ETV Bharat / sitara

ಬಣ್ಣದ ಲೋಕಕ್ಕೆ ರಾಜಕಾರಣಿ ಮಕ್ಕಳು... ಚಂದನವನಕ್ಕೆ ಬರ್ತಿದ್ದಾನೆ ರಾಜ್ಯ ಸಚಿವರ ಪುತ್ರ - undefined

ಸಚಿವ ಜಮೀರ್ ಅಹಮದ್ ಪುತ್ರ ಜಯಿದ್ ಖಾನ್ ಚಂದನವನಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಬಣ್ಣದ ಲೋಕಕ್ಕೆ ಪುತ್ರನ ಪರಿಚಯ ಮಾಡೋಕೆ ಜಮೀರ್​ ಮುಂದಾಗಿದ್ದಾರೆ.

ಜಮೀರ್ ಅಹಮದ್ ಅವರ ಪುತ್ರ ಜಯಿದ್ ಖಾನ್
author img

By

Published : Apr 20, 2019, 5:53 PM IST

ರಾಜಕಾರಣಿಗಳ ಮಕ್ಕಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವುದು ಹೊಸದೇನಲ್ಲ. ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್​​, ಮಾಜಿ ಸಚಿವ ಹೆಚ್​.ಎಂ.ರೇವಣ್ಣ, ನಟ ಹಾಗೂ ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ ಕೂಡ ಬಣ್ಣದ ಅಂಗಳಕ್ಕೆ ಬಂದಾಗಿದೆ.

ಈಗ ಸಚಿವ ಜಮೀರ್ ಅಹಮದ್ ಅವರ ಪುತ್ರ ಜಯಿದ್ ಖಾನ್ ತೆರೆಯ ಮೇಲೆ ನಾಯಕನಾಗೋಕೆ ರೆಡಿಯಾಗ್ತಿದ್ದಾರೆ. ಜಯಿದ್​ ಅಭಿನಯಕ್ಕೆ ಬೇಕಾದ ಎಲ್ಲಾ ತಯಾರಿ ಮಾಡಿದ್ದಾರೆ. ಅಮೆರಿಕಾದಲ್ಲಿ ನಟನೆಯ ಕೋರ್ಸ್ ಮುಗಿಸಿ ಬಂದಿದ್ದು, ಭರ್ಜರಿಯಾಗಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಪ್ರತಿಭೆಯನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುವ ಜವಾಬ್ದಾರಿ ನಿರ್ದೇಶಕ ಜಯತೀರ್ಥ ಅವರಿಗೆ ನೀಡಿದ್ದಾರೆ .

Jayid Khan
ಜಯಿದ್ ಖಾನ್

ಈಗಾಗಲೇ ಜಮೀರ್ ಹಾಗೂ ಜಯತೀರ್ಥ ಈ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಜಯಿದ್​ಗೆ ಕಥೆ ಬರೆಯೋದಕ್ಕೆ ರೆಡಿಯಾಗ್ತಿರುವುದಾಗಿ ಜಯತೀರ್ಥ 'ಈಟಿವಿ ಭಾರತ್​​'ಗೆ ತಿಳಿಸಿದ್ದಾರೆ. ಹೊಸ ರೀತಿಯ ಕಥೆ ಮಾಡಲು ಪ್ಲ್ಯಾನ್​ ಮಾಡ್ತಿದ್ವಿ. ಈ ಕಥೆ ಜಮೀರ್ ಅಹಮದ್ ಅವರಿಗೆ ಇಷ್ಟವಾದ್ರೆ ಖಂಡಿತಾ ಜಯಿದ್ ಅವರ ಚೊಚ್ಚಲ ಚಿತ್ರ ನಾನೇ ನಿರ್ದೇಶನ ಮಾಡ್ತೀನಿ ಎಂದಿದ್ದಾರೆ ಜಯತೀರ್ಥ.

Jayid Khan
ಜಯಿದ್ ಖಾನ್

ಜಯತೀರ್ಥ ಸ್ಯಾಂಡಲ್​​ವುಡ್ ಯಶಸ್ವಿ ನಿರ್ದೇಶಕ. ಇತ್ತೀಚಿಗಷ್ಟೆ ಅವರ ನಿರ್ದೇಶನದ 'ಬೆಲ್ ಬಾಟಂ' ಚಿತ್ರ ಯಶಸ್ವಿಯಾಗಿ ಐವತ್ತು ದಿನ ಪೂರೈಸಿದೆ.

ಸಚಿವ ಜಮೀರ್ ಅಹಮದ್ ಪುತ್ರನ ಜೊತೆ ಗಾಂಧಿನಗರಕ್ಕೆ ಬರ್ತಾರ ನಿರ್ದೇಶಕ ಜಯತೀರ್ಥ...????

