ETV Bharat / sitara

ಕ್ಯಾಬ್ ಡ್ರೈವರ್ ವಿರುದ್ಧ ದೂರು ದಾಖಲಿಸಿದ ಮುಮೈತ್ ಖಾನ್ - Mumaith Khan cheated cab driver

ರಾಘವ್ ರಾಜು ನನ್ನ ಮೇಲೆ ಮಾಡುತ್ತಿರುವ ಆರೋಪ ಸುಳ್ಳು. ಆತನಿಗೆ ನೀಡಬೇಕಿದ್ದ 15 ಸಾವಿರ ಹಣವನ್ನು ಆಗಲೇ ನೀಡಿದ್ದೇನೆ ಎಂದು ಟಾಲಿವುಡ್ ನಟಿ, ಡ್ಯಾನ್ಸರ್ ಮುಮೈತ್ ಖಾನ್ ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಕ್ಯಾಬ್ ಡ್ರೈವರ್ ವಿರುದ್ಧ ದೂರು ದಾಖಲಿಸಿದ್ದಾರೆ.

Mumaith khan
ಮುಮೈತ್ ಖಾನ್
author img

By

Published : Oct 3, 2020, 11:09 AM IST

ಕ್ಯಾಬ್ ಡ್ರೈವರ್ ರಾಘವ್ ರಾಜು ಎಂಬುವವರು ಟಾಲಿವುಡ್ ಖ್ಯಾತ ಡ್ಯಾನ್ಸರ್ ಮುಮೈತ್ ಖಾನ್ ನನಗೆ ಹಣ ನೀಡದೆ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ತಮ್ಮ ಮೇಲೆ ಆರೋಪ ಮಾಡಿರುವ ಕ್ಯಾಬ್ ಡ್ರೈವರ್ ವಿರುದ್ಧವೇ ಇದೀಗ ಮುಮೈತ್ ಖಾನ್ ದೂರು ದಾಖಲಿಸಿದ್ದಾರೆ.

ನಾನು ಡ್ರೈವರ್​​ಗೆ ನೀಡಬೇಕಿದ್ದ ಹಣವನ್ನು ಆಗಲೇ ನೀಡಿದ್ದೇನೆ. ರಾಘವ್ ರಾಜು ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ರಾಘವ್ ರಾಜು ಅವರ ಬಳಿ ಮುಮೈತ್ ಖಾನ್ 3 ದಿನಗಳು ಗೋವಾ ಹಾಗೂ ಸುತ್ತಮುತ್ತಲಿನ ಸ್ಥಳಗಳಿಗೆ ಹೋಗಿ ಬರಲು 15 ಸಾವಿರ ಹಣಕ್ಕೆ ಕ್ಯಾಬ್ ಬುಕ್ ಮಾಡಿದ್ದರು ಎನ್ನಲಾಗಿದೆ. ಆದರೆ 3 ದಿನಗಳು ಎಂದು ಹೇಳಿ ಸುಮಾರು 8 ದಿನಗಳ ಕಾಲ ಅಲ್ಲಿ ಇಲ್ಲಿ ತಿರುಗಾಡಿದ್ದಾರೆ. ಹೈದರಾಬಾದ್​​ಗೆ ಹೋದ ನಂತರ ಹಣ ಕೇಳಿದರಾಯಿತು ಎಂದು ರಾಘವ್ ರಾಜು ಕೂಡಾ ಸುಮ್ಮನಾಗಿದ್ದಾರೆ. ಆದರೆ ಇಲ್ಲಿ ಬಂದ ನಂತರ ಮುಮೈತ್ ಖಾನ್ ಹಣ ಕೊಡಲು ನಿರಾಕರಿಸುತ್ತಿದ್ದಾರೆ ಎಂದು ರಾಘವ್ ರಾಜು ಆರೋಪಿಸಿದ್ದಾರೆ.

ರಾಘವ್ ರಾಜು ತನ್ನ ಮೇಲೆ ಮಾಡುತ್ತಿರುವ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮುಮೈತ್ ಖಾನ್, ಹೈದರಾಬಾದ್ ಪಂಜಗುಟ್ಟ ಪೊಲೀಸ್ ಠಾಣೆಗೆ ತೆರಳಿ ನಾನು ಕ್ಯಾಬ್ ಡ್ರೈವರ್​​​ಗೆ ನೀಡಬೇಕಿದ್ದ ಹಣವನ್ನು ಆಗಲೇ ನೀಡಿದ್ದೇನೆ ಎಂದು ಹೇಳಿ ಆತನ ಬಗ್ಗೆ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.