಫ್ ಕಂಪನಿ ಮಾಲಕ ( ಬಿಳಿ ಟೀಶರ್ಟ್ ಹಾಕಿದವರು)

voice over 4
ಈ ಸಿನಿಮಾದಲ್ಲಿ ಸಿಂಪ್ಲಾಗಿ ಒಂದು ಲವ್ ಸ್ಟೋರಿಯ ಪ್ರವೀಣ್ ತೇಜ್ ಮತ್ತು ರಂಗಿತರಂಗ ಖ್ಯಾತಿಯ ರಾಧಿಕ ನಾರಾಯಣ್ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ , ಹಾಡುಗಳು ಈಗಾಗಲೇ ಯೂಟ್ಯೂಬ್ ನಲ್ಲಿ 1 ಮಿಲಿಯನ್ ಜನ ವೀಕ್ಷಿಸಿದ್ದಾರೆ. ಇನ್ನು ಕಾರ್ಪೋರೇಟ್ ಪ್ರಪಂಚದ ನಾಲ್ವರ ಕನ್ನಡ ಸಿನಿಮಾ ನಿರ್ಮಾಣವನ್ನು ಸಿನಿರಸಿಕರು ಯಾವ ರೀತಿ ಮೆಚ್ಚುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಈಟಿವಿ ಭಾರತ , ಮಂಗಳೂರು

reporter; vinodpudu

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.