ETV Bharat / sitara

ತೆರೆ ಮೇಲೆ ಬರ್ತಿದೆ ಕೈಲಾಸಂ ನಾಟಕ ಆಧಾರಿತ ಸಿನಿಮಾ... ನೋಡುಗರಾಗ್ತಾರಾ 'ಮೂಕವಿಸ್ಮಿತ'?

author img

By

Published : Apr 30, 2019, 9:33 AM IST

ಟಿ.ಪಿ. ಕೈಲಾಸಂ ಅವರ ಟೊಳ್ಳು ಗಟ್ಟಿ ನಾಟಕ‌ ಆಧಾರಿತ ಸಿನಿಮಾ 'ಮೂಕವಿಸ್ಮಿತ' ಮೇ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಿನಿಮಾವನ್ನು ರಂಗಭೂಮಿ ಕಲಾವಿದ ಗುರುದತ್ ಶ್ರೀಕಾಂತ್ ನಿರ್ದೇಶಿಸಿದ್ದಾರೆ.

'ಮೂಕವಿಸ್ಮಿತ' ಚಿತ್ರತಂಡ

ಟಿಪಿ ಕೈಲಾಸಂ ಅವರ ನಾಟಕ ಆಧಾರಿತ ಸಿನಿಮಾ ’ಮೂಕವಿಸ್ಮಿತ’, ಮೇ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

'ಮೂಕವಿಸ್ಮಿತ' ಚಿತ್ರತಂಡ

ಇದು ಟಿ.ಪಿ.ಕೆ ಅವರ ಟೊಳ್ಳು ಗಟ್ಟಿ ನಾಟಕ‌ ಆಧಾರಿತ ಸಿನಿಮಾ. ರಂಗಭೂಮಿ ಕಲಾವಿದ ಗುರುದತ್ ಶ್ರೀಕಾಂತ್ ಈ ಸಿನಿಮಾವನ್ನು ನಿರ್ದೇಶಿಸಿ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ವಾಣಿಶ್ರೀ ಭಟ್ ಹಾಗೂ ಶುಭಾ ರಕ್ಷ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಂಗಭೂಮಿ ಕಲಾವಿದ ಹಾಗೂ ಪತ್ರಕರ್ತ ಮಾವಳ್ಳಿ ಕಾರ್ತಿಕ್‌ ಕೂಡಾ ಸಿನಿಮಾದಲ್ಲಿ ಪುಟ್ಟ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಭಾಷಾ ನಟ ಸಂದೀಪ್ ಮಲಾನಿ ಕೂಡಾ ಚಿತ್ರದಲ್ಲಿದ್ದಾರೆ.

mookavismita
'ಮೂಕವಿಸ್ಮಿತ'

ಹೊಸಬರ ತಂಡವಾದರೂ ಸಿನಿಮಾದಲ್ಲಿ ಎಲ್ಲರಿಗೂ ಇಷ್ಟವಾಗುವ ಕಥೆ ಇದ್ದು ವಿಶಿಷ್ಟವಾದ ನಿರೂಪಣೆಯಿಂದ ಕೂಡಿದೆ ಎಂದು ಚಿತ್ರತಂಡ ಹೇಳಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ’ಯು’ ಸರ್ಟಿಫಿಕೇಟ್ ಸಿಕ್ಕಿದೆ. ಚಿತ್ರದ ಕಥೆಗೆ ತಕ್ಕಂತೆ ಹಾಡುಗಳಿಗೆ ಸಂಗೀತ ನೀಡಿದ್ದು ಪ್ರೇಕ್ಷಕರ ಮನಮುಟ್ಟುವುದು ಖಂಡಿತ ಎಂದು ಸಂಗೀತ ನಿರ್ದೇಶಕ ಚಿನ್ಮಯ್ ಡಿ. ರಾವ್ ಭರವಸೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಸಿನಿಮಾ ಕನ್ನಡ ಪ್ರೇಕ್ಷಕರನ್ನ ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಬಿಡುಗಡೆಯಾಗುವರೆಗೂ ಕಾದು ನೋಡಬೇಕು.

