ಮುಂಬೈ: ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಜೀವನ ಚರಿತ್ರೆವನ್ನು ಯಾರಾದರೂ ಸಿನಿಮಾ ಮಾಡಿದರೆ ದಯವಿಟ್ಟು ನನ್ನ ಹೆಸರನ್ನು ಶಿಫಾರಸು ಮಾಡಿ ಎಂದು ಮಾಧ್ಯಮಗಳ ಪ್ರಶ್ನೆಗೆ ತಾಪ್ಸಿ ಪನ್ನು ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ.
ಮುಂಬೈನಲ್ಲಿ ಶುಕ್ರವಾರ ರೇಡಿಯೋ ಕೇಂದ್ರವೊಂದರ ನಿಧಿ ಸಂಗ್ರಹದ ಭಾಗವಾಗಿ ಕ್ಯಾನ್ಸರ್ ಪೀಡಿತ ಮಕ್ಕಳನ್ನು ಭೇಟಿಯಾದಾಗ ತಾಪ್ಸಿ ಪನ್ನು ಮಾಧ್ಯಮಗಳೊಂದಿಗೆ ಮಾತನಾಡಿ ಹೀಗೆಂದಿದ್ದಾರೆ.
ಈ ವರ್ಷದ ಆರಂಭದಲ್ಲಿ ತೆರೆ ಕಂಡ 'ಬದ್ಲಾ' ಮತ್ತು 'ಗೇಮ್ ಓವರ್' ಚಿತ್ರಗಳಲ್ಲಿ ನಟಿ ತಾಪ್ಸಿ ಪನ್ನು ಕಾಣಿಸಿಕೊಂಡಿದ್ದರು. ಮುಂದೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಅವರ ಜೀವನ ಆಧಾರಿತ ಚಿತ್ರದಲ್ಲಿ ತಾಪ್ಸಿ ಕಾಣಿಸಿಕೊಳ್ಳಲಿದ್ದಾರೆ ಎಂದು ವೆಬ್‌ಸೈಟ್‌ವೊಂದು ಸುದ್ದಿ ಮಾಡಿತ್ತು.
ಈ ಹಿನ್ನೆಲೆ ಮಾದ್ಯಮದವರು ತಾಪ್ಸಿ ಮಿಥಾಲಿ ಬಯೋಪಿಕ್ ಸಿನಿಮಾದಲ್ಲಿ ನಟಿಸುತ್ತಿರುವುದು ನಿಜವೇ ಎಂದು ಪ್ರಶ್ನಿಸಿದಾಗ ತಾಪ್ಸಿ ಹೀಗೆಂದಿದ್ದಾರೆ. "ಇಂತಹದ್ದೊಂದು ಚಿತ್ರ ಸಿಕ್ಕಿದರೆ ನನಗೆ ತುಂಬಾ ಖುಷಿಯಾಗುತ್ತದೆ. ಚಿತ್ರೀಕರಣದ ಹೆಚ್ಚಿನ ಸಮಯ ಕ್ರಿಕೆಟ್ ಆಡುತ್ತಲೇ ಕಳೆಯಬಹುದು. ಹೀಗಾಗಿ ನಿಮಗೆ(ಮಾಧ್ಯಮ) ಈ ರೀತಿಯ ಸಿನಿಮಾ ಮಾಡುತ್ತಿದ್ದಾರೆ ಎಂಬ ಮಾಹಿತಿಯಿದ್ದರೆ ದಯವಿಟ್ಟು ನನ್ನನ್ನು ರೆಕಮೆಂಡ್ ಮಾಡಿ. ಏಕೆಂದರೆ ನಾನು ಖಂಡಿತಾ ಅಂತಹ ಸಿನಿಮಕ್ಕೆ ಸಹಿ ಹಾಕುತ್ತೇನೆ ಎನ್ನುತ್ತಾ ನಕ್ಕರು.