ETV Bharat / sitara

Mrs World-2022: ಶೈಲಿನ್ ಫೋರ್ಡ್​ಗೆ ಕಿರೀಟ, ಭಾರತದ ನವದೀಪ್ ಕೌರ್​ಗೆ ಕಾಸ್ಟ್ಯೂಮ್ ಅವಾರ್ಡ್​

ಅಮೆರಿಕದ ಲಾಸ್ ವೇಗಾಸ್‌ನ ನೆವಾಡಾದಲ್ಲಿ ನಡೆದ ಸ್ಪರ್ಧೆಯಲ್ಲಿ ನೂತನ ಮಿಸೆಸ್ ವರ್ಲ್ಡ್- 2022 ಆಗಿ ಮಿಸೆಸ್ ಅಮೆರಿಕನ್ ಆಗಿರುವ ಶೈಲಿನ್ ಫೋರ್ಡ್ ಹೊರಹೊಮ್ಮಿದ್ದಾರೆ.

Mrs World 2022: Shaylyn Ford wins title, Navdeep Kaur bags Best National Costume award
Mrs World 2022: ಅಮೆರಿಕದ ಶೈಲಿನ್ ಫೋರ್ಡ್​ಗೆ ಕಿರೀಟ, ಭಾರತದ ನವದೀಪ್ ಕೌರ್​ಗೆ ಕಾಸ್ಟ್ಯೂಮ್ ಅವಾರ್ಡ್​
author img

By

Published : Jan 16, 2022, 5:39 PM IST

ನವದೆಹಲಿ : ಪ್ರಸ್ತುತ ಮಿಸೆಸ್ ಅಮೆರಿಕನ್ ಆಗಿರುವ ಶೈಲಿನ್ ಫೋರ್ಡ್ ಅವರು ಜನವರಿ 15ರಂದು ಅಮೆರಿಕದ ಲಾಸ್ ವೇಗಾಸ್‌ನ ನೆವಾಡಾದಲ್ಲಿ ನಡೆದ ಸ್ಪರ್ಧೆಯಲ್ಲಿ ನೂತನ ಮಿಸೆಸ್ ವರ್ಲ್ಡ್- 2022 ಆಗಿ ಹೊರಹೊಮ್ಮಿದ್ದಾರೆ.

ಇದೇ ಸ್ಪರ್ಧೆಯ ಉಡುಪು ವಿಭಾಗದಲ್ಲಿ ಭಾರತದ ನವದೀಪ್ ಕೌರ್ ಬೆಸ್ಟ್ ನ್ಯಾಷನಲ್ ಕಾಸ್ಟ್ಯೂಮ್​​​ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಮಿಸೆಸ್​ ವರ್ಲ್ಡ್ ಆಗಿ ಹೊರಹೊಮ್ಮಿದ ಶೈಲಿನ್ ಫೋರ್ಡ್ ಅವರು 37 ವರ್ಷದವರಾಗಿದ್ದು, ಸ್ಪರ್ಧೆಯಲ್ಲಿದ್ದ ಸುಮಾರು 57ಕ್ಕೂ ಹೆಚ್ಚು ಸ್ಪರ್ಧಿಗಳನ್ನು ಹಿಂದಿಕ್ಕಿ ಮಿಸೆಸ್ ವರ್ಲ್ಡ್ ಕಿರೀಟ ತಮ್ಮದಾಗಿಸಿಕೊಂಡಿದ್ದಾರೆ.

ಮಿಸೆಸ್ ವರ್ಲ್ಡ್ ಸ್ಪರ್ಧೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಯುಎಇಯನ್ನು ಪ್ರತಿನಿಧಿಸಿದ ದೇಬಂಜಲಿ ಕಾಮ್ಸ್​ಸ್ತ್ರ ಅವರು ಎರಡನೇ ರನ್ನರ್ ಅಪ್ ಆಗಿದ್ದು, ಮೊದಲ ರನ್ನರ್ ಅಪ್​ ಪಟ್ಟವನ್ನು ಜೋರ್ಡಾನ್​ನ ಜಾಕ್ಲಿಪ್ ಸ್ಟಾಪ್​ ಮುಡಿಗೇರಿಸಿಕೊಂಡಿದ್ದಾರೆ.

ಬೆಸ್ಟ್ ನ್ಯಾಶನಲ್ ಕಾಸ್ಟ್ಯೂಮ್ ಪ್ರಶಸ್ತಿಯನ್ನು ಗೆದ್ದಿರುವ ಮಿಸೆಸ್ ಇಂಡಿಯಾ ವರ್ಲ್ಡ್ ಆಗಿರುವ ನವದೀಪ್ ಕೌರ್ ಈ ಸ್ಪರ್ಧೆಯಲ್ಲಿ ಟಾಪ್-15 ರಲ್ಲಿದ್ದರು. ಕಲಾವಿದೆ ಎಗ್ಗೀ ಜಾಸ್ಮಿನ್‌ ರೂಪಿಸಿದ ಕುಂಡಲಿನಿ ಚಕ್ರದ ಉಡುಪಿಗಾಗಿ ಅವರು ಈ ಪ್ರಶಸ್ತಿ ಗೆದ್ದಿದ್ದರು. ಈ ಉಡುಪು ನೋಡಲು ದೈತ್ಯಾಕಾರದ ಹಾವಿನ ತಲೆಯನ್ನು ಹೋಲುತ್ತದೆ.

ಇದನ್ನೂ ಓದಿ: ಪ್ರೀತಿ ಜಿಂಟಾಗೆ 'ಮಮ್ಮಿ ವೈಬ್ಸ್' ಫೋಟೋಗಳು ಸಖತ್​ ವೈರಲ್​.. ತನ್ನ ಮಕ್ಕಳ ಬಗ್ಗೆ ಹೇಳಿದ್ದು ಹೀಗೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.