ಟ್ವಿಟರ್ನಲ್ಲಿ ತಮ್ಮ ಬೋಲ್ಡ್ ಲುಕ್ಗಳನ್ನು ಶೇರ್ ಮಾಡಿರುವ ಬೆಥನಿ, ವಿಶ್ವಕಪ್ ಕಿರೀಟ ಹೊತ್ತು ತಂದಿರುವ ತಮ್ಮ ತಂಡಕ್ಕೆ ವಿಶ್ ಮಾಡಿದ್ದಾರೆ. ಅವರ ಈ ಟಾಪ್ಲೆಸ್ ಪೋಟೊಗಳು ಕ್ರಿಕೆಟ್ ಅಭಿಮಾನಿಗಳ ಹೃದಯಕ್ಕೆ ಕನ್ನ ಹಾಕಿವೆ. ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಮತ್ತೊಂದಿಷ್ಟು ಜನರು ಇವರನ್ನು ಇಂಗ್ಲೆಂಡ್ನ ಪೂನಂ ಪಾಂಡೆ ಎಂದು ಕರೆದಿದ್ದಾರೆ.
2011ರಲ್ಲಿ ಭಾರತ ವಿಶ್ವಕಪ್ ಗೆದ್ದರೆ ತಾನು ನಗ್ನವಾಗುವುದಾಗಿ ಪೂನಂ ಹೇಳಿದ್ದರು. ನಂತರ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆ ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿದಿದ್ದರು. ಆದರೆ, 2012ರಲ್ಲಿ ಕೆಕೆಆರ್ ತಂಡ ಐಪಿಎಲ್ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಾಗ ಪೂನಂ ಬೆತ್ತಲೆಯಾಗಿ ಪೋಸ್ ನೀಡಿ ಸುದ್ದಿಯಾಗಿದ್ದರು. ಇದೀಗ ಬ್ರಿಟನ್ ಸುಂದರಿ ಬೆಥನಿ, ಪೂನಂ ಅವರನ್ನ ನೆನಪಿಸಿದ್ದಾರೆ.