ಸೂಪರ್ ಸ್ಟಾರ್ ಮಹೇಶ್ ಬಾಬು ಹಾಗೂ ರಶ್ಮಿಕಾ ಮಂದಣ್ಣ ಈ ವರ್ಷದ ಆರಂಭದಲ್ಲಿ 'ಸರಿಲೇರು ನೀಕೆವ್ವರು' ಚಿತ್ರದ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ಈ ಚಿತ್ರದಲ್ಲಿ ರಶ್ಮಿಕಾ ಹೇಳುವ ಡೈಲಾಗ್ಗಳು ಕೂಡಾ ಬಹಳ ಫೇಮಸ್ ಆಗಿತ್ತು.
- " class="align-text-top noRightClick twitterSection" data="">
'ಸರಿಲೇರು ನೀಕೆವ್ವರು' ಚಿತ್ರದ ' ಹಿ ಸೋ ಸ್ವೀಟ್..ಹಿ ಸೋ ಕ್ಯೂಟ್' ಹಾಡು ಕೂಡಾ ಎಲ್ಲರಿಗೂ ಬಹಳ ಇಷ್ಟವಾಗಿತ್ತು. ಇದೀಗ ಮೈಂಡ್ ಬ್ಲಾಕ್ ಹಾಡು ಯೂಟ್ಯೂಬ್ನಲ್ಲಿ 55 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಅನಿಲ್ ರಾವಿಪೂಡಿ ಈ ಚಿತ್ರದ ನಿರ್ದೇಶಕರು. ಶ್ರೀಮಣಿ ಹಾಗೂ ದೇವಿಶ್ರೀ ಪ್ರಸಾದ್ ಬರೆದ ಮೈಂಡ್ ಬ್ಲಾಕ್ ಹಾಡಿಗೆ ಮಹೇಶ್ ಬಾಬು ಹಾಗೂ ರಶ್ಮಿಕಾ ಸಖತ್ ಹೆಜ್ಜೆ ಹಾಕಿದ್ದಾರೆ. ದೇವಿಶ್ರೀ ಸಂಗೀತ ನಿರ್ದೇಶನದ ಈ ಹಾಡಿಗೆ ಶೇಖರ್ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದಾರೆ.
ರಶ್ಮಿಕಾ ಡ್ಯಾನ್ಸ್ ನೋಡಿ ಹುಡುಗರು ಫಿದಾ ಆಗಿರುವುದಂತೂ ನಿಜ. ' ಎಪುಡು ಪ್ಯಾಂಟ್ ವೇಸೆವಾಡು' ಎಂಬ ಸಾಲಿನಿಂದ ಆರಂಭವಾಗುವ ಈ ಹಾಡನ್ನು ಬ್ಲೇಜ್ ಹಾಗೂ ರಾನಿನಾ ರೆಡ್ಡಿ ಹಾಡಿದ್ದಾರೆ. ವೆಂಕಟೇಶ್ವರ ಸಿನಿ ಕ್ರಿಯೇಷನ್ಸ್ , ಜಿಎಮ್ಬಿ ಎಂಟರ್ಟೈನ್ಮೆಂಟ್, ಎಕೆ ಎಂಟರ್ಟೈನ್ಮೆಂಟ್ ಜೊತೆ ಸೇರಿ ಚಿತ್ರವನ್ನು ನಿರ್ಮಿಸಿವೆ. ಚಿತ್ರದಲ್ಲಿ ವಿಜಯಶಾಂತಿ, ರಾಜೇಂದ್ರ ಪ್ರಸಾದ್, ಪ್ರಕಾಶ್ ರಾಜ್, ರಾವು ರಮೇಷ್, ವೆನ್ನೆಲ ಕಿಶೋರ್, ಹರಿತೇಜ, ಸಂಗೀತ ಹಾಗೂ ಇನ್ನಿತರರು ನಟಿಸಿದ್ದಾರೆ. ಜನವರಿ 11 ರಂದು ಬಿಡುಗಡೆಯಾಗಿದ್ದ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭಾರೀ ವಸೂಲಿ ಮಾಡಿತ್ತು.