ಸಿನಿಮಾ ರಂಗಕ್ಕೂ ರಾಜಕೀಯಕ್ಕೂ ಅವಿನವಭಾವ ಸಂಭದವಿದೆ.ಅಲ್ಲದೆ ರಾಜಕಾರಣಿಗಳು ಸಿನಿಮಾ ರಂಗಕ್ಕೆ ಎಂಟ್ರಿ ಕೊಡೋದು ಹೊಸದೇನಲ್ಲ. ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಪುತ್ರ ಸಿನಿಮಾದಲ್ಲಿ ಬಣ್ಣ ಹಂಚಿ ನಂತರ ರಾಜಕೀಯಕ್ಕೆ ಎಂಟ್ರಿ ಕೊಟ್ಟರು.ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಮಗ ದಿ.ರಾಕೇಶ್ ಕೂಡ ಸಿನಿಮಾದಲ್ಲಿ ನಟಿಸಿದ್ರು ಅದ್ರೆ ಕಾರಣಂತರದಿಂದ ಅ ಸಿನಿಮಾ ರಿಲೀಸ್ ಆಗಲಿಲ್ಲ.ಇವರಷ್ಟೆ ಅಲ್ಲದೆ ಮಾಜಿ ಸಚಿವ ಎಚ್ ಎಮ್ ರೇವಣ ,ಚಲುವರಾಯಸ್ವಾಮಿ,ಹಾಗೂ ನಟ ರಾಜಕಾರಣಿ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮಗ ಅಭಿಷೇಕ್ಕೂ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಾಗಿದೆ.ಈಗ ಇವರ ಲಿಸ್ಟ್ ಗೆ ಮೈತ್ರಿ ಸರ್ಕಾರದ ಮಂತ್ರಿ ಜಮೀರ್ ಅಹಮದ್ ಅವರ ಪುತ್ರ ಜಯಿದ್ ಖಾನ್ ಸೇರೋಕೆ ರೆಡಿಯಾಗ್ತಿದ್ದಾರೆ.ಎಸ್ ಕಾಂಗ್ರೆಸ್ ನಾಯಕ ಸಚಿವ ಜಮೀರ್ ಅಹಮದ್ ತನ್ನ ಮಗನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸೋಕೆ ಪ್ಲಾನ್ ಮಾಡಿದ್ದಾರೆ.ಅಲ್ಲದೆ ಮಗ ಜಯಿದ್ ಸಿನಿಮಾಗೆ ಬೇಕಾದ ಎಲ್ಲಾ ರೀತಿಯಲ್ಲಿ ತಯಾರಿ ಮಾಡಿದ್ದಾರೆ.ಎಸ್ ಜಯಿದ್ ಈಗಾಗಲೇ ಅಮೇರಿಕದಲ್ಲಿ ಆಕ್ಟಿಂಗ್ ಕೋರ್ಸ್ ಮುಗಿಸಿ ಬಂದಿದ್ದು ಭರ್ಜರಿಯಾಗಿ ಫೋಟೋ ಶೂಟ್ ಮಾಡಿಸಿದ್ದಾರೆ.ಇನ್ನೂ ಜಮೀರ್ ತನ್ನ ಮಗ ಜಯಿದ್ ನನ್ನು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಿಸುವ ಜವಾಬ್ದಾರಿಯನ್ನು ನಿರ್ದೇಶಕ ಜಯತೀರ್ಥ ಅವರಿಗೆ ನೀಡಿದ್ದಾರೆ .ಈಗಾಗಲೇ ಜಮೀರ್ ಹಾಗೂ ಜಯತೀರ್ಥ ಈ ವಿಚಾರವಾಗಿ ಮಾತುಕಥೆ ನಡೆದಿದ್ದೆ. ಇನ್ನೂ ನಿರ್ದೇಶಕ ಜಯತೀರ್ಥ ಜಮೀರ್ ಪುತ್ರ ಜಯಿದ್ ಖಾನ್ ಗಾಗಿ ಕಥೆ ರೆಡಿಮಾಡೋಕೆ ರೆಡಿಯಾಗ್ತಿರುವುದಾಗಿ ನಿರ್ದೇಶಕ ಜಯತೀರ್ಥ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ. ಜಯಿದ್ ಗಾಗಿ ಹೊಸ ರೀತಿಯ ಕಥೆ ಮಾಡಲು ಪ್ಲಾನ್ ಮಾಡ್ತಿದ್ದೀನಿ ಆ ಕಥೆ ಏನಾದ್ರು ಜಮೀರ್ ಅಹಮದ್ ಅವರಿಗರ ಇಷ್ಟವಾದ್ರೆ ಖಂಡಿತಾ ಜಯಿದ್ ಅವರ ಡೆಬ್ಯೂ ಸಿನಿಮಾವನ್ನು ನಾನೇ ನಿರ್ದೇಶನ ಮಾಡ್ತೀನಿ ಎಂದು ಜಯತೀರ್ಥ ತಿಳಿಸಿದ್ದಾರೆ.ಇನ್ನೂ ಜಯತೀರ್ಥ ಸ್ಯಾಂಡಲ್ ವುಡ್ ಯಶಸ್ವಿ ನಿರ್ದೇಶಕರಾಗಿದ್ದು ಸದ್ಯ ಅವರ ನಿರ್ದೇಶನದ ಬೆಲ್ ಬಾಟಂ ಚಿತ್ರ ಯಶಸ್ವಿ ಐವತ್ತು ದಿನಗಳ ಪೂರೈಸಿದ್ದು ನೂರು ದಿನಗಳತ್ತ ದಾಪುಗಾಲಿಟ್ಟಿದೆ.ಅಲ್ಲದೆ ಇದುವರೆಗೂ ಜಯತೀರ್ಥ ಅವರ ಮುಂದಿನ ಸಿನಿಮಾ ಯಾವುದು ಎಂದು ಎಲ್ಲೂ ಅನೌನ್ಸ್ ಮಾಡಿಲ್ಲ‌.ಇದನ್ನೇಲ್ಲ ಗಮನಿಸಿದ್ರೆ‌ ಶೀಘ್ರದಲ್ಲೇ ಜಯತೀರ್ಥ ಜಯಿದ್ ಜೊತೆ ಗಾಂಧಿನಗರಕ್ಕೆ ಬರೋದು ಪಕ್ಕಾ ಅನ್ನಿಸ್ತಿದೆ.

ಸತೀಶ ಎಂಬಿ 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.