ETV Bharat / sitara

ರಶ್ಮಿಕಾ ಅಭಿನಯದ ಚೊಚ್ಚಲ ಹಿಂದಿ ಸಿನೆಮಾ 'ಮಿಷನ್ ಮಜ್ನು' ರಿಲೀಸ್​ಗೆ ಮುಹೂರ್ತ ಫಿಕ್ಸ್​ - ಮಿಷನ್ ಮಜ್ನು ರಶ್ಮಿಕಾ ಮಂದನ್ನಾ ಅಭಿನಯದ ಚೊಚ್ಚಲ ಹಿಂದಿ ಸಿನೆಮಾ

ರಶ್ಮಿಕಾ ಮಂದಣ್ಣಾ ಅಭಿನಯದ ಚೊಚ್ಚಲ ಹಿಂದಿ ಸಿನೆಮಾ ಮಿಷನ್ ಮಜ್ನು ಬಿಡುಗಡೆಗೆ ಸಿದ್ಧವಾಗಿದೆ ಎಂದು ಚಿತ್ರತಂಡ ಹೇಳಿದೆ. ಚಿತ್ರವು 1970ರ ದಶಕದ ಬೇಹುಗಾರಿಕೆಯ ಕಥೆಯನ್ನು ಹೊಂದಿರುವುದಾಗಿ ಹೇಳಲಾಗಿದ್ದು, ಸಿದ್ಧಾರ್ಥ್​ ಮಲ್ಹೋತ್ರಾ ರಾ ಏಜೆಂಟ್ ಆಗಿ ನಟಿಸಿರುವುದಾಗಿ ತಿಳಿದುಬಂದಿದೆ. ಸಿನೆಮಾವನ್ನು ಶಂತನು ಬಾಗ್ಚಿಯವರು ನಿರ್ದೇಶಿಸಿದ್ದು, ಜೂನ್ 10 ರಂದು ದೇಶಾದ್ಯಂತ ಬಿಡುಗಡೆಗೊಳ್ಳುತ್ತಿದೆ ಚಿತ್ರತಂಡ ಹೇಳಿದೆ.

mission-majnu-rashmika-mandannas-hindi-debut-with-sidharth-malhotra-gets-pushed
ರಶ್ಮಿಕಾ ಮಂದನ್ನಾ ಅಭಿನಯದ ಚೊಚ್ಚಲ ಹಿಂದಿ ಸಿನೆಮಾ ಮಿಷನ್ ಮಜ್ನು ಜೂನ್ 10ರಂದು ತೆರೆಗೆ
author img

By

Published : Mar 9, 2022, 1:05 PM IST

ಮುಂಬೈ ( ಮಹಾರಾಷ್ಟ್ರ) : ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಶ್ಮಿಕಾ ಮಂದಣ್ಣಾ ಅಭಿನಯದ ಬೇಹುಗಾರಿಕೆಯ ಕಥೆಯುಳ್ಳ ಮಿಷನ್ ಮಜ್ನು ಸಿನೆಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಬಹಿರಂಗಪಡಿಸಿದೆ.

ಹಲವು ಹಿಟ್ ಸಿನೆಮಾಗಳನ್ನು ನೀಡಿರುವ, ಸದ್ಯ ಪುಷ್ಪ ಸಿನೆಮಾದಲ್ಲಿ ನಟಿಸಿದ್ದ ರಶ್ಮಿಕಾ ಮಂದಣ್ಣಾ ಇದೇ ಮೊದಲ ಬಾರಿಗೆ ಹಿಂದಿ ಸಿನೆಮಾದಲ್ಲಿ ನಟಿಸಿದ್ದಾರೆ. ಮಿಷನ್ ಮಜ್ನು ರಶ್ಮಿಕಾ ಮಂದಣ್ಣಾ ಅಭಿನಯದ ಚೊಚ್ಚಲ ಹಿಂದಿ ಸಿನೆಮಾವಾಗಿದ್ದು, ಜೂನ್ 10 ರಂದು ತೆರೆಕಾಣಲಿದೆ ಎಂದು ಚಿತ್ರ ತಂಡ ಹೇಳಿದೆ.

1970 ರ ದಶಕದ ಬೇಹುಗಾರಿಕೆ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಸಿನೆಮಾದಲ್ಲಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಒಬ್ಬ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದು ಪಾಕಿಸ್ತಾನಿ ನೆಲದಲ್ಲಿ ರಹಸ್ಯ ಕಾರ್ಯಾಚರಣೆಯನ್ನು ನಡೆಸುವ ಕುರಿತ ಚಿತ್ರವಾಗಿದ್ದು, ನೈಜ ಘಟನೆಗಳನ್ನು ಆಧರಿಸಿದ ಚಿತ್ರ ಎಂದು ಹೇಳಿದ್ದಾರೆ.

ಈ ಸಿನೆಮಾವನ್ನು ಶಂತನು ಬಾಗ್ಚಿ ನಿರ್ದೇಶಿಸಿದ್ದು, ಆರ್.ಎಸ್.ವಿ.ಪಿ ಸಂಸ್ಥೆಯ ರೋನಿ ಸ್ಕ್ರೂವಾಲಾ ಮತ್ತು ಗಿಲ್ಟಿ ಬೈ ಅಸೋಸಿಯೇಷನ್ ಮೀಡಿಯಾದ ಅಮರ್ ಬುಟಾಲಾ ಮತ್ತು ಗರಿಮಾ ಮೆಹ್ತಾ ಅವರು ಸೇರಿ ಈ ಸಿನೆಮಾವನ್ನು ನಿರ್ಮಿಸಿದ್ದಾರೆ.

ಈ ಚಿತ್ರದ ಕಥೆಯನ್ನು ಪರ್ವೀಜ್ ಶೇಖ್, ಅಸೀಮ್ ಅರೋರಾ ಮತ್ತು ಸುಮಿತ್ ಬತೇಜಾ ಅವರು ಬರೆದಿದ್ದು, ಶರೀಬ್ ಹಶ್ಮಿ ಮತ್ತು ಕುಮುದ್ ಮಿಶ್ರಾ ಮತ್ತಿತರರು ಸಿನೆಮಾದಲ್ಲಿ ನಟಿಸಿದ್ದಾರೆ ಎಂದು ತಿಳಿದುಬಂದಿದೆ.

ಓದಿ : ರತ್ನಾನಿ ಕ್ಯಾಲೆಂಡರ್​​​​ ಶೂಟ್​​​​​​​​​​​​ಗೆ ಅನನ್ಯ ಪಾಂಡೆ ಸಾಥ್.. ಕುತೂಹಲ ಮೂಡಿಸಿದ ಶೂಟ್​​​​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.