ETV Bharat / sitara

MeToo ಕೇಸ್​ನಲ್ಲಿ ಅರ್ಜುನ್ ಸರ್ಜಾಗೆ ಬಿಗ್ ರಿಲೀಫ್​... ಪೊಲೀಸರಿಂದ ಬಿ ರಿಪೋರ್ಟ್​ ಸಲ್ಲಿಕೆ - ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ

ಕಳೆದ ಮೂರು ವರ್ಷದ ಹಿಂದೆ ನಟಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ದೂರು ನೀಡಿದ್ದರು. ವಿಸ್ಮಯ ಸಿನಿಮಾದ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು 2018ರಲ್ಲಿ ಶ್ರುತಿ ಹರಿಹರನ್ ಆರೋಪಿಸಿದ್ದರು..

Arjun Sarja and Sruthi Hariharan
ನಟ ಅರ್ಜುನ್ ಸರ್ಜಾ ಹಾಗೂ ನಟಿ ಶ್ರುತಿ ಹರಿಹರನ್
author img

By

Published : Nov 30, 2021, 3:51 PM IST

Updated : Nov 30, 2021, 4:02 PM IST

ಬೆಂಗಳೂರು : ಕಳೆದ‌ ಮೂರು ವರ್ಷಗಳ ಹಿಂದೆ ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ಕೇಳಿ ಬಂದಿದ್ದ ಮೀಟೂ ಆರೋಪದಲ್ಲಿ ನಟಿ ಶ್ರುತಿ ಹರಿಹರನ್​ಗೆ ಹಿನ್ನಡೆಯಾಗಿದೆ.

ನಟಿ ನೀಡಿದ ದೂರಿನ ಅನ್ವಯ ತನಿಖೆ ನಡೆಸಿದ್ದ ಕಬ್ಬನ್ ಪಾರ್ಕ್​ ಪೊಲೀಸರು, ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆ ನ್ಯಾಯಾಲಯಕ್ಕೆ ಬಿ ರಿಪೋರ್ಟ್​ ಸಲ್ಲಿಸಿದ್ದಾರೆ.

ಕಳೆದ ಮೂರು ವರ್ಷದ ಹಿಂದೆ ನಟಿ ಶ್ರುತಿ ಹರಿಹರನ್ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ ದೂರು ನೀಡಿದ್ದರು. ವಿಸ್ಮಯ ಸಿನಿಮಾದ ಚಿತ್ರೀಕರಣ ವೇಳೆ ಅರ್ಜುನ್ ಸರ್ಜಾ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು 2018ರಲ್ಲಿ ಶ್ರುತಿ ಹರಿಹರನ್ ಆರೋಪಿಸಿದ್ದರು.

ಬಳಿಕ ತನಿಖೆ ಕೈಗೆತ್ತಿಕೊಂಡ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ವಿಸ್ಮಯ ಚಿತ್ರದ ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕರನ್ನು ಸಾಕ್ಷಿಯಾಗಿ ಹೇಳಿಕೆ ಪಡೆಯಲಾಗಿತ್ತು.

ಆದರೆ, ಅರ್ಜುನ್ ಸರ್ಜಾ ಮೇಲಿನ ಆರೋಪಕ್ಕೆ ಸೂಕ್ತ ಸಾಕ್ಷಿಗಳು ಸಿಕ್ಕಿರಲಿಲ್ಲ. ಪೂರಕ ಸಾಕ್ಷಿ ಒದಗಿಸುವಲ್ಲಿ ಸ್ವತಃ ಶ್ರುತಿ ಹರಿಹರನ್ ಸಹ ವಿಫಲರಾಗಿದ್ದರು. ಪ್ರಕರಣ ದಾಖಲಾದ ಮೂರು ವರ್ಷದ ಬಳಿಕ ಶ್ರುತಿ ಹರಿಹರನ್​ಗೆ ಸಿಆರ್​​​ಪಿಸಿ 159ರ ಅಡಿ ಮತ್ತೆ ನೋಟಿಸ್ ನೀಡಲಾಗಿದೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಸಿನಿಮಾ ನೋಡಲು ಟಿಕೆಟ್ ಕೊಡಿಸದಿದ್ದಕ್ಕೆ ಅಪರಿಚಿತನಿಂದ ವ್ಯಕ್ತಿಗೆ ಚಾಕು ಇರಿತ

Last Updated : Nov 30, 2021, 4:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.