ETV Bharat / sitara

ಭುವನ ಸುಂದರಿ ಪಟ್ಟ ಗೆದ್ದು ತವರಿಗೆ ಬಂದ ಮಿಸ್​ ಯುನಿವರ್ಸ್ 'ಸಂಧು'... ಅದ್ಧೂರಿ ಸ್ವಾಗತ

author img

By

Published : Dec 15, 2021, 11:43 PM IST

21 ವರ್ಷಗಳ ಬಳಿಕ ಭಾರತದ ರೂಪದರ್ಶಿ ಹರ್ನಾಜ್ ಕೌರ್ ಸಂಧು 2021ರ ಭುವನ ಸುಂದರಿ ಪಟ್ಟವನ್ನು ಅಲಂಕರಿಸಿದ್ದು, ಇದೀಗ ತವರಿಗೆ ವಾಪಸ್​ ಆಗಿದ್ದಾರೆ.

Miss Universe 2021 winner Harnaaz Kaur
Miss Universe 2021 winner Harnaaz Kaur

ಮುಂಬೈ(ಮಹಾರಾಷ್ಟ್ರ): 70ನೇ ಆವೃತ್ತಿಯ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್​​ ಕೌರ್​ ಸಂಧು 'ಮಿಸ್​​ ಯೂನಿವರ್ಸ್'​ ಕಿರೀಟ್​ ಅಲಂಕರಿಸಿದ್ದು, ಭಾರತಕ್ಕೆ ಬರೋಬ್ಬರಿ 21 ವರ್ಷಗಳ ಬಳಿಕ ಈ ಪ್ರಶಸ್ತಿ ತಂದುಕೊಟ್ಟಿದ್ದಾರೆ.

ಇಸ್ರೇಲ್​​ನಲ್ಲಿ ಡಿಸೆಂಬರ್​ 12ರಂದು ನಡೆದ ಸ್ಪರ್ಧೆಯಲ್ಲಿ ಚಂಡೀಗಢ ಮೂಲಕ 21 ವರ್ಷದ ಮಾಡೆಲ್​​ ಹರ್ನಾಜ್ ಭುವನ ಸುಂದರಿಯಾಗಿ ಹೊರಹೊಮ್ಮಿದ್ದು, ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

ಭುವನ ಸುಂದರಿ ಪಟ್ಟ ಗೆದ್ದು ತವರಿಗೆ ಬಂದ ಮಿಸ್​ ಯುನಿವರ್ಸ್ 'ಸಂಧು'

ಭಾರತಕ್ಕೆ ಬಂದ ಭುವನ ಸುಂದರಿ

ಮಿಸ್​ ಯೂನಿವರ್ಸ್​ ಆಗಿ ಹೊರಹೊಮ್ಮಿರುವ ಹರ್ನಾಜ್​ ಕೌರ್​ ಸಂಧು ಇಂದು ಮುಂಬೈ ಏರ್​ಪೋರ್ಟ್​​ಗೆ ಆಗಮಿಸಿದರು. ಈ ವೇಳೆ ಅಭಿಮಾನಿಗಳು, ಕುಟುಂಬದ ಸದಸ್ಯರು ಅದ್ಧೂರಿಯಾಗಿ ಅವರನ್ನ ಬರಮಾಡಿಕೊಂಡರು. ಈ ವೇಳೆ ಭಾರತದ ತ್ರಿವರ್ಣ ಧ್ವಜ ನೀಡಿ, ಸ್ವಾಗತ ಮಾಡಿಕೊಳ್ಳಲಾಯಿತು. ಜೊತೆಗೆ ಇಂಡಿಯಾ... ಇಂಡಿಯಾ ಎಂಬ ಘೋಷಣೆ ಕೇಳಿ ಬಂದವು.

ಇದನ್ನೂ ಓದಿರಿ: ನಾಯಕತ್ವ ಬದಲಾವಣೆ ವಿಚಾರದಲ್ಲಿ ಗಂಗೂಲಿ ಹೇಳಿದ್ದೆಲ್ಲಾ ಸುಳ್ಳಾ?.. ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಹೇಳಿದ್ದೇನು?

ಇಸ್ರೇಲ್​​ನಲ್ಲಿ ನಡೆದ ವಿಶ್ವ ಭುವನ ಸುಂದರಿ ಸ್ಪರ್ಧೆಯಲ್ಲಿ ಒಟ್ಟು 79 ಸ್ಪರ್ಧಾಳುಗಳು ಭಾಗಿಯಾಗಿದ್ದರು. ಇವರನ್ನೆಲ್ಲ ಹಿಂದಿಕ್ಕಿ ಹರ್ನಾಜ್​​ ಕೌರ್​ ಸಂಧು ಕಿರೀಟ ಅಲಂಕಾರ ಮಾಡಿದ್ದಾರೆ. ಜೊತೆಗೆ ಸುಶ್ಮಿತಾ ಸೇನ್​ ಹಾಗೂ ಲಾರಾ ದತ್ತ ಬಳಿಕ ಭಾರತಕ್ಕೆ ಈ ಗೌರವ ತಂದುಕೊಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.