ETV Bharat / sitara

ಕೊರೊನಾ ಗೆದ್ದ ಸುಮಲತಾ ಅಂಬರೀಶ್​.. ಸಂತಸ ಹಂಚಿಕೊಂಡ ಸಂಸದೆ - ಸುಮಲತಾ ಅಂಬರೀಶ್​ ಗುಣಮುಖ

ನಿಮ್ಮ ಪ್ರೀತಿ, ಆಶೀರ್ವಾದಕ್ಕೆ ನನ್ನ ತುಂಬು ಹೃದಯದ ಧನ್ಯವಾದ. ಮೂರು ವಾರಗಳ ಕಾಲ ನನಗೆ ಚಿಕಿತ್ಸೆ, ಧೈರ್ಯ ಮತ್ತು ಸಲಹೆಗಳು ಕೊರೊನಾ ಗೆದ್ದು ಬರಲು ಸಹಕಾರಿ ಆಯಿತು..

MP Sumalatha Ambarish cure from corona
ಕೊರೊನಾ ಗೆದ್ದ ಸುಮಲತಾ ಅಂಬರೀಶ್​..ಸಂತಸ ಹಂಚಿಕೊಂಡ ಸಂಸದೆ
author img

By

Published : Jul 22, 2020, 4:57 PM IST

ಕೊರೊನಾ ದೃಢಪಟ್ಟ ಹಿನ್ನೆಲೆ ಮೂರು ವಾರಗಳ ಕಾಲ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಶ್​ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ.

MP Sumalatha Ambarish cure from corona
ಕೊರೊನಾ ಗೆದ್ದ ಸುಮಲತಾ ಅಂಬರೀಶ್​..ಸಂತಸ ಹಂಚಿಕೊಂಡ ಸಂಸದೆ

ಗುಣಮುಖರಾಗಿರುವ ಬಗ್ಗೆ ಸ್ವತಃ ಸುಮಲತಾ ಅಂಬರೀಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮೆಲ್ಲರ ಪ್ರೀತಿ, ಆಶೀರ್ವಾದದಿಂದ ಮೂರು ವಾರಗಳ ಕ್ವಾರಂಟೈನ್​ ಮುಗಿಸಿ ಸಂಪೂರ್ಣ ಗುಣಮುಖಳಾಗಿದ್ದೇನೆ. ನಿಮ್ಮ ಪ್ರೀತಿ, ಆಶೀರ್ವಾದಕ್ಕೆ ನನ್ನ ತುಂಬು ಹೃದಯದ ಧನ್ಯವಾದ. ಮೂರು ವಾರಗಳ ಕಾಲ ನನಗೆ ಚಿಕಿತ್ಸೆ, ಧೈರ್ಯ ಮತ್ತು ಸಲಹೆಗಳು ಕೊರೊನಾ ಗೆದ್ದು ಬರಲು ಸಹಕಾರಿ ಆಯಿತು.

ಇನ್ನು, ಕೊರೊನಾ ದೃಢಪಟ್ಟರೆ ಯಾರೂ ಕೂಡ ಹೆದರಬೇಕಿಲ್ಲ. ದಯವಿಟ್ಟು ವೈದ್ಯರು ಹೇಳುವ ಎಲ್ಲ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಿ. ಸದಾ ಸಕಾರಾತ್ಮಕವಾಗಿ ಯೋಚಿಸಿ, ಯಾವುದೇ ಕಾರಣಕ್ಕೂ ಭಯಕ್ಕೆ ಒಳಗಾಗಬೇಡಿ. ವೈದ್ಯರ ಸಲಹೆಯಂತೆ 4 ತಿಂಗಳ ಬಳಿಕ ನಾನು ಸೇವೆಗೆ ಮರಳುತ್ತೇನೆ ಅಂತಾ ಬರೆದುಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.