ಕ್ರಿಕೆಟ್ ಲೋಕದಲ್ಲಿ ತಮ್ಮ ಹೆಸರನ್ನು ಅಚ್ಚಾಗಿ ಚಿತ್ರಿಸಿಕೊಂಡಿರುವ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಜೀವನ ಚರಿತ್ರೆ ಆಧರಿಸಿ 2016ರಲ್ಲಿ 'ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ' ಹೆಸರಿನ ಬಾಲಿವುಡ್ ಸಿನಿಮಾ ತೆರೆ ಕಂಡಿತ್ತು. ಇದೀಗ ಅವರು ಗ್ರಾಫಿಕ್ ಕಾದಂಬರಿಯಲ್ಲಿ ಅನಿಮೇಟೆಡ್ ಅವತಾರದಲ್ಲಿ ಧೋನಿ ಪ್ರತ್ಯಕ್ಷರಾಗಿದ್ದಾರೆ.
ಹೌದು.., 'ಅಥರ್ವ: ದಿ ಒರಿಜಿನ್' ಎಂಬ ಪೌರಾಣಿಕ ಸೈನ್ಸ್-ಫಿಕ್ಷನ್ ವೆಬ್ ಸರಣಿಯಲ್ಲಿ 'ಅಥರ್ವ'ನಾಗಿ ಧೋನಿ ಕಾಣಿಸಿಕೊಳ್ಳಲಿದ್ದು, ಇದರ ಫಸ್ಟ್ ಲುಕ್ ಟೀಸರ್ ಅನ್ನು ಕೂಲ್ ಕ್ಯಾಪ್ಟನ್ ತಮ್ಮ ಫೇಸ್ಬುಕ್ ಹ್ಯಾಂಡಲ್‌ನಲ್ಲಿ ಅನಾವರಣಗೊಳಿಸಿದ್ದಾರೆ. "ನನ್ನ ಹೊಸ ಅವತಾರ ಘೋಷಿಸಲು ಸಂತೋಷವಾಗಿದೆ.. ಅಥರ್ವ.." ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಯುದ್ಧಭೂಮಿಯಲ್ಲಿ ಅನಿಮೇಟೆಡ್ ಅವತಾರದಲ್ಲಿ ರಾಕ್ಷಸರ ಸೈನ್ಯದ ವಿರುದ್ಧ ಹೋರಾಡುವ ಶಕ್ತಿಯಾಗಿ ನಾವು ಧೋನಿಯನ್ನು ನೋಡಬಹುದಾಗಿದೆ.
- " class="align-text-top noRightClick twitterSection" data="">
ಇಲ್ಲೊಮ್ಮೆ ನೋಡಿ: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
'ಅಥರ್ವ: ದಿ ಒರಿಜಿನ್' ಇದು ಲೇಖಕ ರಮೇಶ್ ತಮಿಳ್ಮಣಿ ಅವರ ಚೊಚ್ಚಲ ಪುಸ್ತಕವಾಗಿದ್ದು, ಇನ್ನೂ ಪ್ರಕಟಗೊಂಡಿಲ್ಲ. ಈ ಕೃತಿಯನ್ನಾಧರಿಸಿ 'ಧೋನಿ ಎಂಟರ್‌ಟೈನ್‌ಮೆಂಟ್' ಬ್ಯಾನರ್ ಅಡಿಯಲ್ಲಿ ವೆಬ್ ಸರಣಿ ನಿರ್ಮಾಣವಾಗುತ್ತಿದೆ.
ಇದನ್ನೂ ಓದಿ: ದೇಶದ ಅತಿ ದೊಡ್ಡ ರಿಯಾಲಿಟಿ ಶೋ ನಡೆಸಿಕೊಡಲು ಸಹಿ ಹಾಕಿದ ಕಂಗನಾ; ಆ ಶೋ ಯಾವುದು ಗೊತ್ತಾ?