ಮಲಯಾಳಂ ಹಿರಿಯ ನಟ ಮೋಹನ್ ಲಾಲ್ ಸಿನಿ ಜಗತ್ತಿಗೆ ಎಂಟ್ರಿ ಕೊಟ್ಟು ನಾಲ್ಕು ದಶಕಗಳೇ ಕಳೆದಿವೆ. ಆದ್ರೂ ಕೂಡ ಸಿನಿಮಾ ಮೇಲಿನ ಅವರ ಉತ್ಸಾಹ, ಕಾಳಜಿ, ನಿಷ್ಠೆ ಮಾತ್ರ ಯಾವತ್ತೂ ಕುಂದಿಲ್ಲ. ಸದ್ಯ ಮೋಹನ್ ಲಾಲ್ ದೃಶ್ಯಂ-2 ಸಿನಿಮಾ ಪ್ರಮೋಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಜಾರ್ಜ್‌ಕುಟ್ಟಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಕಳೆದ ಭಾನುವಾರ ದೃಶ್ಯಂ-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಸಿನಿಮಾ ಪ್ರಮೋಷನ್ನಲ್ಲಿ ಇರುವ ನಟ ಸಂದರ್ಶನವೊಂದರಲ್ಲಿ ತಮ್ಮ ಸಿನಿಮಾ ವೃತ್ತಿಯ ಬಗ್ಗೆ ಮಾತನಾಡಿದ್ದಾರೆ.
ನಿಮ್ಮ ಸಿನಿಮಾ ಬದುಕನ್ನು ಯಾವಾಗ ಮುಗಿಸುವಿರಿ ಎಂಬ ಪ್ರಶ್ನೆ ಎದುರಾದಾಗ ಒಂದೊಳ್ಳೆ ಉತ್ತರ ನೀಡಿದ್ದಾರೆ. ನನ್ನ ಸಿನಿಮಾ ಬದುಕು ಯಾವಾಗ ನನಗೆ ಕೆಲಸ ಎಂದೆನಿಸುತ್ತದೆಯೋ ಅಂದೇ ನಾನು ಈ ಚಿತ್ರರಂಗದಿಂದ ದೂರ ಉಳಿಯುತ್ತೇನೆ ಎಂದಿದ್ದಾರೆ.
- " class="align-text-top noRightClick twitterSection" data="
">
ನನಗೆ ಪ್ರತಿ ದಿನವೂ ಹೊಸದೇ.. ಅದ್ರಲ್ಲೂ ನಟರಾದ ನಮಗೆ ಪ್ರತಿ ದಿನವೂ ಹೊಸದೇ.. ಯಾಕಂದ್ರೆ, ಹೊಸ ವೇಷಗಳು, ಹೊಸ ಸಂಭಾಷಣೆಗಳು, ಕಾಲ್ಪನಿಕ ಯೋಚನೆಗಳು, ಫೈಟಿಂಗ್, ಹಾಡು ಹೀಗೆ ಹಲವಾರು ಹೊಸತುಗಳು ನಮ್ಮ ಬದುಕಲ್ಲಿ ಇವೆ ಎಂದು ಹೇಳಿದ್ದಾರೆ.
- " class="align-text-top noRightClick twitterSection" data="
">
ಮೋಹನ್ ಲಾಲ್ ನಟನೆಯ ದೃಶ್ಯಂ-2 ಸಿನಿಮಾ ಇದೇ ಫೆ. 19ರಂದು ಅಮೇಜಾನ್ ಪ್ರೈಂ ವಿಡಿಯೋದಲ್ಲಿ ತೆರೆ ಕಾಣಲಿದೆ.
- " class="align-text-top noRightClick twitterSection" data="">