ಟಾಲಿವುಡ್ ನಟರಾದ ಚಿರಂಜೀವಿ ಹಾಗೂ ಮೋಹನ್ ಬಾಬು ಆಪ್ತ ಸ್ನೇಹಿತರು ಎಂಬುದು ತಿಳಿದ ವಿಚಾರ. ತಮ್ಮ ತಮ್ಮ ಕರಿಯರ್ನಲ್ಲಿ ಬ್ಯುಸಿ ಇರುವ ಇಬ್ಬರೂ ಆಗಾಗ್ಗೆ ಬಿಡುವು ಮಾಡಿಕೊಂಡು ಭೇಟಿಯಾಗುತ್ತಿರುತ್ತಾರೆ. ಇದೀಗ ಬಹಳ ದಿನಗಳ ನಂತರ ಒಟ್ಟಿಗೆ ಭೇಟಿ ಆಗಿರುವ ಇವರು ಸಿಕ್ಕಿಂಗೆ ತೆರಳಿದ್ದಾರೆ.
- " class="align-text-top noRightClick twitterSection" data="
">
ಈ ಇಬ್ಬರೂ ನಟರು ಸಿಕ್ಕಿಂಗೆ ತೆರಳಿರುವ ವಿಚಾರವನ್ನು ಮೋಹನ್ ಬಾಬು ಪುತ್ರಿ ಲಕ್ಷ್ಮಿ ಮಂಚು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ಸಿಕ್ಕಿಂನಲ್ಲಿ ಬಿಲ್ಲಾ ರಂಗ. ನಿಮ್ಮಲ್ಲಿ ಎಷ್ಟು ಮಂದಿ ಈ ಜೋಡಿಯನ್ನು ಒಟ್ಟಿಗೆ ನೋಡಲು ಕಾಯುತ್ತಿದ್ದಿರಿ..? ಚಿರಂಜೀವಿ ಅಂಕಲ್ ಹಾಗೂ ನನ್ನ ತಂದೆ ಜೊತೆ ಸೇರಿ ಸಮಯ ಕಳೆಯುತ್ತಿರುವುದನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತಿದೆ. ಮುಂದೊಂದು ದಿನ ನಾವೆಲ್ಲರೂ ನಿಮ್ಮೊಂದಿಗೆ ಬಂದು ಹೀಗೆ ಸಮಯ ಕಳೆಯುತ್ತೇವೆ" ಎಂದು ಲಕ್ಷ್ಮಿ ಮಂಚು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನಾಲ್ಕು ದಿನಕ್ಕೆ 'ರಾಬರ್ಟ್' ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದೆಷ್ಟು ಗೊತ್ತಾ..?
ಚಿರಂಜೀವಿ ಹಾಗೂ ಮೋಹನ್ ಬಾಬು ಅವರು ನಟಿಸಿದ ಬಿಲ್ಲ ರಂಗಾ, ಪಟ್ನಂ ವಚ್ಚಿನ ಪತಿವ್ರತಲು, ಕಿರಾಯಿ ರೌಡಿಲು ಸಿನಿಮಾಗಳು 90 ರ ದಶಕದಲ್ಲಿ ಸೂಪರ್ ಹಿಟ್ ಆಗಿದ್ದವು. ಸದ್ಯಕ್ಕೆ ಚಿರಂಜೀವಿ 'ಆಚಾರ್ಯ' ಚಿತ್ರದಲ್ಲಿ ಬ್ಯುಸಿ ಇದ್ದರೆ ಮೋಹನ್ ಬಾಬು 'ಸನ್ ಆಫ್ ಇಂಡಿಯಾ' ಚಿತ್ರದಲ್ಲಿ ಬ್ಯುಸಿ ಇದ್ದಾರೆ.