Intro:’ಮೂಕವಿಸ್ಮಿತ’. ಸ್ಯಾಂಡಲ್‌ವುಡ್‌ನಲ್ಲಿ ಹೊಸ ಕನಸುಗಳ ಬೆನ್ನುಹತ್ತಿ ಪ್ರೇಕ್ಷಕರಿಗೆ ಮನರಂಜನೆಯ ಮೃಷ್ಟಾನ್ನವನ್ನೇ ಉಣ ಬಡಿಸಲು ರೆಡಿಯಾಗಿರುವ ಹೊಸ ಸಿನಿಮಾ. ಕನ್ನಡದಲ್ಲಿ ಸದ್ಯ ಬರ‍್ತೀರೊ ಹೊಡಿಬಡಿ ಸಂಸ್ಕ್ರತಿಯ ಚಿವಿಶೆಷವಾದ ಜಾಗ ಸಂಪಾದಿಸೋಕೆ ’ಮೂಕವಿಸ್ಮಿತ’ ಚಿತ್ರತಂಡ ಸಜ್ಜಾಗಿದ್ದು ಮೇ ೧೭ ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ..ಒಂದು ವಿಭಿನ್ನ ಸ್ಟೋರಿಲೈನ್ ಹಾಗೂ ಮಿನಿಂಗ್‌ಫುಲ್ ಪ್ರೆಸೆಂಟೇಶನ್ ಮೂಲಕ ಗಾಂಧಿನಗರದಲ್ಲಿ ತಮ್ಮದೇ ಆದ ಸೌಂಡ್ ಮಾಡ್ತೀವಿ ಅಂತ ಹಠ ತೊಟ್ಟು ಹೊರಟಿರುವ ಮೂಕವಿಸ್ಮಿತ ಚಿತ್ರತಂಡ ಟ್ರೈಲರ್ ನಿಂದಲೇ’ ಈಗಾಗಲೇ ಹವಾ ಕ್ರಿಯೇಟ್ ಮಾಡಿದೆ.ಇನ್ನೂ ಎಲ್ಲರಿಗೂ ತಿಳಿದಿತುವ ಹಾಗೇ " ಮೂಕವಿಸ್ಮಿತ" ಚಿತ್ರವು ಟಿಪಿ ಕೈಲಾಸಂ ಅವರ ಟೋಳ್ಳು ಗಟ್ಟಿ ನಾಟಕ‌ಆಧಾರತಿತ ಸಿನಿಮಾವಾಗಿದೆ.

