ETV Bharat / sitara

ಬರಗೂರು ನಿರ್ದೇಶನದ 'ಮೂಕನಾಯಕ' ಸಿನಿಮಾಕ್ಕೆ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ..

ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶಿಸಿದ ಮೂಕನಾಯಕ ಚಿತ್ರಕ್ಕೆ ನೋಯ್ಡಾದ ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ 'ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ' ಲಭ್ಯವಾಗಿದೆ.

Kumar Govind
ಕುಮಾರ್​ ಗೋವಿಂದ್
author img

By

Published : Aug 12, 2021, 4:33 PM IST

ಸಮಾಜದಲ್ಲಿ ನಡೆಯುವ ಸೂಕ್ಷ್ಮ ವಿಷಯಗಳ ಮೇಲೆ ಬರಗೂರು ರಾಮಚಂದ್ರಪ್ಪ ಅವರು ಸಿನಿಮಾ‌‌ಗಳನ್ನ ನಿರ್ದೇಶನ ಮಾಡುತ್ತಾ ಬಂದಿದ್ದಾರೆ. ಅವರ ಪ್ರಯತ್ನಕ್ಕೆ ಫಲದ ರೂಪದಲ್ಲಿ ಒಂದರ ಹಿಂದೆ ಮತ್ತೊಂದರಂತೆ ಪ್ರಶಸ್ತಿಗಳು ಹಿಂಬಾಲಿಸುತ್ತಲೇ ಬರುತ್ತಿವೆ. ಇದೀಗ 'ಮೂಕನಾಯಕ' ಕನ್ನಡ ಚಿತ್ರಕ್ಕೆ ನೋಯ್ಡಾದ ಅಂತಾರಾಷ್ಟ್ರೀಯ ಸಿನಿಮಾ ಸ್ಪರ್ಧೆಯಲ್ಲಿ 'ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿ' ಲಭ್ಯವಾಗಿದೆ.

kumar Govind and actress rekha
ಕುಮಾರ್​ ಗೋವಿಂದ್ ಹಾಗೂ ನಟಿ ರೇಖಾ

ನೋಯ್ಡಾದ ಸಂಸ್ಥೆಯೊಂದು 'ಇನ್‌ಕ್ರೆಡಿಬಲ್ ಸಿನಿ ಅವಾರ್ಡ್'ಗಾಗಿ 10 ವರ್ಷಗಳ ಒಳಗೆ ನಿರ್ಮಾಣಗೊಂಡ ವಿಶ್ವದ ಎಲ್ಲ ಭಾಷೆಯ ಚಿತ್ರಗಳನ್ನು ಆಹ್ವಾನಿಸಿತ್ತು. ಇದರಲ್ಲಿ 'ಮೂಕನಾಯಕ' ಚಿತ್ರವನ್ನು ಸ್ಪರ್ಧೆಗೆ ಕಳಿಸಲಾಗಿತ್ತು. ಪ್ರವೇಶ ಪಡೆದ ಚಿತ್ರಗಳಲ್ಲಿ ಆಯ್ದ ಚಿತ್ರಗಳನ್ನು ವಿವಿಧ ಪ್ರಕಾರಗಳ ಸರ್ಧೆಗೆ ನಾಮ ನಿರ್ದೇಶನ ಮಾಡಲಾಗಿತ್ತು. ಹೀಗೆ ನಾಮ ನಿರ್ದೇಶನಗೊಂಡ ಮೂಕನಾಯಕ ಚಿತ್ರವು ವಿಶ್ವದ ವಿವಿಧ ಭಾಷೆಗಳ ನಾಮನಿರ್ದೇಶಿತ ಚಿತ್ರಗಳೊಂದಿಗೆ ಸ್ಪರ್ಧಿಸಿ ದಶಕದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ.

baraguru ramachandrappa and actress rekha
ಬರಗೂರು ರಾಮಚಂದ್ರಪ್ಪ ಹಾಗೂ ನಟಿ ರೇಖಾ

ಮಾತು ಬಾರದ ಮೂಕ ಚಿತ್ರಕಲಾವಿದನ ಆಶಯ ಮತ್ತು ಅಭಿವ್ಯಕ್ತಿ ವಿನ್ಯಾಸವನ್ನು ಕೇಂದ್ರವಾಗಿಟ್ಟುಕೊಂಡಿರುವ ಈ ಚಿತ್ರವು, ಚಿತ್ರಕಲೆಯ ವಿವಿಧ ಸಾಧ್ಯತೆಗಳನ್ನು ಸಾದರಪಡಿಸಿದೆ. ಸಮುದಾಯದತ್ತ ಸಿನಿಮಾ ಎಂಬ ಪರಿಕಲ್ಪನೆಯಡಿಯಲ್ಲಿ 'ಚಿತ್ರಯಾತ್ರೆ' ನಡೆಸಿ ಈಗಾಗಲೇ ಅನೇಕ ಊರುಗಳಲ್ಲಿ ಚಿತ್ರಪದರ್ಶನ ಮಾಡಲಾಗಿದೆ. ಈ ಹಿಂದೆ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಈ ಸಿನಿಮಾ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಮೂಕಚಿತ್ರ ಕಲಾವಿದನ ಪಾತ್ರದಲ್ಲಿ ಕುಮಾರ್ ಗೋವಿಂದ್ ನಟಿಸಿದ್ದು, ಸಹೋದರಿ ಪಾತ್ರದಲ್ಲಿ ನಟಿ ರೇಖಾ ನಟಿಸಿದ್ದಾರೆ.

Actress Rekha
ನಟಿ ರೇಖಾ

ಇತರೆ ಪಾತ್ರಗಳಲ್ಲಿ ಸುಂದರರಾಜ್, ಯತಿರಾಜ್, ಶೀತಲ್‌ಶೆಟ್ಟಿ, ವೆಂಕಟರಾಜ್ ಮುಂತಾದವರು ನಟಿಸಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರೇ, ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಬಾಲರಾಜ್ ಅವರು ನಿರ್ಮಿಸಿದ್ದಾರೆ. ನಾಗರಾಜ ಆದವಾನಿ ಛಾಯಾಗ್ರಹಣ, ಸುರೇಶ್ ಅರಸು ಸಂಕಲನ, ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನವಿದೆ.

ಓದಿ:Pornography Case: ನಟಿ ಗೆಹಾನಾ ವಸಿಷ್ಠ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿದ ಕೋರ್ಟ್​

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.