Body:ಇನ್ನೂ ಈ ಚಿತ್ರವನ್ನು ರಂಗಭೂಮಿ ಕಲಾವಿದ . ಹೊಸಬರ ಗುರುದತ್ ಶ್ರೀಕಾಂತ್ ನಿರ್ದೇಶನದ ಜೊತೆ ಪ್ರಮುಖ ಪಾತ್ರವನ್ನೂ ಪ್ಲೇ ಮಾಡಿದ್ದಾರೆ.. ಚಿತ್ರದ ಸ್ಕ್ರೀನ್ ಪ್ಲೇನಲ್ಲಿ ಅಡಿಯನ್ಸ್‌ಗೆ ಹೊಸ ಸರ್‌ಪ್ರೈಸ್ ಕಾದಿದೆಯಂತೆ. ಹಾಗೇ ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಾಯಕಿಯಾರಾಗಿ ಸ್ಯಾಂಡಲ್‌ವುಡ್‌ಗೆ ಕಾಲಿಡುತ್ತಿರುವ ವಾಣಿಶ್ರಿ ಭಟ್ ಹಾಗೂ ಈಗಾಗಲೇ ಹಲವು ಚಿತ್ರಗಳಲ್ಲಿ ಗ್ಲಾಮರ್ ರೋಲ್ ಪ್ಲೇ ಮಾಡಿರುವ ಶುಭಾ ರಕ್ಷಾ ಈ ಚಿತ್ರದಲ್ಲಿ ಡಿ ಗ್ಲಾಮರ್ ಕ್ಯಾರೆಕ್ಟರ್ ಪ್ಲೇಚಮಾಡಿದ್ದಾರೆ .ಇನ್ನು ಚಿತ್ರದಲ್ಲಿ ನಟಿಸಿರುವ ರಂಗಭೂಮಿ ಕಲಾವಿದ ಹಾಗೂ ಪತ್ರಕರ್ತ ಮಾವಳ್ಳಿ ಕಾರ್ತಿಕ್‌ ಮೂಕವಿಸ್ಮಿತ ಚಿತ್ರದಲ್ಲಿ ಪುಟ್ಟು ಪಾತ್ರದಲ್ಲಿ ಕಾಣಿಸಿದ್ದು .ಮೂಕವಿಸ್ಮಿತ ಚಿತ್ರ ಒಂದು ವಿಶೇಷವಾದ ಅನುಭವವಂತೆ.ಅಲ್ಲದೆ ಚಿತ್ರದಲ್ಲಿ ಬಹುಭಾಷ ನಟ ಸಂದೀಪ್ ಮಲಾನಿ ಕೂಡ ಬಣ್ಣಹಚ್ಚಿದ್ದಾರೆ. ಹೊಸಬರ ತಂಡವಾದ್ರೂ ಸಿನಿಮಾದಲ್ಲಿ ಎಲ್ಲರಿಗೂ ಇಷ್ಟವಾಗುವ ಕಂಟೆಂಟ್ ಇದ್ದು . ವಿಶಿಷ್ಟವಾದ ನಿರೂಪಣೆಯಿಂದ ಗಾಂಧಿನಗರದಲ್ಲಿ ಭರವಸೆ ಮೂಡಿಸಿರುವ ’ಮೂಕವಿಸ್ಮಿತ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ’ಯು’ ಸರ್ಟಿಫಿಕೆಟ್ ಸಿಕ್ಕಿದೆ. ಚಿತ್ರದ ಹಾಡುಗಳು ಎಮೊಷನಲ್ ಫೀಲ್ ಕೊಡೋದ್ರಲ್ಲಿ ಹಿಂದೆ ಬಿದ್ದಿಲ್ಲ.ಚಿತ್ರಕ್ಕೆ ಹೊಂದಾಣಿಕೆಯಾಗುವ ಸಂಗೀತ ಸಂಯೋಜಿಸಿರುವ ಚಿನ್ಮಯ್.ಡಿ.ರಾವ್ ಮೂಕವಿಸ್ಮಿತ ಖಂಡಿತ ಪ್ರೇಕ್ಷಕರನ್ನ ಪಾಸಿಟಿವ್ ಆಗಿ ತಲುಪುತ್ತೆ ಎನ್ನುವ ನಂಬಿಕೆಯಲ್ಲಿದಾರೆ. ಒಟ್ಟಾರೆಯಾಗಿ ಜೂನ್‌ಅಥವಾ ಜುಲೈನಲ್ಲಿ ಬಿಡುಗಡೆಯಾಗಲಿರುವ ಮೂಕವಿಸ್ಮಿತ ಕನ್ನಡ ಚಿತ್ರರಂಗಕ್ಕೆ ಹೊಸ ಮೈಲಿಗಲ್ಲನ್ನ ತಂದುಕೊಡುತ್ತಾ? ಕಥೆಯಿಲ್ಲದ ಬಿಗ್‌ಬಜೆಟ್ ಸಿನಿಮಾಗಳ ನಡುವೆ ತನ್ನ ಸ್ಥಾನವನ್ನ ಸಂಪಾದಿಸಿಕೊಳ್ಳುತ್ತಾ ಎನ್ನುವುದೇ ಸದ್ಯದ ಸಸ್ಪೆನ್ಸ್

ಸತೀಶ ಎಂಬಿ.

Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.